57ನೇ ವಯಸ್ಸಿಗೆ ಮತ್ತೆ ಮದುವೆ! ಒಂದು ಕಾಲದಲ್ಲಿ ವಿಲನ್ ಆಗಿ ಅಬ್ಬರಿಸಿದ ನಟ ಇಂದು ಖ್ಯಾತ Youtuber

ವಿಜಯವಾಣಿ-54
Published on

ಭಾರತೀಯ ಚಿತ್ರೋದ್ಯಮದಲ್ಲಿ ಅನೇಕ ಕಲಾವಿದರು ಇಂದು ದೊಡ್ಡ ಸ್ಟಾರ್​ಗಳಾಗಿ ಮಿಂಚಿ, ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ತಮ್ಮ ಆರಂಭದ ದಿನಗಳಲ್ಲಿ ಒಂದೇ ಒಂದು ಅವಕಾಶ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುವ ನಟ-ನಟಿಯರು, ಒಂದೆರೆಡು ಚಿತ್ರಗಳು ಸೂಪರ್ ಹಿಟ್ ಅಥವಾ ಬ್ಲಾಕ್​ಬಸ್ಟರ್​ ಸಾಲಿಗೆ ಸೇರಿಕೊಂಡರೆ ಸಾಕು ತಮಗೆ ಸ್ಟಾರ್​ ಪಟ್ಟ ಫಿಕ್ಸ್​ ಎಂದೇ ಭಾವಿಸುತ್ತಾರೆ. ಆದ್ರೆ, ಅಸಲಿಗೆ ಅದು ನಿಜವಲ್ಲ. ತಾವು ಆಯ್ಕೆ ಮಾಡುವ ಪಾತ್ರ, ಅದಕ್ಕೆ ಜೀವ ತುಂಬುವ ರೀತಿ, ನಟಿಸುವ ಪರಿ ಹಾಗೂ ಸಿನಿಪ್ರೇಕ್ಷಕರು ಮೆಚ್ಚಿ ಕೊಡುವ ಅಭಿಮಾನ ಮಾತ್ರ ಸ್ಟಾರ್​ ಎಂಬುದನ್ನು ಕಡೆಯ ತನಕ ಉಳಿಸಿಕೊಂಡು ಹೋಗಲು ಕಾರಣವಾಗುತ್ತದೆ. ತಾನೊಬ್ಬ ವಿಲನ್ (Villain)​ ಎಂದು ಗೊತ್ತಿದ್ದರೂ ಸಹ ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಿನಿಪ್ರಿಯರಿಂದ ಗುರುತಿಸಲ್ಪಟ್ಟ ಈ ಹಿರಿಯ ನಟ, ಇಂದು ಯುವಕರಂತೆ ದೇಶ-ವಿದೇಶ ಸುತ್ತಾಡುತ್ತ ಬಗೆಬಗೆಯ ಆಹಾರಗಳನ್ನು (Youtuber) ಸವಿಯುತ್ತಿದ್ದಾರೆ.

ಡ್ಯಾನಿ ಆಗಿ ಮಿಂಚಿದ ವಿಲನ್ ಇವರು

ಬಾಲಿವುಡ್​, ಸ್ಯಾಂಡಲ್​ವುಡ್​ನ ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ ಇವರು, ತಮಗೆ ನೀಡಲಾದ ನೆಗೆಟಿವ್ ರೋಲ್​ನಿಂದಲೇ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡರು. ಅಸಲಿಗೆ ಯಾರು ಈ ನಟ? ಅದರಲ್ಲೂ ವಿಲನ್​ ಎಂದೆಲ್ಲಾ ಹೇಳುತ್ತಿದ್ದೀರಿ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಆಶಿಶ್​ ವಿದ್ಯಾರ್ಥಿ. ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ‘ನಂದಿ’ ಚಿತ್ರದಲ್ಲಿ ಡ್ಯಾನಿ ಎಂಬ ವಿಲನ್ ಪಾತ್ರದಲ್ಲಿ ಮಿಂಚಿದ್ದ ಆಶಿಶ್​, ಇದೊಂದು ರೋಲ್​ನಿಂದಲೇ ಸಿನಿಪ್ರೇಕ್ಷಕರ ಮನದಲ್ಲಿ ತಮ್ಮ ಹೆಸರನ್ನು ಬರೆದಿಟ್ಟರು. ಇದೀಗ ಸಿನಿಮಾಗಳ ಕಡೆ ತಮ್ಮ ಒಲವನ್ನು ಕಳೆದುಕೊಂಡಿರುವ ವಿದ್ಯಾರ್ಥಿ, ಫುಡ್​ ಬ್ಲಾಗ್​ಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಆಹಾರ ಪ್ರಿಯ

ಸಿನಿ ಪಯಣದಲ್ಲಿ ಅದ್ಭುತ ಯಶಸ್ಸನ್ನು ಕಂಡ ಆಶಿಶ್​, ತಮ್ಮ 57ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ವಿಚಾರಕ್ಕೆ ಅಂದು ಭಾರೀ ಟೀಕೆಗಳಿಗೆ ಗುರಿಯಾಗಿದ್ದರು. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ, ಒಡಿಯಾ, ಮರಾಠಿ, ಇಂಗ್ಲಿಷ್ ಮತ್ತು ಬೆಂಗಾಲಿ ಚಿತ್ರಗಳಲ್ಲಿ ಅಭಿನಯಿಸಿರುವ ವಿದ್ಯಾರ್ಥಿ, ‘ದ್ರೋಹ ಕಾಲ್‌’ ಚಿತ್ರದಲ್ಲಿನ ಅಸಾಧಾರಣ ನಟನೆಗೆ ಗೌರವಾನ್ವಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದರು. ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಆಶಿಶ್​ ನೆಗಟಿವ್​ ಪಾತ್ರಗಳಿಂದಲೇ ಹೆಚ್ಚು ಹೆಸರುವಾಸಿ ಎಂದರೆ ತಪ್ಪಾಗಲಾರದು.

ದೇಶ-ವಿದೇಶ ಪ್ರಯಾಣ

ಸಿನಿಮಾಗೆ ಮಾತ್ರ ಸೀಮಿತವಾಗದ ಆಶಿಶ್​, ಇದೀಗ ತಮ್ಮದೇ ಯೂಟ್ಯೂಬ್ ಚಾನೆಲ್​ ಮಾಡಿಕೊಂಡಿದ್ದು, ಅದರಲ್ಲಿ ಆಹಾರಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ತಮ್ಮ ದಿನಚರಿಯ ಒಂದಷ್ಟು ದೃಶ್ಯಗಳನ್ನು ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ತಾನೊಬ್ಬ ಆಹಾರ ಪ್ರಿಯ ಎಂಬುದನ್ನು ಆಗಾಗ್ಗೆ ಒತ್ತಿ ಹೇಳುವ ಅವರು, ವಿಧ ವಿಧವಾದ ಆಹಾರಗಳನ್ನು ಸವಿಯುವ ಮೂಲಕ ಅದನ್ನು ತಮ್ಮ ವೀಕ್ಷಕರಿಗೂ ತೋರಿಸುತ್ತಾರೆ. ಒಟ್ಟಾರೆ ಅಂದಿನ ಸಿನಿ ಜಗತ್ತಿನಲ್ಲಿ ಮಿಂಚಿದ ಆಶಿಶ್​ ವಿದ್ಯಾರ್ಥಿ, ಇಂದಿನ ಕಾಲಘಟ್ಟದ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಮಿಂಚುತ್ತಿರುವುದು ನಿಜಕ್ಕೂ ಮೆಚ್ಚುವಂತ ವಿಷಯ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net