

ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ರೈಲು ಕಲೆಕ್ಟರ್‌ನಿಂದಾಗಿ 125 ಟ್ರೈನ್ಗಳು ವಿಳಂಬವಾಗಿದೆ. ಟಿಕೆಟ್ ಕಲೆಕ್ಟರ್ 4 ನಿಮಿಷಗಳ ಕಾಲ ಟಾಯ್ಲೆಟ್ ಬ್ರೇಕ್‌ಗೆ ಹೋಗಿದ್ದರು. ಇದರಿಂದಾಗಿ ರೈಲು ತಡವಾಗಿದೆ. ನಂತರ ಈ ಕಾರಣದಿಂದ ಆ ಮಾರ್ಗದಲ್ಲಿ ಸಂಚರಿಸುವ ಒಟ್ಟು 125 ರೈಲುಗಳು(Metro Train) ವಿಳಂಬವಾಗಿವೆ ಎಂದು ಕೊರಿಯಾ ಹೆರಾಲ್ಡ್ ವರದಿ ಮಾಡಿದೆ.
ನವೆಂಬರ್ 25ರಂದು ಸ್ಥಳೀಯ ಸಮಯ ಸುಮಾರು 8 ಗಂಟೆಗೆ ಸಿಯೋಲ್‌ನ 2ನೇ ಸಾಲಿನಲ್ಲಿ ಈ ಘಟನೆ ಸಂಭವಿಸಿದೆ. ನಿರ್ವಾಹಕರು ವಿರಾಮ ತೆಗೆದುಕೊಳ್ಳಲು ನಿಲ್ದಾಣದಲ್ಲಿ ವೇಳಾಪಟ್ಟಿಯಿಲ್ಲದೆ ರೈಲನ್ನು ನಿಲ್ಲಿಸಿದ್ದಾರೆ. ನಿಲ್ದಾಣದ ಶೌಚಾಲಯ ಎರಡನೇ ಮಹಡಿಯಲ್ಲಿದ್ದರಿಂದ ಟಿಕೆಟ್ ಕಲೆಕ್ಟರ್ ಹತ್ತಿ ಇಳಿಯಲು 4 ನಿಮಿಷ 16 ಸೆಕೆಂಡ್ ತೆಗೆದುಕೊಂಡರು. ಈಗಾಗಲೇ ಮಾಡಿದ್ದ ರೈಲು ವೇಳಾಪಟ್ಟಿಯನ್ನು ಅಡ್ಡಿಪಡಿಸಲು ಇದು ಸಾಕಷ್ಟು ಸಮಯ ಆಗಿತ್ತು.
ಸಿಯೋಲ್ ಮೆಟ್ರೋ ಪ್ರಕಾರ, 125 ರೈಲುಗಳು ಸರ್ಕ್ಯುಲರ್ ಲೈನ್‌ನಲ್ಲಿ ಚಲಿಸುವ ರೈಲುಗಳು. ಒಂದು ರೈಲು ಸ್ಥಗಿತವಾದ್ದರಿಂದ ಉಳಿದ ರೈಲುಗಳು ವಿಳಂಬವಾಗಿದೆ. ಇವುಗಳಲ್ಲಿ ಕೆಲವು ರೈಲುಗಳು 20 ನಿಮಿಷಗಳವರೆಗೆ ವಿಳಂಬವಾಗಿವೆ. ರೈಲಿನೊಳಗೆ ಪೋರ್ಟಬಲ್ ಶೌಚಗೃಹಗಳು ಲಭ್ಯವಿದೆ. ಆದರೂ ಈ ಕಾರಣದಿಂದ ರೈಲುಗಳು ತಡವಾಗಿರುವುದು ಅಲ್ಲಿನ ನಾಗರಿಕರ ಪ್ರಕಾರ ಸ್ವಾಗತರ್ಹವಲ್ಲ.
ನಿಲ್ದಾಣದ ಸೌಲಭ್ಯಗಳನ್ನು ನೋಡಿಕೊಳ್ಳಲು ಟಿಕೆಟ್ ಕಲೆಕ್ಟರ್ ನಿಲ್ದಾಣದಲ್ಲಿ ಇಳಿಯುತ್ತಾರೆ. ಅವರ ಈ ನಿರ್ಧಾರವು ಸಿಯೋಲ್ ಮೆಟ್ರೋಗೆ ತುಂಬಾ ದುಬಾರಿಯಾಗಿದೆ. ವರದಿಗಳ ಪ್ರಕಾರ, ಅಂತಹ ಮಾರ್ಗಗಳಲ್ಲಿ ಸಂಚರಿಸುವ ಕಲೆಕ್ಟರ್ಗಳು 2-3 ಗಂಟೆಗಳ ಕಾಲ ವಿರಾಮವಿಲ್ಲದೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ತುರ್ತು ಪರಿಸ್ಥಿತಿ ಉಂಟಾದರೆ ಹತ್ತಿರದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಈ ವಿಳಂಬದ ನಂತರ, ರೈಲುಗಳು ಎಂದಿನಂತೆ ನಿಯಮಿತ ಮಧ್ಯಂತರದಲ್ಲಿ ಆಗಮಿಸುವುದನ್ನು ಮತ್ತು ನಿರ್ಗಮಿಸುವುದನ್ನು ಮುಂದುವರಿಸಿದೆ ಎಂದು ಸಿಯೋಲ್ ಮೆಟ್ರೋ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ವಿಳಂಬದ ಹೊರತಾಗಿಯೂ ಹೆಚ್ಚಿನ ಪ್ರಯಾಣಿಕರು ಕನಿಷ್ಠ ಅನಾನುಕೂಲತೆಯೊಂದಿಗೆ ತಮ್ಮ ಗಮ್ಯಸ್ಥಾನವನ್ನು ತಲುಪಿದರು.(ಏಜೆನ್ಸೀಸ್)