ಮನುಷ್ಯರಿಗೂ ಸ್ನಾನ ಮಾಡಿಸೋಕೆ ಬಂತು ಮೆಷಿನ್​​; 15 ನಿಮಿಷದಲ್ಲಿ ದೇಹ & ಮನಸ್ಸು ಎರಡೂ ಸ್ವಚ್ಛ | Washing Machine

Untitled design - 2024-12-08T151943.873
Published on

ಟೋಕಿಯೋ: ಜಪಾನಿನ ಇಂಜಿನಿಯರ್‌ಗಳು 'ಮಿರೈ ನಿಂಗೆನ್ ಸೆಂಟಾಕು' ಅಥವಾ 'ಹ್ಯೂಮನ್ ವಾಷಿಂಗ್ ಮೆಷಿನ್ ಆಫ್ ದಿ ಫ್ಯೂಚರ್'(Washing Machine) ಅನ್ನು ಅನಾವರಣಗೊಳಿಸಿದ್ದಾರೆ. ಇದು ಸಂಪೂರ್ಣ ದೇಹ ಮತ್ತು ಮನಸ್ಸನ್ನು ಶುದ್ಧಿಗೊಳಿಸುತ್ತದೆ. ಅದಕ್ಕಾಗಿಯೇ ಇದು AI ಮತ್ತು ಹೈಟೆಕ್ ವಾಟರ್ ಜೆಟ್‌ಗಳನ್ನು ಸಂಯೋಜಿಸುವ ಫ್ಯೂಚರಿಸ್ಟಿಕ್ ಸಾಧನವಾಗಿದೆ.

ಜಪಾನಿನ ಶವರ್ ಹೆಡ್ ಮೇಕರ್ ಸೈನ್ಸ್ ಕಂ. ಮುಂದಿನ ವರ್ಷದ ಆರಂಭದಲ್ಲಿ ಈ ದೈತ್ಯ ಮಾನವ ತೊಳೆಯುವ ಯಂತ್ರವನ್ನು ಹೊರತರುತ್ತಿದೆ. ಈ ಯಂತ್ರದ ಸಹಾಯದಿಂದ ಬಟ್ಟೆಯಂತೆ ಮನುಷ್ಯರನ್ನು ಕೂಡ ಬೇಗನೆ ಸ್ವಚ್ಛಗೊಳಿಸಬಹುದು. ಫೈಟರ್ ಜೆಟ್‌ನ ಪಾಡ್ ಅಥವಾ ಕಾಕ್‌ಪಿಟ್‌ನಂತೆ ಕಾಣುವ ಫ್ಯೂಚರಿಸ್ಟಿಕ್ ಯಂತ್ರವನ್ನು ಏಪ್ರಿಲ್ 2025ರಲ್ಲಿ ಪ್ರಾರಂಭವಾಗುವ ಜಪಾನ್‌ನ ಒಸಾಕಾ ಕನ್ಸೈ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುವುದು. ಅಲ್ಲಿ 1,000 ಅತಿಥಿಗಳು ಇದನ್ನು ಪ್ರಯತ್ನಿಸುತ್ತಾರೆ ಎಂದು ಜಪಾನಿನ ಪತ್ರಿಕೆ ಅಸಾಹಿ ಶಿಂಬುನ್‌ನಲ್ಲಿ ವರದಿಯಾಗಿದೆ.

ಈ ಯಂತ್ರದ ವಿಶೇಷತೆ ಏನೆಂದರೆ ಕೇವಲ 15 ನಿಮಿಷಗಳಲ್ಲಿ ವಾಶ್ ಮತ್ತು ಡ್ರೈ ಅನ್ನು ಪೂರ್ಣಗೊಳಿಸುತ್ತದೆ. ಅಂದರೆ ಅದು ಯಾವುದೇ ವ್ಯಕ್ತಿಯನ್ನು 15 ನಿಮಿಷಗಳಲ್ಲಿ ಸ್ನಾನ ಮಾಡಿಸಿ ಒಣಗಿಸುತ್ತದೆ. ಈ ವಿಭಿನ್ನ ವಾಷಿಂಗ್​ ಮೆಷಿನ್​​​​ ಮನುಷ್ಯರನ್ನು ದೈಹಿಕ ಮತ್ತು ಭಾವನಾತ್ಮಕವಾಗಿ ಅಂದರೆ ಮನಸ್ಸನ್ನು ಸ್ವಚ್ಛಗೊಳಿಸುತ್ತದೆ. ಅಗತ್ಯಗಳಿಗೆ ನಿಖರವಾಗಿ ಹೊಂದಿಕೊಳ್ಳಲು ಕೃತಕ ಬುದ್ಧಿಮತ್ತೆ ಮತ್ತು ಅಲ್ಟ್ರಾಸಾನಿಕ್ ತಂತ್ರಜ್ಞಾನವನ್ನು ಇದು ಹೊಂದಿದೆ.

ಜಪಾನಿನ ಸುದ್ದಿವಾಹಿನಿ ದಿ ಅಸಾಹಿ ಶಿಂಬುನ್ ಪ್ರಕಾರ, ಯಂತ್ರವು 1970ರ ಜಪಾನ್ ವರ್ಲ್ಡ್ ಎಕ್ಸ್‌ಪೊಸಿಷನ್‌ನಲ್ಲಿ ಪ್ರದರ್ಶಿಸಲಾದ ಇದೇ ರೀತಿಯ ಸಾಧನದಿಂದ ಪ್ರೇರಿತವಾಗಿದೆ. ಮೂಲ ತೊಳೆಯುವ ಯಂತ್ರವು ಬಿಸಿನೀರು ಮತ್ತು ಸೂಕ್ಷ್ಮ-ಬಬಲ್‌ಗಳನ್ನು ಬಳಸಿದೆ ಹಾಗೂ ಪ್ಲಾಸ್ಟಿಕ್ 'ಮಸಾಜ್ ಬಾಲ್‌ಗಳನ್ನು' ಒಳಗೊಂಡಿತ್ತು. ಸದ್ಯ ಈ ಹ್ಯೂಮನ್​ ವಾಷಿಂಗ್​ ಮೆಷಿನ್​​ ಎಂದಿಗೂ ವಾಣಿಜ್ಯಿಕವಾಗಿ ಬಿಡುಗಡೆಯಾಗಲಿಲ್ಲ. ಆದರೆ ವಿಶ್ವ ಪ್ರದರ್ಶನದಲ್ಲಿ ಅತ್ಯಾಕರ್ಷಕ ಹೊಸ ಯಂತ್ರವಾಗಿ ಎಲ್ಲರ ಗಮನವನ್ನು ಸೆಳೆಯಿತು. ಈ ಸಾಧನವು ಸಾರ್ವಜನಿಕ ಖರೀದಿಗೆ ಯಾವಾಗ ಲಭ್ಯವಿರಬಹುದು ಅಥವಾ ಎಷ್ಟು ವೆಚ್ಚವಾಗಬಹುದು ಎಂಬುದನ್ನು ಇನ್ನೂ ದೃಢಪಡಿಸಿಲ್ಲ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net