

ಭಾರತದಲ್ಲಿ ಮದುವೆ ಮತ್ತು ವೈವಾಹಿಕ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಡೀ ವಿಶ್ವವೇ ನಮ್ಮ ಸಂಪ್ರದಾಯವನ್ನು ಗೌರವಿಸುತ್ತದೆ. ಇಂತಹ ಭಾರತೀಯ ವೈವಾಹಿಕ ವ್ಯವಸ್ಥೆ ಈಗ ಅಸ್ತವ್ಯಸ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಸಂಸ್ಕೃತಿಯು ಯಥೇಚ್ಚವಾಗಿ ಭಾರತದಲ್ಲಿಯೂ ಬೆಳೆಯುತ್ತಿದೆ. ನ್ಯಾಯಾಲಯದ ಮುಂದೆ ಬಂದಿರುವ ಅಂತಹದ್ದೆ ಪ್ರಕರಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ವಿಚ್ಛೇದನ ಮತ್ತು ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದ ಪೀಠದ ಮುಂದೆ ಬಂದಿದೆ. ಇದನ್ನು ಆಲಿಸಿದ ಇಬ್ಬರೂ ನ್ಯಾಯಾಧೀಶರು ಕೆಲವು ಮಹತ್ವದ ವಿಷಯಗಳನ್ನು ಹೇಳಿದ್ದಾರೆ. ನ್ಯಾಯಾಲಯದ ಈ ಕಲಾಪದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ನ್ಯಾಯಾಲಯದ ಮುಂದಿರುವ ಪ್ರಕರಣದಲ್ಲಿ ಮದುವೆಯಾಗಿ 15 ವರ್ಷಗಳ ನಂತರ ಪತಿಯಿಂದ 40 ಲಕ್ಷ ರೂಪಾಯಿ ಜೀವನಾಂಶವನ್ನು ಹೆಂಡತಿ ಕೇಳುತ್ತಿದ್ದಾಳೆ. ಪತ್ನಿಯ ಜೀವನಾಂಶದ ಮೊತ್ತವನ್ನು ಕೇಳಿ ನ್ಯಾಯಾಧೀಶರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಮದುವೆಯ ನಂತರ 1 ತಿಂಗಳು ಮಾತ್ರ ಈ ದಂಪತಿ ಒಟ್ಟಿಗೆ ವಾಸಿಸುತ್ತಾರೆ. ನಂತರ ಕಾರಣಾಂತರಗಳಿಂದ ಅವರ ಸಂಬಂಧ ಮುರಿದುಬಿದ್ದು ಇಬ್ಬರೂ ವಿಚ್ಛೇದನ ಪಡೆಯುತ್ತಾರೆ. ಅದರ ನಂತರ ಪತ್ನಿ ತನ್ನ ಮಾಜಿ ಗಂಡನ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸುತ್ತಾಳೆ. ಜೀವನಾಂಶವೆಂದು ಮೊದಲು 15 ಲಕ್ಷ, ನಂತರ 20 ಲಕ್ಷ ಮತ್ತು 30 ಲಕ್ಷ ರೂಪಾಯಿ ಕೇಳುತ್ತಾಳೆ. ಆದರೆ ಪ್ರಕರಣ ಪೂರ್ಣಗೊಳ್ಳಲು 15 ವರ್ಷ ತೆಗೆದುಕೊಂಡಾಗ ಜೀವನಾಂಶದ ಮೊತ್ತವನ್ನು ಹೆಚ್ಚಿಸಿ 40 ಲಕ್ಷ ರೂಪಾಯಿ ಕೇಳುತ್ತಾಳೆ.
ಪ್ರಕರಣವು ನ್ಯಾಯಾಲಯಕ್ಕೆ ಬಂದಾಗ ಇಬ್ಬರನ್ನೂ ಹಾಜರಾಗುವಂತೆ ಸೂಚಿಸುತ್ತದೆ. ಮಹಿಳೆಯ ವಕೀಲರು ಅವರು ಇಂದು ಬಂದಿಲ್ಲ ಎಂದು ಹೇಳುತ್ತಾರೆ. ಇಡೀ ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರು ಪೀಠದ ಮುಂದೆ ಹಾಜರಾದ ಆಕೆಯ ಮಾಜಿ ಪತಿಯನ್ನು ನಿಮ್ಮೊಂದಿಗೆ ಮಕ್ಕಳಿದ್ದಾರೆಯೇ? ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆ ವ್ಯಕ್ತಿ ಇಲ್ಲ ಎಂದು ಹೇಳುತ್ತಾರೆ.
ನಂತರ ನ್ಯಾಯಾಲಯವು ವಿಷಯವನ್ನು ಇತ್ಯರ್ಥಪಡಿಸಲು ಸೂಚಿಸುತ್ತದೆ. ಆದರೆ ಇಷ್ಟು ಕಡಿಮೆ ಅವಧಿಗೆ ಒಟ್ಟಿಗೆ ಜೀವನ ನಡೆಸಿ, 15 ವರ್ಷಗಳ ನಂತರ 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವುದನ್ನು ಕಂಡು ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಕಾನೂನನ್ನು ಸುಲಿಗೆಗೆ ಬಳಸುವಂತಿಲ್ಲ ಎಂದು ಮಹಿಳೆಯ ವಕೀಲರಿಗೆ ನ್ಯಾಯಾಧೀಶರು ಹೇಳುತ್ತಾರೆ. ಈ ವೇಳೆ 30 ಲಕ್ಷ ರೂಪಾಯಿ ಇತ್ಯರ್ಥಕ್ಕೆ ಸಿದ್ಧ ಎಂದು ಪತಿ ಹೇಳಿದಾಗ ನ್ಯಾಯಾಲಯವೂ ಒಪ್ಪಿಗೆ ಸೂಚಿಸಿದೆ.
ಈ ಪ್ರಕರಣವನ್ನು 30-31 ಲಕ್ಷ ರೂಪಾಯಿಗೆ ಇತ್ಯರ್ಥಪಡಿಸಿ, ಇಲ್ಲದಿದ್ದರೆ ನಾವು ಅದನ್ನು ಮರುಪಡೆಯಲಾಗದ ವಿವಾಹದ ವಿಘಟನೆಯಲ್ಲಿ ವರದಿ ಮಾಡುತ್ತೇವೆ ಎಂದು ನ್ಯಾಯಾಲಯ ಹೇಳುತ್ತದೆ.
ಸುಮಾರು ಒಂದೂವರೆ ನಿಮಿಷದ ಈ ವೀಡಿಯೊವನ್ನು ಇಲ್ಲಿಯವರೆಗೆ 7 ಲಕ್ಷ 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಮದುವೆಯಾಗಿ ವಿಚ್ಛೇದನ ಪಡೆಯುವುದನ್ನು ವ್ಯಾಪಾ ಮಾಡುತ್ತಿದ್ದಾರೆ, 40 ಲಕ್ಷ ರೂ. ಸುಲಿಗೆಗೆ ಕಾನೂನನ್ನು ಬಳಸುವಂತಿಲ್ಲ, ಈಗ ಮದುವೆಯಾಗಲು ನಾನು ಹೆದರುತ್ತೇನೆ, ಒಪ್ಪಂದದ ನಂತರವೇ ಮದುವೆಯಾಗುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.