

ಕೋಳಿಯನ್ನು ಸಾಮಾನ್ಯವಾಗಿ ಶಾಂತಿಯುತ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಕೋಳಿಗಳು ಸಹ ಸ್ವಭಾವತಃ ಫೈಟರ್ ಆಗಿರುತ್ತವೆ. ಇನ್ನು ರಸ್ತೆಯಲ್ಲಿ ಓಡಾಡುವ ನಾಯಿಗಳ ಕುರಿತು ಹೇಳುವುದಾದರೆ ಅವು ಯಾವ ಮನಸ್ಥಿತಿಯಲ್ಲಿವೆ ಎಂಬುದು ಹೇಳಲಾಗುವುದಿಲ್ಲ. ಕೆಲವೊಮ್ಮೆ ನಾಯಿಗಳು ಶಾಂತಿಯುತವಾಗಿ ರಸ್ತೆಬದಿಯಲ್ಲಿ ಕುಳಿತುಕೊಳ್ಳುತ್ತವೆ, ಮತ್ತೆ ಕೆಲವೊಮ್ಮೆ ಜನರನ್ನು ನೋಡಿದ ನಂತರ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಬೊಗಳಲು ಪ್ರಾರಂಭಿಸುತ್ತವೆ. ಆದರೆ ನಾಯಿ ಕೋಳಿಯೊಂದಿಗೆ ಹೋರಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ(Viral Video) ನೀವು ಈ ದೃಶ್ಯವನ್ನು ನೋಡಬಹುದು.
ವೈರಲ್ ವೀಡಿಯೊದಲ್ಲಿ ನಾಯಿಯು ಕೋಳಿಯೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ಈ ಎರಡು ಜೀವಿಗಳು ರಸ್ತೆಯಲ್ಲಿ ಜಗಳವಾಡುತ್ತಿರುವುದು ಕಂಡುಬಂದಿದೆ. ನಾಯಿಯು ಎತ್ತರವಾಗಿರುವುದರಿಂದ ಕೋಳಿ ಜಿಗಿಯುವ ಮೂಲಕ ದಾಳಿ ಮಾಡುತ್ತಿದೆ. ನಾಯಿಗೆ ಶರಣಾಗಳು ಕೋಳಿ ಸಿದ್ಧವಿಲ್ಲ. ಇಬ್ಬರ ನಡುವೆ ಹೆಚ್ಚು ಜಗಳ ನಡೆದು ಕೊನೆಗೆ ನಾಯಿ ಸುಸ್ತಾಗಿ ಅಲ್ಲಿಂದ ಹೋಗುತ್ತಿರುತ್ತದೆ ಆದರೆ ಇದರ ಹೊರತಾಗಿಯೂ ಕೋಳಿ ಅವನನ್ನು ಅಟ್ಟಿಸಿಕೊಂಡು ಓಡಿಹೋಗುವುದನ್ನು ನೋಡಬಹುದು.
46 ಸೆಕೆಂಡುಗಳ ಈ ಕ್ಲಿಪ್ ಅನ್ನು ಇದುವರೆಗೂ 13 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಹುಂಜ ಕೋಳಿ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ, ಇದು ಯಶಸ್ಸಿನ ವಿಶೇಷ ಉದಾಹರಣೆಯಾಗಿದೆ, ಅತಿಯಾದ ಆತ್ಮವಿಶ್ವಾಸದಿಂದ ಕೋಳಿ ಸತ್ತಿರಬಹುದು, ವಾವ್ ಈ ವಿಡಿಯೋ ಅದ್ಭುತವಾಗಿದೆ! ಎಂದು ಕಾಮೆಂಟ್ ಮಾಡಿದ್ದಾರೆ.