ಅರಣ್ಯ ಅಪರಾಧ ತಡೆಗೆ ಬಲ, ಎಫ್ಐಆರ್ ಗೆ ತಂತ್ರಾಂಶ ಜಾಲ

forest
Published on

ವಿಲಾಸ ಮೇಲಗಿರಿ ಬೆಂಗಳೂರು

ಅರಣ್ಯ ಒತ್ತುವರಿ ತೆರವಿನಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿರುವ ರಾಜ್ಯ ಅರಣ್ಯ ಸಚಿವರು, ಅರಣ್ಯ ಅಪರಾಧ ನಿಗ್ರಹಕ್ಕೆ ತಂತ್ರಜ್ಞಾನ ಬಲ ತುಂಬಲು ಮುಂದಾಗಿದ್ದಾರೆ.

ಅರಣ್ಯ ಕಾಯ್ದೆಯಡಿ ಇದುವರೆಗೆ ಕೇಸು ದಾಖಲಿಸಲು ಇದ್ದ ಕೈ ಬರಹ ಎ್ಐಆರ್ ಪದ್ಧತಿಗೆ ಶೀಘ್ರದಲ್ಲೇ ತಿಲಾಂಜಲಿ ನೀಡಲಿದ್ದಾರೆ. ಪೊಲೀಸ್ ಇಲಾಖೆ ಮಾದರಿಯಲ್ಲಿ ಆನ್‌ಲೈನ್ ಎ್ಐಆರ್ ವ್ಯವಸ್ಥೆ ಜಾರಿಗೆ ತರಲಿದ್ದಾರೆ. ಇದಕ್ಕಾಗಿ ತಂತ್ರಾಂಶ ಸಿದ್ಧವಾಗಿದ್ದು, ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಈ ವ್ಯವಸ್ಥೆ ದೇಶದಲ್ಲೇ ಮೊದಲನೆಯದ್ದಾಗಿದ್ದು, ಈ ಮಾಸಾಂತ್ಯದೊಳಗೆ ಚಾಲನೆ ದೊರೆಯಲಿದೆ.

ಭೂ ಒತ್ತುವರಿ, ಮರ/ನಾಟಾ ಅಕ್ರಮ ಕಡಿತಲೆ, ಪ್ರಾಣಿಗಳ ಅಂಗಾಂಗ ಕಳ್ಳತನ, ಕಳ್ಳಬೇಟೆ, ಅರಣ್ಯ ಅತಿಕ್ರಮ ಪ್ರವೇಶ, ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ, ವನಪ್ರದೇಶದಲ್ಲಿ ಆ್ ರೋಡ್ ಬೈಕ್ ಮತ್ತು ಜೀಪ್ ರೇಸ್, ವನ್ಯಜೀವಿಗಳಿಗೆ ಕಿರುಕುಳ ಸೇರಿ ಎಲ್ಲ ಅರಣ್ಯ ಅಪರಾಧ ಪ್ರಕರಣಗಳಿಗೆ ಆನ್‌ಲೈನ್ ಎ್ಐಆರ್ ದಾಖಲಾಗುತ್ತವೆ.

ಕರ್ನಾಟಕ ಅರಣ್ಯ ಕಾಯಿದೆ 1963, ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಮತ್ತು ಅರಣ್ಯ ಸಂರಕ್ಷಣಾ ಕಾಯಿದೆ 1980ರ ವಿವಿಧ ಸೆಕ್ಷನ್‌ಗಳಡಿ ಪ್ರಕರಣಗಳನ್ನು ಆನ್‌ಲೈನ್ ಮೂಲಕವೇ ದಾಖಲಿಸಲಾಗುತ್ತದೆ.

1980ರಿಂದ ಈಚೆಗೆ ಶಿವಮೊಗ್ಗ ವೃತ್ತದ 12 ಆರ್‌ಎ್ಒ ವ್ಯಾಪ್ತಿಯಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ 2013 ಪ್ರಕರಣ ದಾಖಲಾಗಿವೆ. ಈ ಪೈಕಿ ಕೇವಲ 130 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಅರಣ್ಯ ಇಲಾಖೆ ಈವರೆಗೆ ರಾಜ್ಯಾದ್ಯಂತ ಸುಮಾರು 90 ಸಾವಿರ ಪ್ರಕರಣ ದಾಖಲಿಸಿದೆ. ಆದರೆ, ಯಾವ ಪ್ರಕರಣಗಳು ಎಷ್ಟು ದಾಖಲಾಗಿವೆ ಎಂಬ ಮಾಹಿತಿ ಸಿಗುವುದು ಕಷ್ಟ. ಆ ಪ್ರಕರಣಗಳ ವಿಲೇವಾರಿ, ಅನುಪಾಲನಾ ವರದಿ, ಪ್ರಗತಿ ಪರಿಶೀಲನೆಯಂತು ಇನ್ನೂ ಕಷ್ಟವಾಗುತ್ತಿತ್ತು.

