ನವದೆಹಲಿ: ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮಗೆ ಹೊಸ ಹಾಗೂ ಉತ್ತಮ ಅವಕಾಶಗಳು ಸಿಕ್ಕರೆ, ತಾವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯನ್ನು ಬಿಟ್ಟು ಬೇರೆಡೆಗೆ ಹೋಗುತ್ತಾರೆ (Resign Letter). ಇದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರವೃತ್ತಿ. ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಒಳ್ಳೆಯ ವಾತಾವರಣದಲ್ಲಿ ಇರಿಸಿಕೊಳ್ಳುವುದು ಹಾಗೂ ಅಗತ್ಯ ಸೌಕರ್ಯಗಳನ್ನು ಒದಗಿಸುವುದು ಆಯಾ ಸಂಸ್ಥೆಗಳ ಆದ್ಯ ಕರ್ತವ್ಯ. ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಯೂ ಕಂಪೆನಿಯ ಬೆಳವಣಿಗೆಗೆ ದೊಡ್ಡ ಶಕ್ತಿ. ಹೀಗಿರುವಾಗ ಕಾರ್ಮಿಕರನ್ನು ಉಳಿಸಿಕೊಳ್ಳುವುದು, ಕೆಲಸದಿಂದ ವಜಾಗೊಳಿಸುವುದು ಸಂಸ್ಥೆಯ ಮಾಲೀಕರಿಗೆ ಬಿಟ್ಟದ್ದು. ಬಾಸ್ ಕೊಡುವ ಒತ್ತಡ, ಕಟು ಮಾತುಗಳು ಅಥವಾ ಕರ್ತವ್ಯ ಸ್ಥಳಗಳಲ್ಲಿ ಹದಗೆಟ್ಟ ವಾತಾವರಣ ಉದ್ಯೋಗಿಗಳು ತಮ್ಮ ಹುದ್ದೆಗೆ ರಾಜೀನಾಮೆ ಕೊಡುವಂತೆ ಒತ್ತಾಯಿಸುತ್ತದೆ. ಒಂದು ಬಾರಿ ರಿಸೈನ್ ಲೆಟರ್ ರವಾನಿಸಿದ ಮೇಲೆ ಎಷ್ಟೋ ಮಂದಿ ತಮ್ಮ ಸಂಸ್ಥೆ ಕಡೆ ತಲೆಹಾಕಿಯೂ ಮಲಗಲು ಇಚ್ಛಿಸುವುದಿಲ್ಲ. ಇನ್ನು ಕೆಲವರು ರಾಜೀನಾಮೆ ಕೊಟ್ಟ ಮೇಲೆ ಸಂಸ್ಥೆಯ ಜತೆಗಿದ್ದ ಎಲ್ಲಾ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ವಿಭಿನ್ನ ಎಂಬುದನ್ನು ನೆಟ್ಟಿಗರಿಗೆ ಪರಿಚಯಿಸಿರುವುದು ಬಹಳ ವಿಶೇಷ ಎಂದೇ ಹೇಳಬಹುದು.
ಇದನ್ನೂ ಓದಿ: ಅರಣ್ಯ ಅಪರಾಧ ತಡೆಗೆ ಬಲ, ಎಫ್ಐಆರ್ ಗೆ ತಂತ್ರಾಂಶ ಜಾಲ
ರಾಜೀನಾಮೆ ಪತ್ರದಲ್ಲಿ ಈ ವಿಷಯ ಉಲ್ಲೇಖ
ಈ ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಈತ, ತನ್ನ ಬಾಸ್ ಅಥವಾ ಸಂಸ್ಥೆಯಿಂದ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಿಲ್ಲ. ಬದಲಿಗೆ ಉತ್ತಮ ಸಂಬಂಧ, ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಆದ್ರೆ, ಪ್ರಸ್ತುತ ಕೆಲಸ ಮಾಡ್ತಿದ್ದ ಹುದ್ದೆಗಿಂತ ಒಳ್ಳೆಯ ಪೋಸ್ಟ್ ಮತ್ತು ಜೇಬು ತುಂಬಿಸುವ ಸಂಬಳ ಸಿಕ್ಕ ಖುಷಿಯಲ್ಲಿ ಆತ ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾನೆ. ಸಂಸ್ಥೆ ಬಿಟ್ಟು ಹೋಗ್ತಿದ್ದ ಉದ್ಯೋಗಿಯನ್ನು ತಡೆಯದ ಮಾಲೀಕರು ಮತ್ತು ಟೀಮ್ ಮುಖ್ಯಸ್ಥರು, ಆತ ಕೊಟ್ಟ ರಿಸೈನ್ ಲೆಟರ್ನಲ್ಲಿ ಉಲ್ಲೇಖಿಸಿದ ವಿಷಯ ಕಂಡು ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ.
ವರ್ಕೌಟ್ ಆಗಿಲ್ಲ ಅಂದ್ರೆ…
“ನನಗೆ ಹೊಸ ಕಂಪೆನಿಯಲ್ಲಿ ಕೆಲಸ ಆಗಿದೆ. ನಾನೀಗ ಆ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸಿದ್ದೇನೆ. ಹೀಗಾಗಿ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಅಕಸ್ಮಾತ್, ಅಲ್ಲಿ ವರ್ಕೌಟ್ ಆಗಲಿಲ್ಲ ಅಥವಾ ವಾತಾವರಣ ಸರಿ ಹೊಂದಲಿಲ್ಲ ಎಂದರೆ ಖಂಡಿತ ನಾನು ಇಲ್ಲಿಗೆ ವಾಪಾಸ್ ಬರುತ್ತೇನೆ. ಈ ಮೂಲಕ ನನ್ನ ಸಂಸ್ಥೆಗೆ ಒಳ್ಳೆಯದಾಗಲಿ ಎಂದು ಆಶಿಸುವೆ. ತಂಡದ ಎಲ್ಲಾ ಉದ್ಯೋಗಿಗಳಿಗೆ ಹಾಗೂ ವಿಶೇಷವಾಗಿ ನಮ್ಮ ಮ್ಯಾನೇಜರ್ಗೆ ನನ್ನ ಹೃರ್ಪೂರ್ವಕ ಧನ್ಯವಾದಗಳು” ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈತ ಇರುವ ಊರಿದು
ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ರಾಜೀನಾಮೆ ಪತ್ರ ಬರೆದ ಉದ್ಯೋಗಿ ವಾಸವಿರುವುದು ಪಶ್ಚಿಮ ಆಫ್ರಿಕಾದ ಘಾನಾ ನಗರದಲ್ಲಿ ಎಂದು ವರದಿಯಾಗಿದೆ. ಈ ರಿಸೈನ್ ಲೆಟರ್ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದು, ‘ನಿಮ್ಮ ಪ್ರಾಮಾಣಿಕತೆಗೆ ಮೆಚ್ಚಬೇಕು’ ಎಂದು ಕಮೆಂಟ್ ಮಾಡಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ರೇಣುಕಸ್ವಾಮಿ ಹತ್ಯೆ ಕೇಸ್: ಎ2 ಆರೋಪಿ ದರ್ಶನ್ ಜಾಮೀನು ಅರ್ಜಿ ವಜಾ | Darshan Bail
ಅಂದು ಇಂಡಿಕಾ 1.0, ಇಂದು ನೆಕ್ಸಾನ್ ಇವಿ… ಟಾಟಾ ಸಾಮ್ರಾಜ್ಯದ ಹಿಂದಿತ್ತು ಸವಾಲಿನ ರತ್ನನ ಪರಪಂಚ