

ಅನೇಕ ಮೆಟ್ರೋ ವಿಡಿಯೋಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಆದರಲ್ಲಿ ಜನರು ನೃತ್ಯ ಮಾಡುವುದು, ತಮ್ಮತಮ್ಮಲ್ಲೇ ಜಗಳವಾಡುವುದು ಅಥವಾ ವಿಚಿತ್ರ ರೀತಿಯಲ್ಲಿ ರೀಲ್‌ಗಳನ್ನು ಮಾಡುವುದನ್ನು ಕಾಣಬಹುದು. ಆದರೆ ಸದ್ಯ ಇವೆಲ್ಲದಕ್ಕಿಂತ ಭಿನ್ನವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದೆ. ವಾಸ್ತವವಾಗಿ ಈ ವಿಡಿಯೋದಲ್ಲಿ ನಾಲ್ವರು ಹುಡುಗಿಯರು ಮೆಟ್ರೋ ರೈಲಿನಲ್ಲಿ ಕೇವಲ ಟವೆಲ್‌ನಲ್ಲಿ ಸುತ್ತಿರುವುದನ್ನು ಕಾಣಬಹುದು.
ವೈರಲ್ ಆಗಿರುವ ವಿದೇಶದ ಈ ವಿಡಿಯೋದಲ್ಲಿ ನೀವು ನಾಲ್ಕು ಹುಡುಗಿಯರನ್ನು ಕೇವಲ ಟವೆಲ್‌ನಲ್ಲಿ ನೋಡುತ್ತೀರಿ. ಕೂದಲಿಗೆ ಟವೆಲ್ ಕೂಡ ಸುತ್ತಿಕೊಂಡಿದ್ದಾರೆ. ಮೆಟ್ರೋ ಪ್ರವೇಶಿಸಿದ ತಕ್ಷಣ ಎಲ್ಲರೂ ಮೂಕವಿಸ್ಮಿತರಾಗಿ ಅವರತ್ತ ನೋಡುತ್ತಲೇ ಇರುವುದನ್ನು ನೀವು ನೋಡಬಹುದು. ಆ ಹುಡುಗಿಯರನ್ನು ನೋಡಿ ಕೆಲವರು ಶಾಕ್ ಆದರೆ ಕೆಲವರು ಫೋಟೊ ಮತ್ತು ವಿಡಿಯೋ ಮಾಡುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಅವರೊಂದಿಗೆ ವೈನ್ ಬಾಟಲಿಯನ್ನು ಹಂಚಿಕೊಳ್ಳುವುದನ್ನು ಸಹ ಕಾಣಬಹುದು. ಮೆಟ್ರೋದಿಂದ ಹೊರ ಬಂದ ಕೂಡಲೇ ಜನ ಇವರನ್ನೇ ದಿಟ್ಟಿಸುತ್ತಿರುವುದು ಕಾಣಬಹುದು.
ಈ ವಿಡಿಯೋವನ್ನು 8 ಲಕ್ಷ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ವಯಸ್ಸಾದ ಮಹಿಳೆ ಪ್ರತಿಕ್ರಿಯ ಉತ್ತಮವಾಗಿದೆ, ನಾನು ತುಂಬಾ ವಯಸ್ಸಾಗಿಲ್ಲವಾದರೂ ಈ ವಿಧಾನವನ್ನು ತುಂಬಾ ಅಸಂಬದ್ಧವೆಂದು ಭಾವಿಸುತ್ತೇನೆ, ಜನರು ಗಮನ ಸೆಳೆಯಲು ಅನೇಕ ಮೂರ್ಖ ಕೆಲಸಗಳನ್ನು ಮಾಡುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಸಹಜ ಎಂದು ಕಾಮೆಂಟ್ ಮಾಡಿದ್ದಾರೆ.