

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗಲು ಪ್ರಾರಂಭವಾದಾಗಿನಿಂದ, ಜನರು ತಮ್ಮ ವಿಡಿಯೋಗಳು ವೈರಲ್ ಆಗಲೆಂದು ಹಾಗೂ ಹಣ ಗಳಿಸಲು ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳಲು ಆರಂಭಿಸಿದ್ದಾರೆ. ಸದ್ಯ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು( Viral Video), ಅದರಲ್ಲಿ ಭಗವಂತ ಹನುಮಧಾರಿಯಾಗಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ದೇವರ ಆರಾಧನೆ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ವಿಷಯವಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹನುಮಂತನ ವೇಷ ಧರಿಸಿ ಗದೆ ಹಿಡಿದು ತರಗತಿ ಪ್ರಾರಂಭಿಸುವುದನ್ನು ನೋಡಬಹುದು. ಯುಪಿಎಸ್ಸಿ ಪರೀಕ್ಷೆ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಅಂತಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಧ್ಯಯನದ ವಸ್ತು, ಶಿಕ್ಷಕರ ಸಹಾಯದ ಜತೆಗೆ ದೇವರ ಆಶೀರ್ವಾದವು ಅವಶ್ಯಕವಾಗಿರುತತದೆ. ಆದರೆ ಶಿಕ್ಷಕರೇ ಹನುಮಂತನಂತೆ ವೇಷ ಧರಿಸಿ ಬಂದಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ಅಷ್ಟಕ್ಕೂ ಈ ವ್ಯಕ್ತಿ ಐಎಎಸ್ ತರಗತಿಗಳ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ವಿಡಿಯೋ ಆರಂಭದಲ್ಲಿ ಆ ವ್ಯಕ್ತಿ ಜೈ ಶ್ರೀರಾಮ್ ಸ್ನೇಹಿತರೇ ಎಂದು ಹೇಳಿ ತರಗತಿಗೆ ಸ್ವಾಗತ ಹೇಳುತ್ತಾನೆ. ದೇವರ ರೂಪದಲ್ಲಿ ಕ್ಲಾಸ್ ನಡೆಸುತ್ತಿರುವ ವ್ಯಕ್ತಿಯ ವಿಡಿಯೋ ನೋಡಿದ ನೆಟ್ಟಿಗರು ಕೋಪದಿಂದ ಪ್ರತಿಕ್ರಿಯಿಸುತ್ತಿದ್ದಾರೆ.
ಹನುಮಾನ್ ಜೀ ಕೋಟ್ಯಂತರ ಜನರ ನಂಬಿಕೆಯ ಪ್ರತೀಕ ತನ್ನ ವಿಡಿಯೋಗಾಗಿ ಜನರ ನಂಬಿಕೆಯೊಂದಿಗೆ ಆಟವಾಡುವುದು ಸರಿಯಲ್ಲ, ತನ್ನ ಚಾನೆಲನ್ನು ಪ್ರಚಾರಕ್ಕೆ ತರಲು ಶಿಕ್ಷಕರು ತೆಗೆದುಕೊಂಡ ಈ ಕ್ರಮ ಒಳಿತಲ್ಲ, ಇದು ತಪ್ಪು ದೇವರನ್ನು ಆಟಿಕೆ ಎಂದು ಪರಿಗಣಿಸಬಾರದು, ಹರೇ ರಾಮ್ ಜನರಿಗೆ ಏನಾಗಿದೆ ಎಂದು ನನಗೆ ತಿಳಿಯುತ್ತಿಲ್ಲ, ಅವರು ಪ್ರಸಿದ್ಧರಾಗಲು ಅವರು ಯಾವುದೇ ಹಂತಕ್ಕಾದರೂ ಹೋಗುತ್ತಾರೆ, ಈತನಿಗೆ ನರಕದಲ್ಲಿ ಪ್ರತ್ಯೇಕವಾಗಿ ಎಣ್ಣೆಯನ್ನು ಕಾಯಿಸಲಾಗುತ್ತಿದೆ, ಹನುಮಂತನ ವೇಷ ಧರಿಸಿ ವ್ಯಾಪಾರ ಮಾಡುತ್ತಿದ್ದಾನೆ, ನೀನು ಶಿಕ್ಷಕನಾಗಲು ಸಾರ್ಧಯವಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.