

ಸಾಮಾನ್ಯವಾಗಿ ಕೆಲವರು ಆಮಂತ್ರನವಿಲ್ಲದೆ ಮದುವೆಗೆ ಹೋಗುತ್ತಾರೆ. ಕೆಲವರು ಇದನ್ನು ಕ್ರೇಜ್ಗಾಗಿ ಮಾಡಿದರೆ, ಕೆಲವರ ಹಸಿವಾಗಿ ಊಟ ಮಾಡಲು ಹೋಗಿದ್ದೇವು ಎಂದು ಹೇಳಿರುವ ಸ್ಟೋರಿಗಳನ್ನು ಕೇಳಿರುತ್ತೇವೆ. ಅಂತಹದ್ದೇ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.(Viral Video).
ವಿಡಿಯೋದಲ್ಲಿ ಮದುವೆಗೆ ಹಾಜರಾಗಲು ಆ ವ್ಯಕ್ತಿ ಉತ್ತಮವಾದ ಶೇರ್ವಾನಿ ಸೂಟ್ ಧರಿಸಿ ಆಗಮಿಸಿರುವುದು ಕಾಣುತ್ತದೆ. ಅಲ್ಲದೆ ವರನ ಪಕ್ಕದಲ್ಲಿಯೇ ಕುಳಿತು ಊಟವನ್ನ ಮಾಡುತ್ತಿದ್ದಾನೆ. ಅಷ್ಟರಲ್ಲಾಗಲೇ ಕ್ಯಾಮೆರಾಮನ್ ಜತೆ ಬಂದ ಮತ್ತೊಬ್ಬ ವ್ಯಕ್ತಿ ವರನ ಪಕ್ಕದಲ್ಲಿ ಕುಳಿತಿದ್ದವನನ್ನು ನಿನ್ನನ್ನು ಯಾರು ಕರೆದರು?’ ಎಂದು ಕೇಳುತ್ತಾರೆ. ‘ನೀನು ಘರಾತಿಯೋ ಅಥವಾ ಬಾರತೀಯೋ?’ ಎಂದೂ ಕೇಳುತ್ತಾರೆ. ಈ ಎರಡೂ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಗೊಂದಲದಲ್ಲಿದ್ದ ವ್ಯಕ್ತಿಯನ್ನು ನಿಂದಿಸಿ ಎದ್ದು ಹೋಗುವಂತೆ ಹೇಳುತ್ತಾರೆ.
ಬುದ್ಧಿವಂತಿಕೆಯನ್ನು ತೋರಿಸಲು ಇದು ಸರಿಯಾದ ಸಮಯವಲ್ಲ ಎಂದು ಅರಿತ ಆ ವ್ಯಕ್ತಿ ತಕ್ಷಣ ವರನ ಕಡೆಯಿಂದ ಎದ್ದು ತನ್ನ ತಟ್ಟೆಯೊಂದಿಗೆ ಹೋಗುತ್ತಾನೆ. ಇಷ್ಟೆಲ್ಲಾ ಆದರೂ ಅವನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಇದನ್ನು ವಿಡಿಯೋದಲ್ಲಿ ನೀವು ನೋಡಬಹುದು.
ಈ ವಿಡಿಯೋವನ್ನು ಇದುವರೆಗೂ 76 ಸಾವಿರ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಮತ್ತು ಸಹೋದರ, ರುಚಿ ಬಂದಿದೆ!' ಅದಕ್ಕೇ ಹೋಗಿದ್ದೆ, ಆಹ್ವಾನವಿಲ್ಲದೆ ಹೋದರು ಸಹ ಅವರೇಕೆ ವರನ ಪಕ್ಕದಲ್ಲಿ ಕುಳಿತಿದ್ದಾರೆ, ಕತ್ತೆ ಮಾತ್ರ ಆಹ್ವಾನಿಸದೆ ಬಂದು ವರನೊಂದಿಗೆ ತಿನ್ನಲು ಕುಳಿತುಕೊಳ್ಳುತ್ತದೆ, ಇದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಆಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.