ಅಂದು ಇಂಡಿಕಾ 1.0, ಇಂದು ನೆಕ್ಸಾನ್​ ಇವಿ… ಟಾಟಾ ಸಾಮ್ರಾಜ್ಯದ ಹಿಂದಿತ್ತು ಸವಾಲಿನ ರತ್ನನ ಪರಪಂಚ

ratan tata

ನವದೆಹಲಿ: ಭಾರತದ ಹೆಸರಾಂತ ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಶ್ವಾನ ಪ್ರೇಮಿ ರತನ್ ಟಾಟಾ (86) ಅವರು ನಿನ್ನೆ (ಅ.09) ತಡರಾತ್ರಿ ವಯೋಸಹಜ ಖಾಯಿಲೆಯಿಂದ ಕೊನೆಯುಸಿರೆಳೆದರು. ದೇಶದ ಉದ್ಯಮ ಜಗತ್ತಿಗೆ ಹೊಸ ರೂಪ ತಂದುಕೊಟ್ಟ ಟಾಟಾ (Ratan Tata) ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಭಾರತೀಯರು ಭಾರೀ ಆಘಾತಕ್ಕೊಳಗಾಗಿದ್ದಾರೆ. ಉದ್ಯಮ ಲೋಕದ ಅದ್ಭುತ ಶಕ್ತಿ ಇನ್ನು ಮುಂದೆ ನಮಗೆ ಕಾಣಿಸುವುದಿಲ್ಲ ಎಂಬ ಕೊರಗು ಪ್ರತಿಯೊಬ್ಬರಲ್ಲೂ ಕಾಡುತ್ತಿರುವುದು ಅಕ್ಷರಶಃ ಸತ್ಯ. ಮರೆಯಲಾಗದ ಮಾಣಿಕ್ಯನಾಗಿ ಇಹಲೋಕ ತ್ಯಜಿಸಿರುವ ರತನ್​ ಟಾಟಾ ಅವರು 140 ಕೋಟಿ ಭಾರತೀಯರಿಗೆ ಬಿಟ್ಟುಹೋದ ನೆನಪುಗಳಿವು.

ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಅಸಂವಿಧಾನಿಕ ಪದ ಬಳಕೆ

ರತನ್ ಟಾಟಾ ಅವರು ಬೆಳೆದು ಬಂದ ಹಾದಿಯನ್ನು ಒಮ್ಮೆ ತಿರುಗಿ ನೋಡಿದರೆ, ಅಲ್ಲಿ ಸಿಗುವುದೆಲ್ಲವೂ ಸೂರ್ತಿದಾಯಕ ಕಥೆಗಳು, ಜೀವನಕ್ಕೆ ಅಳವಡಿಸಿಕೊಳ್ಳುವ ಒಂದೊಳ್ಳೆ ಸಂದೇಶ, ಕಲಿಕೆಗಳು. ಕೇವಲ ವ್ಯಾಪಾರ ಅಥವಾ ಕೈಗಾರಿಕೋದ್ಯಮಿಯಾಗದ ರತನ್ ಟಾಟಾ, ಭಾರತದ ಆಟೋ ಮೋಟರ್ಸ್​​ ಜಗತ್ತನ್ನು ವಿಶ್ವಕ್ಕೆ ಪಸರಿಸಿದವರು. ಶಾಂತ, ನಮ್ರತೆಗೆ ಹೆಸರುವಾಸಿಯಾದ ಟಾಟಾ ಅವರು, ಭಾರತೀಯರ ಜೀವನವನ್ನು ಉತ್ತಮ ಹಾಗೂ ಸುಗಮಗೊಳಿಸಲು ಬದ್ಧರಾಗಿದ್ದವರು. ಇದೇ ಕಾರಣಕ್ಕೆ ಒಬ್ಬ ಉದ್ಯಮಿಯಾಗಿಯೂ ಅವರು ಕೋಟ್ಯಾಂತರ ಜನರ ಹೃದಯದಲ್ಲಿ ಇಂದು ಶಾಶ್ವತವಾಗಿ ನೆಲೆಯೂರಿರುವುದು.

ಕಾರು ತಯಾರಿಸುವುದು ಮಾತ್ರ ಕನಸಲ್ಲ

ಕಾರು ತಯಾರಿಸಬೇಕು, ಕಡಿಮೆ ವೆಚ್ಚದಲ್ಲಿ ಭಾರತೀಯರ ವಾಹನ ಖರೀದಿಸುವ ಆಸೆಯನ್ನು ಈಡೇರಿಸಬೇಕು ಎಂದು ಪಣತೊಟ್ಟ ರತನ್ ಟಾಟಾ, ಕೇವಲ ಇಷ್ಟಕ್ಕೆ ಮಾತ್ರ ತಮ್ಮ ಸೀಮಿತವಾಗಲಿಲ್ಲ. ಈ ಕಾರುಗಳ ತಯಾರಿಕೆ ಮೂಲಕ ಆಟೋಮೊಬೈಲ್ ಉದ್ಯಮಕ್ಕೆ ಒಂದು ಹೊಸ ರೂಪ ಕೊಡಬೇಕು, ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂಬ ಮಹತ್ವದ ಗುರಿಯನ್ನು ಹೊಂದಿದ್ದರು. ಅದಕ್ಕೆ ತಕ್ಕಂತೆ ಶ್ರಮವಹಿಸಿ, ತಮ್ಮ ಕನಸನ್ನು ಈಡೇರಿಸಿಕೊಳ್ಳುವುದರ ಜತೆ ಜತೆಗೆ ಭಾರತೀಯರ ಕನಸುಗಳನ್ನು ನನಸಾಗಿಸಿದರು. ಈ ರೋಚಕ ಪಯಣ ಆರಂಭವಾಗಿದ್ದೇ 1991ರಲ್ಲಿ. ಅಂದು ಟಾಟಾ ಮತ್ತು ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರತನ್ ಟಾಟಾ ಅವರು ತದನಂತರ ಮಾಡಿದ್ದೆಲ್ಲ ಇಂದು ಇತಿಹಾಸ.

