

ಚೆನ್ನೈ: ಮಳೆ ಬಂತೆಂದರೆ ಸಾಕು ಅಜ್ಜ ಮತ್ತು ಅಜ್ಜಿ ಮೊಮ್ಮಕಳಿಗೆ ಹೊರಗಡೆ ಹೋಗಬೇಡಿ. ಶೀತ, ಜ್ವರ, ಕೆಮ್ಮು ಬರುತ್ತದೆಂದು ಹೇಳುತ್ತಾರೆ. ಇದಕ್ಕೆ ವಿರುದ್ಧವಾದ ವಿಡಿಯೋವೊಂದು(Video) ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅಜ್ಜ ಮೊಮ್ಮಕಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದಾರೆ. ಈ ವಿಡಿಯೋ ಚೆನ್ನೈನಿಂದ ಬಂದಿದೆ ಎಂದ ಹೇಳಲಾಗುತ್ತಿದೆ. ಪ್ರಸ್ತುತ ಫೆಂಗಲ್ ಚಂಡಮಾರುತದಿಂದ ಚೆನ್ನೈನಲ್ಲಿ ಧಾರಾಕಾರ ಮಳೆ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಭಾರೀ ಮಳೆಯಿಂದಾಗಿ ಮನೆಯ ಆವರಣವು ನೀರಿನಿಂದ ತುಂಬಿರುವುದನ್ನು ಕಾಣಬಹುದು. ಅಂತಹ ಪರಿಸ್ಥಿತಿಯಲ್ಲಿ ಅಜ್ಜ ತನ್ನ ಮೊಮ್ಮಕ್ಕಳೊಂದಿಗೆ ಮೋಜಿನ ಆಟವನ್ನು ಪ್ರಾರಂಭಿಸಿದ್ದಾರೆ. ಅವರು ಗಾಳಿ ತುಂಬಬಹುದಾದ ರಬ್ಬರ್ ದೋಣಿಯನ್ನು ವಿದ್ಯುತ್ ಸ್ಕೂಟರ್‌ಗೆ ಹಗ್ಗದಿಂದ ಕಟ್ಟಿರುವುದನ್ನು ನೋಡಬಹುದು.
ದೋಣಿಯಲ್ಲಿ ಮಕ್ಕಳನ್ನು ಕೂರಿಸಲಾಗಿದೆ. ಅಜ್ಜ ಸ್ಕೂಟರ್ ಅನ್ನು ಚಲಾಯಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ದೋಣಿ ಸ್ಕೂಟರ್ ಅನ್ನು ಹಿಂಬಾಲಿಸುತ್ತದೆ. ದೂರದಲ್ಲಿ ನಿಂತಿರುವ ಮಕ್ಕಳ ತಂದೆ ಈ ಸಂತೋಷದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅದರಲ್ಲಿ ಅವರು ನೀರಿನಿಂದ ದೂರವಿರಿ ಎಂದು ಮಕ್ಕಳನ್ನು ಗದರಿಸುತ್ತಿರುವುದನ್ನು ಕೇಳಬಹುದು. ಏನೇ ಆಗಲಿ ಅಜ್ಜ ಮೊಮ್ಮಕ್ಕಳ ನಡುವಿನ ಈ ಮೋಜಿನ ವಿಡಿಯೋ ನೋಡುಗರ ಮನ ಗೆಲ್ಲುತ್ತಿದೆ.
28 ಸೆಕೆಂಡ್‌ಗಳ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಚಂಡಮಾರುತದ (ಫೆಂಗಲ್) ಮಳೆಯಿಂದಾಗಿ ಮನೆಯ ಆವರಣವು ಜಲಾವೃತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಅಜ್ಜ ತನ್ನ ಮೊಮ್ಮಕ್ಕಳೊಂದಿಗೆ ಮೋಜು ಮಾಡಲು ಅಂತಹ ಮಾರ್ಗವನ್ನು ಕಂಡುಕೊಂಡಿರುವುದು ಮತ್ತು ಅವರ ವಿಡಿಯೋವನ್ನು ನೋಡಿದವರು ಭಾರತೀಯರು ಕೆಟ್ಟ ಸಮಯದಲ್ಲೂ ಸಂತೋಷಕ್ಕೆ ಕಾರಣಗಳನ್ನು ಕಂಡುಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)