ವಾಷಿಂಗ್ಟನ್ ಡಿಸಿ: ಡೊನಾಲ್ಡ್ ಟ್ರಂಪ್(Donald Trump) ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಗೊತ್ತೆ ಇದೆ. ಸದ್ಯ ಅವರ ಕಾರ್ಯವೈಖರಿ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಡೊನಾಲ್ಡ್ ಟ್ರಂಪ್ ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೂ ಮುನ್ನ ಟ್ರಂಪ್ಗೆ ವರ್ಷದ ದೇಶಪ್ರೇಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನು ಓದಿ: ದಕ್ಷಿಣ ಕೊರಿಯಾದಲ್ಲಿ ಮಾರ್ಷಲ್ ಕಾನೂನು ಹೇರಿಕೆ; ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಅಧ್ಯಕ್ಷ ಯೂನ್ ಸುಕ್-ಯೋಲ್ | South Korea
ಸ್ಟ್ರೀಮಿಂಗ್ ಸೇವೆ ‘ಫಾಕ್ಸ್ ನೇಷನ್’ ಆಯೋಜಿಸಿದ ಲಾಂಗ್ ಐಲ್ಯಾಂಡ್ ಸಮಾರಂಭದಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ‘ವರ್ಷದ ದೇಶಪ್ರೇಮಿ’ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿಯನ್ನು ಅಮೆರಿಕದ ಧ್ವಜವನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಈ ಪ್ರಶಸ್ತಿಯನ್ನು ಶ್ರೇಷ್ಠ ದೇಶಭಕ್ತರಿಗೆ ನೀಡಲಾಗುತ್ತದೆ. ಟ್ರಂಪ್ ಅವರ ಅಪ್ರತಿಮ ದೇಶಭಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
The ‘Patriot of the Year’ arrives for the Fox Nation Patriot Awards in New York! 🔥🇺🇸 pic.twitter.com/QrvAzp0j4F
— Trump War Room (@TrumpWarRoom) December 6, 2024
ಪೇಟ್ರಿಯಾಟ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಟ್ರಂಪ್, ಇದೊಂದು ಅದ್ಭುತ ದಿನ ಮತ್ತುಅವಧಿಯಾಗಿದೆ. ಫಾಕ್ಸ್‌ನಲ್ಲಿ ಕೆಲಸ ಮಾಡುವ ಜನರು ಅದ್ಭುತರಾಗಿದ್ದಾರೆ ಎಂದು ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ ನೀವು ನೋಡಿದಕ್ಕಿಂತ ಕಳೆದ ಎರಡು ವಾರಗಳಲ್ಲಿ ನೀವು ಹೆಚ್ಚಿನದನ್ನು ನೋಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಾವು ಅದ್ಭುತ ಚುನಾವಣೆಯನ್ನು ಹೊಂದಿದ್ದೇವೆ. ಚುನಾವಣೆ ಫಲಿತಾಂಶದ ದಿನ ಅದ್ಭುತವಾಗಿತ್ತು. ನಾವು ಇನ್ನೂ ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಲಿದ್ದೇವೆ ಎಂದು ಹೇಳಿದರು.(ಏಜೆನ್ಸೀಸ್)