ಟಾಟಾ ಇಂಡಿಕಾ: ಭಾರತದ ಮೊದಲ ಸ್ವದೇಶಿ ಕಾರು

tata

ರತನ್ ಟಾಟಾ ಅವರ ಆಟೋಮೊಬೈಲ್ ಪರಂಪರೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದ ಕಾರುಗಳ ಪೈಕಿ ಮೊದಲು ಹಾಗೂ ಇತಿಹಾಸ ನಿರ್ಮಿಸಿದ್ದು ಎಂದರೆ ಅದು 1998ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ಇಂಡಿಕಾ. ಈ ಕಾರು ಕೇವಲ ಒಂದು ಕುಟುಂಬದ ಪ್ರಯಾಣಕ್ಕೆ ಮಾತ್ರ ಸೀಮಿತವಾಗದೆ, ಕ್ಯಾಬ್​ ಯುಗದಲ್ಲಿ ಹೊಸ ಅಲೆಯನ್ನೇ ಹುಟ್ಟುಹಾಕಿತು. ಟ್ಯಾಕ್ಸಿ ಕಾರುಗಳ ಖರೀದಿಯಲ್ಲಿ ದೊಡ್ಡ ಮಟ್ಟದ ವ್ಯಾಪಾರ-ವಹಿವಾಟು ಮಾಡಿದ ಇಂಡಿಕಾ, ರತ್ನನ ಪರಪಂಚ ಎಷ್ಟು ದೊಡ್ಡದು, ವಿಶಾಲವಾದುದು ಎಂಬುದನ್ನು ಜನರಿಗೆ ಪರಿಚಯಿಸಿತು. ವಿದೇಶಿ ಮಾಡೆಲ್​ ಅಥವಾ ಅಂತಾರಾಷ್ಟ್ರೀಯ ಬ್ರ್ಯಾಂಡ್‌ ಕಾರುಗಳ ಮೊರೆ ಹೋಗುತ್ತಿದ್ದ ಭಾರತೀಯರು ತಮ್ಮ ದೇಶದಲ್ಲೇ ತಯಾರಾದ ಟಾಟಾ ಕಾರುಗಳ ಮೊರೆ ಹೋಗಿದ್ದು ನಿಜಕ್ಕೂ ರೋಚಕ, ರೋಮಾಂಚಕ ಎಂದೇ ಹೇಳಬಹುದು.

ಕೈಗೆಟುಕುವ ದರದಲ್ಲಿ ‘ನ್ಯಾನೋ’ ಪರಿಚಯ

ratan tata

ಅಗ್ಗವಲ್ಲದ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸದೆ ಹೋದರೂ ಕೈಗೆಟುಕುವ ಬೆಲೆಗೆ ನ್ಯಾನೋ ಗ್ರಾಹಕರ ಮುಂದೆ ಹಾಜರಾಯಿತು. ಮೊದ ಮೊದಲು ಈ ಕಾರನ್ನು ಲೇವಡಿ ಮಾಡಿದ್ದವರೇ ಹೆಚ್ಚು. ಆದ್ರೆ, ತದನಂತರ ಸಣ್ಣ ಕಾರುಗಳ ಪೈಕಿ ಭಾರತದಲ್ಲಿ ತನ್ನದೇ ಹೊಸ ಯುಗವನ್ನು ಆರಂಭಿಸಿದ ಟಾಟಾ ನ್ಯಾನೋ, ಒಂದು ಕಾಲಘಟ್ಟದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಸಾಲಿಗೆ ಸೇರ್ಪಡೆಯಾಯಿತು. ಬಹುಶಃ ಟಾಟಾ ಮೋಟಾರ್ಸ್ ಮತ್ತು ರತನ್ ಟಾಟಾ ಅವರ ಕಾರು ತಯಾರಿಕೆ ಸಾಧನೆಗಳಲ್ಲಿ ಅತ್ಯಂತ ಹಾಗೂ ಅಪ್ರತಿಮ ಸಾಧನೆ ಹೊರಹೊಮ್ಮಿದ್ದು 2008ರಲ್ಲಿ ಎಂಬುದು ಮತ್ತಷ್ಟು ವಿಶೇಷ. ಈ ಕಾರನ್ನು ‘ವಿಶ್ವದ ಅತ್ಯಂತ ಅಗ್ಗದ ಕಾರು’ ಎಂದು ಕರೆಯಲಾಗಿತ್ತು.

57ನೇ ವಯಸ್ಸಿಗೆ ಮತ್ತೆ ಮದುವೆ! ಒಂದು ಕಾಲದಲ್ಲಿ ವಿಲನ್ ಆಗಿ ಅಬ್ಬರಿಸಿದ ನಟ ಇಂದು ಖ್ಯಾತ Youtuber

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…