

ತರಗತಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ನೃತ್ಯ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತರಗತಿಯಲ್ಲಿ ಶಿಕ್ಷಕಿಯೊಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ (Viral Video)ಆಗುತ್ತಿದೆ.
ವೈರಲ್ ವಿಡಯೋದಲ್ಲಿ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ತೊಡಗಿದ್ದು ಶಿಕ್ಷಕಿ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ವಿದ್ಯಾರ್ಥಿಗಳು ನೋಡುತ್ತಿದ್ದರು ಶಿಕ್ಷಕಿ ತರಗತಿಯಲ್ಲಿದ್ದೇನೆ ಎಂಬುದನ್ನೇ ಮರೆತಿರುವಂತೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.
9 ಸೆಕೆಂಡ್ಗಳಿರುವ ಈ ವಿಡಿಯೋವನ್ನು ಇದುವರೆಗೂ 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ತರಗತಿ ದೇವಾಲಯದಂತೆ ಶಿಕ್ಷಕರು ಮಿತಿಯೊಳಗೆ ಏನನ್ನಾದರೂ ಮಾಡಬೇಕು, ವಿನೋದ ವೀಕ್ಷಿಸುತ್ತಿದ್ದಾರೆ, ಕ್ಲಾಸ್ ರೂಮ್ ಓದಲು ಇದೆ ಮೇಡಂ ಇದೆಲ್ಲ ಮಾಡುವುದಕ್ಕೆ ಅಲ್ಲ, ಅಂತಹ ವಿಷಯಗಳನ್ನು ನಿಯಂತ್ರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.