ಫಿಟ್‌ನೆಸ್ ಚಾಲೆಂಜ್‌ನಲ್ಲಿ ವಿದೇಶಿಯರನ್ನು ಸೋಲಿಸಿದ ದೇಸಿ ಹುಡುಗ; 12 ಕೋಟಿ ಮಂದಿ ಮೆಚ್ಚಿದ Video Viral

Untitled design - 2024-12-06T193246.925
Published on

ಪ್ರಸ್ತುತ ನಾವು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ವಿಷಯಗಳನ್ನೊಳಗೊಂಡಿರುವ ವಿಡಿಯೋವನ್ನು ನೋಡುತ್ತಿರುತ್ತೇವೆ. ಆದರೆ ಕೆಲವು ವಿಡಿಯೋಗಳನ್ನು ನೋಡಿದ ತಕ್ಷಣವೆ ನೆಟ್ಟಿಗರು ಮೆಚ್ಚಿಕೊಂಡು ಹೊಗಳುತ್ತಾರೆ. ಸದ್ಯ ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral)​ ಆಗಿದೆ. ಇದರಲ್ಲಿ ಫಿಟ್ನೆಸ್​​ ಚಾಲೆಂಜ್​ ಅನ್ನು ನೀಡಲಾಗಿದೆ. ವಿದೇಶಿ ವ್ಯಕ್ತಿಯೊಬ್ಬರು ದೇಹವನ್ನು ಬ್ಯಾಲೆನ್ಸ್ ಮಾಡಬೇಕು ಎಂದು ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ. ಒಬ್ಬ ಹುಡುಗ ಇದನ್ನು ಸಾಧಿಸುವ ರೀತಿ ನೋಡುವುದು ತುಂಬಾ ಆಸಕ್ತಿದಾಯಕವಾಗಿದೆ.

ವೈರಲ್​ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಮೂರು-ನಾಲ್ಕು ಸಣ್ಣ ರಾಡ್‌ಗಳನ್ನು ಪರಸ್ಪರ ಹೇಗೆ ಸಂಪರ್ಕಿಸುತ್ತಾನೆ ಮತ್ತು ಅದನ್ನು ಹಿಡಿದಿಟ್ಟುಕೊಳ್ಳುವ ಮೂಲಕ ತನ್ನ ದೇಹವನ್ನು ಸಮತೋಲನಗೊಳಿಸಲು ಹೇಗೆ ಪ್ರಯತ್ನಿಸುತ್ತಾನೆ ಎಂಬುದನ್ನು ನೋಡಬಹುದು. ವ್ಯಕ್ತಿಯ ಒಂದು ಕಾಲು ಬ್ಲಾಕ್ ಮೇಲೆ ನಿಂತಿದೆ ಮತ್ತು ಇನ್ನೊಂದು ಕಾಲು ಗಾಳಿಯಲ್ಲಿದೆ. ಅವರು ಪುಶ್ ಅಪ್ ಮಾಡುತ್ತಿರುವುದು ಕಂಡುಬರುತ್ತದೆ. ಅದೇ ಸಮಯದಲ್ಲಿ ಈ ಫಿಟ್ನೆಸ್​​ ಸವಾಲನ್ನು ಭಾರತೀಯರೊಬ್ಬರು ಪೂರ್ಣಗೊಳಿಸುತ್ತಾರೆ. ವಿದೇಶಿಗನಿಗಿಂತ ಭಾರತೀಯ ವ್ಯಕ್ತಿ ಹೆಚ್ಚಿಗೆ ಪುಶ್​​ ಅಪ್​ ಮಾಡುತ್ತಾರೆ.

ವಾಸ್ತವವಾಗಿ ಅನೇಕ ನಾಣ್ಯಗಳನ್ನು ಒಂದರ ಹಿಂದೆ ಒಂದರಂತೆ ಜೋಡಿಸಿ ಅದನ್ನು ರಾಡ್‌ನಂತೆ ಮಾಡಿ ಅದನ್ನು ಹಿಡಿದುಕೊಂಡು ತಮ್ಮ ದೇಹದ ಸಮತೋಲನವನ್ನು ತೋರಿಸುತ್ತಾರೆ. ಈ ಸ್ಟಂಟ್ ನೋಡಿದ ಬಳಕೆದಾರರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೈರಲ್​ ಆದಾಗಿನಿಂದ ಇದುವರೆಗೂ 119 ಮಿಲಿಯನ್ ಅಥವಾ ಸರಿಸುಮಾರು 12 ಕೋಟಿ ಮಂದಿ ವೀಕ್ಷಿಸಿದ್ದಾರೆ. 1 ಕೋಟಿಗೂ ಹೆಚ್ಚು ಮಂದಿ ಲೈಕ್​ ಮಾಡಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾವು ಭಾರತೀಯರು ಎಲ್ಲರಿಗೂ ತಂದೆ, ಭಾರತ ನಿಜವಾಗಿಯೂ ಆರಂಭಿಕರಿಗಾಗಿ ಅಲ್ಲ, ನಾವು ಭಾರತದಿಂದ ಬಂದವರು ನಾವು ಅವರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತೇವೆ, ಭಾರತದಲ್ಲಿ ನಿಜವಾಗಿಯೂ ಪ್ರತಿಭೆಯ ಕೊರತೆಯಿಲ್ಲ ಎಂದು ಕಾಮೆಂಟ್​ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net