ಸಿಯೋಲ್: ದಕ್ಷಿಣ ಕೊರಿಯಾದ(South Korea) ಅಧ್ಯಕ್ಷ ಯೂನ್ ಸುಕ್-ಯೋಲ್ ತುರ್ತು ಮಿಲಿಟರಿ ಕಾನೂನನ್ನು (ಸಮರ ಕಾನೂನು) ಹೇರುವುದಾಗಿ ಮಂಗಳವಾರ(ಡಿಸೆಂಬರ್ 3) ಘೋಷಿಸಿದರು. ದೇಶದ ಪ್ರತಿಪಕ್ಷಗಳು ಸಂಸತ್ತನ್ನು ನಿಯಂತ್ರಿಸುತ್ತಿವೆ ಹಾಗೂ ಉತ್ತರ ಕೊರಿಯಾದ ಬಗ್ಗೆ ಸಹಾನುಭೂತಿ ತೋರುತ್ತಿವೆ. ರಾಜ್ಯ ವಿರೋಧಿ ಚಟುವಟಿಕೆಗಳ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿವೆ ಎಂದು ಅವರು ಆರೋಪಿಸಿದರು.
ಅಧ್ಯಕ್ಷ ಯೂನ್ ದೂರದರ್ಶನ ಕಾರ್ಯಕ್ರಮದ ಮೂಲಕ ಈ ಘೋಷಣೆ ಮಾಡಿದರು. ದೇಶದ ಸಂವಿಧಾನ ಮತ್ತು ಕಾನೂನನ್ನು ಉಳಿಸಲು ಈ ಹೆಜ್ಜೆ ಅಗತ್ಯ. ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳು ಒಡ್ಡುವ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ದೇಶ ವಿರೋಧಿ ಅಂಶಗಳನ್ನು ತೊಡೆದುಹಾಕಲು ನಾನು ತುರ್ತು ಸಮರ ಕಾನೂನನ್ನು ಘೋಷಿಸುತ್ತಿದ್ದೇನೆ ಎಂದು ಹೇಳಿದರು. ದೇಶದ ಸ್ವತಂತ್ರ ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ರಕ್ಷಿಸುವುದು ಅಗತ್ಯ ಎಂದು ಅವರು ಕರೆ ನೀಡಿದರು.
ಮುಂದಿನ ವರ್ಷದ ಬಜೆಟ್‌ನಲ್ಲಿ ಯೂನ್ನ ಪೀಪಲ್ಸ್ ಪವರ್ ಪಾರ್ಟಿ ಮತ್ತು ವಿರೋಧ ಪಕ್ಷ ಡೆಮಾಕ್ರಟಿಕ್ ಪಾರ್ಟಿ ನಡುವೆ ನಡೆಯುತ್ತಿರುವ ವಿವಾದಗಳ ನಂತರ ಈ ಘೋಷಣೆ ಬಂದಿದೆ. ಆದರೆ ಈ ನಿರ್ಧಾರವು ದೇಶದ ಸರ್ಕಾರ ಮತ್ತು ಪ್ರಜಾಪ್ರಭುತ್ವದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಯೂನ್ 2022 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ತೀವ್ರ ವಿರೋಧದಿಂದಾಗಿ ಅವರು ತಮ್ಮ ನೀತಿಗಳನ್ನು ಕಾರ್ಯಗತಗೊಳಿಸಲು ತೊಂದರೆಗಳನ್ನು ಎದುರಿಸುತ್ತಿದ್ದರು.
ಅಧ್ಯಕ್ಷ ಯೂನ್ ಸುಕ್-ಯೋಲ್ ಅವರ ಪೀಪಲ್ ಪವರ್ ಪಾರ್ಟಿ ಮತ್ತು ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷವು ಮುಂದಿನ ವರ್ಷದ ಬಜೆಟ್ ಮಸೂದೆಯಲ್ಲಿ ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕಾರಣ ಈ ಘೋಷಣೆ ಬಂದಿದೆ. ಹೆಚ್ಚುವರಿಯಾಗಿ ಯೂನ್ ತನ್ನ ಪತ್ನಿ ಮತ್ತು ಕೆಲವು ಉನ್ನತ ಅಧಿಕಾರಿಗಳನ್ನು ಒಳಗೊಂಡಿರುವ ಆಪಾದಿತ ಹಗರಣಗಳ ಬಗ್ಗೆ ಸ್ವತಂತ್ರ ತನಿಖೆಯ ಬೇಡಿಕೆಗಳನ್ನು ತಿರಸ್ಕರಿಸಿದರು. ಅವರ ವಿರೋಧಿಗಳಿಂದ ತೀವ್ರ ಟೀಕೆಗಳನ್ನು ಪಡೆದರು. ವರದಿಯ ಪ್ರಕಾರ, ಯೂನ್ ಅವರ ಘೋಷಣೆಯ ನಂತರ ಡೆಮಾಕ್ರಟಿಕ್ ಪಕ್ಷವು ತನ್ನ ಶಾಸಕರ ತುರ್ತು ಸಭೆಯನ್ನು ಕರೆದಿದೆ. (ಏಜೆನ್ಸೀಸ್)
ಬಾಂಗ್ಲಾಕ್ಕೆ ಶಾಂತಿಪಾಲನಾ ಪಡೆ ಕಳುಹಿಸಬೇಕು; UN ಸಹಾಯ ಕೋರುವಂತೆ ಕೇಂದ್ರಕ್ಕೆ Mamata Banerjee ಮನವಿ