ಬಾಹ್ಯಾಕಾಶದಲ್ಲಿ ನೀರು ಕುಡಿಯುವುದೇಗೆ; ಸುನಿತಾ ವಿಲಿಯಮ್ಸ್​​ Demonstrate ಮಾಡಿರುವ ವಿಡಿಯೋ ನೋಡಿದ್ರೆ ಶಾಕ್​ ಆಗ್ತೀರಾ..

Untitled design - 2024-12-08T142948.959
Published on

ವಾಷಿಂಗ್ಟನ್​​ ಡಿಸಿ: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಜೂನ್‌ನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವುದು ಗೊತ್ತೆ ಇದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿರುವ ಅವರು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಸುನೀತಾ ವಿಲಿಯಮ್ಸ್​​​ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿಯೊಬ್ಬರು ಬಾಹ್ಯಾಕಾಶದಲ್ಲಿ ನೀರನ್ನು ಹೇಗೆ ಕುಡಿಯುತ್ತಾರೆ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸುನೀತಾ ಅವರ Demonstrate ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

ಸುನಿತಾ ವಿಲಿಯಮ್ಸ್ ಅವರನ್ನು ಒಬ್ಬ ವಿದ್ಯಾರ್ಥಿನಿಯು ನೀರು ಕುಡಿಯುವುದು ಹೇಗೆ ಕೇಳುತ್ತಾಳೆ. ಅದಕ್ಕೆ ಉತ್ತರಿಸಿದ ಸುನೀತಾ ನೀರು ಕುಡಿಯುವುದು ಹೇಗೆ ಎಂದು ಪ್ರಯೋಗಿಕವಾಗಿ ತೋರಿಸುತ್ತೇನೆ ಎಂದು ಹೇಳುತ್ತಾ ನೀರಿನ ಪ್ಯಾಕೆಟ್ ಅನ್ನು ತೆಗೆಯುತ್ತಾರೆ. ನಂತರ ಕೆಲವು ನೀರಿನ ಗುಳ್ಳೆಗಳು ಸ್ಟ್ರಾ ಮೂಲಕ ಹೊರಬರುತ್ತವೆ. ಗುರುತ್ವಾಕರ್ಷಣ ಬಲ ಇಲ್ಲದ ಕಾರಣ ನೀರಿನ ಗುಳ್ಳೆಗಳು ಹಾರಾಡುತ್ತದೆ. ಸುನಿತಾ ಆದನ್ನು ಹಾರಿ ಕುರಿಯುತ್ತಾರೆ.

ಸುನೀತಾ ಮತ್ತು ವಿಲ್ಮೋರ್ ಬುಚ್ ಇತ್ತೀಚೆಗೆ ತಮ್ಮ ಆರು ತಿಂಗಳ ಬಾಹ್ಯಾಕಾಶ ವಾಸವನ್ನು ಪೂರ್ಣಗೊಳಿಸಿದ್ದಾರೆ. ಇಬ್ಬರೂ ಜೂನ್ ಮೊದಲ ವಾರದಲ್ಲಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದರು. ತಾಂತ್ರಿಕ ಸಮಸ್ಯೆಗಳ ನಂತರ ಇಬ್ಬರೂ ಈಗ ಮುಂದಿನ ವರ್ಷ ಫೆಬ್ರವರಿವರೆಗೂ ಅಲ್ಲಿಯೆ ಇರಬೇಕಾಗುತ್ತದೆ.

ಸುನೀತಾ ಬಾಹ್ಯಾಕಾಶ ನಿಲ್ದಾಣದಲ್ಲಿ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲವೊಮ್ಮೆ ಅವರು ಶೌಚಗೃಹಗಳನ್ನು ಸ್ವಚ್ಛಗೊಳಿಸುತ್ತಾರೆ. ಮತ್ತೆ ಕೆಲವೊಮ್ಮೆ ಅವಳು ಕೃಷಿಕಳಾಗುತ್ತಾರೆ. ಇತ್ತೀಚೆಗೆ ಸುನೀತಾ ಅವರು ಬಾಹ್ಯಾಕಾಶದ ಮೈಕ್ರೋಗ್ರಾವಿಟಿಯಲ್ಲಿ ಲೆಟಿಸ್ ಬೆಳೆದಿದ್ದಾರೆ. ಈ ಮೂಲಕ ಮೈಕ್ರೋಗ್ರಾವಿಟಿಯಲ್ಲಿ ವಿವಿಧ ಪ್ರಮಾಣದ ನೀರಿನಲ್ಲಿ ತರಕಾರಿಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಇತ್ತೀಚೆಗೆ ಸುನೀತಾ ಅವರ ಚಿತ್ರವೊಂದು ಸಂಚಲನ ಮೂಡಿಸಿತ್ತು. ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ವೈರಲ್​​ ಫೋಟೋದಲ್ಲಿ ಸುನೀತಾ ತುಂಬಾ ದುರ್ಬಲವಾಗಿ ಕಾಣುತ್ತಿದ್ದರು. ಕೆನ್ನೆ ಕೆಂಪಾಗಿ ದೇಹವೂ ತೆಳ್ಳಗೆ ಕಾಣುತ್ತಿತ್ತು. ನಾಸಾದಿಂದ ಪ್ರಪಂಚದಾದ್ಯಂತದ ವಿಜ್ಞಾನಿಗಳು ಇದನ್ನು ಕಂಡು ಆಶ್ಚರ್ಯಚಕಿತರಾದರು. ಆದರೆ, ಬಾಹ್ಯಾಕಾಶಕ್ಕೆ ಹೋಗುವ ಸಮಯದಲ್ಲಿ ಅವರ ತೂಕವು ಒಂದೇ ಆಗಿದ್ದು, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಸುನೀತಾ ನಂತರ ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net