

ಘಾಜಿಯಾಬಾದ್: ವ್ಯಕ್ತಿಯನ್ನು ಕೊಂದು ಅತನ ತಲೆಬುರುಡೆಯನ್ನು ಮಾಟಮಾಂತ್ರಕ್ಕಾಗಿ(Black magic) ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಾಜಿಯಬಾದ್ ಪೊಲೀಸರು ನಾಲ್ವರನ್ನು ಭಾನುವಾರ ಬಂಧಿಸಿದ್ದಾರೆ.
ಬಿಹಾರ ಮೂಲದ ಆರೋಪಿಗಳಾದ ವಿಕಾಸ್ ಅಲಿಯಾಸ್ ಪರಮಾತ್ಮ, ನರೇಂದ್ರ, ಪವನ್ ಕುಮಾರ್ ಮತ್ತು ಪಂಕಜ್ ಎಂಬುವವರನ್ನು ಸೆರೆ ಹಿಡಿದಿದ್ದು, ಬಂಧಿತರಿಂದ ಒಂದು ತಲೆ ಬುರುಡೆ, ಕೃತ್ಯಕ್ಕೆ ಬಳಸಿದ ಹರಿತವಾದ ಆಯುಧಗಳು ಮತ್ತು ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ. ಬಿಹಾರದ ರಾಜು ಶಾ (ರಾಜಕುಮಾರ್) ಎಂಬ ವ್ಯಕ್ತಿಯನ್ನು ಕೊಂದು ಇತನ ತಲೆ ಬುರುಡೆ ಬಳಸಿಕೊಳ್ಳಲಾಗಿದೆ.
ನಾವು ಯುಟ್ಯೂಬ್ನಲ್ಲಿ ಮಾಟ ಮಂತ್ರಗಳನ್ನು ಕಲಿತ್ತಿದ್ದೇವೆ. ತಲೆ ಬುರುಡೆ ಪೂಜೆ ಮಾಡುವುದರಿಂದ 50 ರಿಂದ 60 ಕೋಟಿ ರೂ.ಗಳು ಗಳಿಸಬಹದು ಎಂದು ಇಬ್ಬರು ಯೂಟ್ಯೂಬ್ ಮಾಂತ್ರಿಕರ ಸೂಚನೆ ನಂಬಿದ ಇಬ್ಬರು ವ್ಯಕ್ತಿಯೊರ್ವನನ್ನು ಕೊಂದ ತಲೆಬುರುಡೆಯನ್ನು ತಂದು ಪೂಜೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ..
2004ರ ಜೂನ್ರಲ್ಲಿ ನಡೆದ ಪ್ರಕರಣ ಇದು. ಘಜಿಯಾಬಾದ್ ಪೊಲೀಸರು ಕಳೆದ ಕೆಲ ದಿನಗಳಿಂದೆ ರಸ್ತೆಯ ಪಕ್ಕದ ಚರಂಡಿಯಲ್ಲಿ ತಲೆ ಇಲ್ಲದ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ತನಿಖೆ ಆರಂಭಿಸಿದ್ದು, ಸಿಸಿಟಿವಿ ಪರಿಶೀಲನೆ ಬಳಿಕ ಇದೇ ಆಗಸ್ಟ್ನಲ್ಲಿ ಇಬ್ಬರು ಆರೋಪಿಗಳಾದ ವಿಕಾಸ್ ಗುಪ್ತ ಅಲಿಯಾಸ್ ಮೋಟಾ ಮತ್ತು ಧನಂಜಯ್ ಎಂಬುವವನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ವಿಕಾಸ್ ಅಲಿಯಾಸ್ ಪರಮಾತ್ಮ ಪ್ರಕರಣದ ಮಾಸ್ಟರ್ ಮೈಂಡ್ ಎಂದು ತಿಳಿದು ಬಂದಿದೆ. ಇತನೆ ಈ ಕೃತ್ಯಕ್ಕೆ ತಲೆ ಬುರುಡೆ ತರುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ಈ ಕಾರ್ಯಕ್ಕೆ 25 ಸಾವಿರ ರೂ. ಅಡ್ವಾನ್ಸ್ ಕೂಡ ನೀಡಿದ್ದನು ಎಂದು ತನಿಖೆ ವೇಳೆ ಗೊತ್ತಾಗಿದೆ.
ವಿಕಾಸ್ ಪರಮಾತ್ಮ ಸೂಚನೆ ಮೇರೆಗೆ ರಾಜು ಶಾ ಎಂಬ ವ್ಯಕ್ತಿಯನ್ನು ಕೊಲೆ ಮಾಡುವುದಾಗಿ ಧನಂಜಯ್, ವಿಕಾಸ್ ಗುಪ್ತ ಅಲಿಯಾಸ್ ಮೋಟಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಡಿ.7 ರಂದು ವಿಕಾಸ್ ಪರಮಾತ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಬಂಧಿತ ನರೇಂದ್ರ, ಪವನ್ ಮತ್ತು ಪಂಕಜ್ ಕೂಡ ಈ ಕೃತ್ಯಕ್ಕೆ ಸಹಾಯ ಮಾಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).