

ರಸ್ತೆಬದಿ ವ್ಯಾಪಾರಿಗಳು ಈಗ ಆಹಾರ ಮಾರುಕಟ್ಟೆಯಲ್ಲಿ ವಿವಿಧ ಪ್ರಾಯೋಗಿಕ ಭಕ್ಷ್ಯಗಳನ್ನು ಪರಿಚಯಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪಾನ್ ದೋಸೆಯ ವಿಡಿಯೋವೊಂದು ವೈರಲ್ ಆಗಿತ್ತು. ಈ ಆಘಾತದಿಂದ ಆಹಾರ ಪ್ರಿಯರು ಇನ್ನೂ ಚೇತರಿಸಿಕೊಂಡಿರಲಿಲ್ಲ, ಇದೀಗ ವಿಮಲ್ ನಿಂಬು ರಸದ ವಿಡಿಯೋ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿದೆ(Video Viral).
ಹೌದು, ವಿಮಲ್ ನಿಂಬೆಹಣ್ಣಿನ ಜ್ಯೂಸ್ ಅಂದರೆ ವಿಮಲ್ ಪಾನ್ ಮಸಾಲಾದ ಜ್ಯೂಸ್ ಕುರಿತು ಇಲ್ಲಿ ಹೇಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬ ನೀರು ಮತ್ತು ಸೋಡಾಕ್ಕೆ ನಿಂಬೆ, ಪುದೀನ ಎಲೆಗಳು ಮತ್ತು ಮಸಾಲೆ ಸೇರಿಸುವುದನ್ನು ನೀವು ನೋಡಬಹುದು. ಆದರೆ ವಿಡಿಯೋ ಕೊನೆಯಲ್ಲಿ ಆತ ತಯಾರಿಸಿದ ಜ್ಯೂಸ್ಗೆ ಪಾನ್ ಮಸಾಲವನ್ನು ಸೇರಿಸುವುದನ್ನು ಕಾಣಬಹುದು.
ಅಷ್ಟಕ್ಕೆ ಮುಗಿಯುವುದಿಲ್ಲ. ಆತ ನೀರಿನಲ್ಲಿ ಪಾನ್ ಮಸಾಲವನ್ನು ಚೆನ್ನಾಗಿ ಮಿಶ್ರಣ ಮಾಡಲು ಪ್ರಯತ್ನಿಸುತ್ತಾನೆ. ಬಳಿಕ ಅದು ನೀರಿನಲ್ಲಿ ಕರಗುತ್ತದೆ. ಕೊನೆಯಲ್ಲಿ ಜ್ಯೂಸ್ ಅನ್ನು ಪಾನ್ ಮಸಾಲದ ಖಾಲಿ ಪ್ಯಾಕೆಟ್‌ನಿಂದ ಅಲಂಕರಿಸುತ್ತಾನೆ.
ಈ ವೈರಲ್ ವಿಡಿಯೋವನ್ನು 43 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ವಿಡಿಯೋ ಹಂಚಿಕೊಳ್ಳುವಾಗ ವಿಶೇಷ ವಿಮಲ್ ಶಿಕಾಂಜಿ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ನೀವು ಹೊರಗಡೆ ಬೀದಿಬದಿಯಲ್ಲಿ ಸೇವಿಸುವ ಊಟ ಅಥವಾ ಯಾವುದೇ ಪದಾರ್ಥಗಳ ಬಗ್ಗೆ ಎಚ್ಚರವಿರಲಿ.(ಏಜೆನ್ಸೀಸ್)