ದೂರುದಾರರು ಕಚೇರಿಗೆ ಅಲೆದು ದೂರಿನ ಸ್ಥಿತಿಗತಿ ವಿಚಾರಿಸಬೇಕಿತ್ತು. ಯಾವ ಕಡತ ಎಲ್ಲಿದೆ? ಯಾವ ಹಂತದಲ್ಲಿದೆ ಎಂಬುದನ್ನು ಹುಡುಕಾಡುವುದು ದುಸ್ತರವಾಗಿತ್ತು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಇಲಾಖೆ ಆನ್‌ಲೈನ್ ವ್ಯವಸ್ಥೆ ರೂಪಿಸಿದೆ.

ಪ್ರಗತಿ ಪರಿಶೀಲನೆಗೆ ಪೂರಕ

ಆನ್‌ಲೈನ್‌ನಲ್ಲಿ ದೂರು ದಾಖಲಿಸುವುದರಿಂದ ದೂರಿನ ಸ್ಥಿತಿಗತಿ, ಯಾವ ಹಂತದಲ್ಲಿದೆ? ದೂರುದಾರರು ಯಾರನ್ನು ಸಂಪರ್ಕಿಸಬೇಕು ಎಂಬೆಲ್ಲ ಮಾಹಿತಿ ಲಭ್ಯವಾಗುತ್ತದೆ. ಉನ್ನತಾಧಿಕಾರಿಗಳಿಗೂ ಎಲ್ಲ ವಲಯದ ದೂರುಗಳ ಪ್ರಗತಿ ಪರಿಶೀಲನೆಗೆ ನಿಖರ ಮಾಹಿತಿ ದೊರೆಯುತ್ತದೆ.

ವಿವಿಧ ವಲಯಗಳ ಅಧಿಕಾರಿಗಳ ನಡುವೆ ಆರೋಗ್ಯಕರ ಪೈಪೋಟಿಗೂ ಇದು ಕಾರಣವಾಗುತ್ತದೆ. ಅರಣ್ಯ ಅಪರಾಧ ತಡೆಯಲ್ಲಿ ಕ್ರಾಂತಿಕಾರಿ ಪ್ರಯೋಗ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಒಬ್ಬ ವಲಯ ಅರಣ್ಯಾಧಿಕಾರಿಯನ್ನು ನೋಡಿ ಇನ್ನೊಬ್ಬರು ಕೆಲಸ ಮಾಡಲು ಪ್ರೇರಣೆ ಲಭಿಸುತ್ತದೆ. ಯಾವ ಅಧಿಕಾರಿ ಎಷ್ಟು ಎ್ಐಆರ್ ದಾಖಲಿಸಿದ್ದಾರೆ, ಎಷ್ಟು ಚಾರ್ಜ್‌ಶೀಟ್ ಹಾಕಿದ್ದಾರೆ ಎಂಬುದು ಪರಸ್ಪರ ತಿಳಿಯುವುದರಿಂದ ಕೆಲಸದಲ್ಲಿ ಪೈಪೋಟಿ ಹೆಚ್ಚಿ ದಕ್ಷತೆಯೂ ಬರುತ್ತದೆ. ದೂರುದಾರರಿಗೆ ತ್ವರಿತ ನ್ಯಾಯ ದೊರೆಯಲು ಸಹಕಾರಿಯಾಗುತ್ತದೆ. ಅಧಿಕಾರಿಗಳ ಬಡ್ತಿ ಸಂದರ್ಭದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ನೆರವಾಗುತ್ತದೆ.

ಹಳೆಯ ಪ್ರಕರಣಗಳಿಗೂ ಮರುಜೀವ

ಕೈಬರಹದಲ್ಲಿ ದಾಖಲಾಗಿದ್ದ ಹಳೆಯ ಗಂಭೀರ ಸ್ವರೂಪದ ಪ್ರಕರಣಗಳನ್ನೂ ಹಂತ ಹಂತವಾಗಿ ಆನ್‌ಲೈನ್ ವ್ಯವಸ್ಥೆಗೆ ತರಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಫ್ಐಆರ್ ಮಿಸ್ ಯೂಸ್ ಆಗಲ್ಲ...

ಈಗಿರುವ ಪದ್ಧತಿಯಲ್ಲಿ ಎ್ಐಆರ್ ದಾಖಲಿಸಲು ಪ್ರತಿ ಆರ್‌ಎ್ಒಗಳಿಗೆ ಬುಕ್‌ಲೆಟ್ ನೀಡಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಹಾಳೆಗಳಲ್ಲಿ ಅಪರಾಧ ಕುರಿತ ವಿವರ ದಾಖಲಿಸುವುದು ಕಷ್ಟವಾಗುತ್ತದೆ. ತಪ್ಪು ಬರೆಯುವುದು, ತಿದ್ದುವುದೂ ನಡೆಯುತ್ತಿತ್ತು. ಜೊತೆಗೆ ಆರ್‌ಎ್ಒಗಿಂತ ಕೆಳಗಿನ ದರ್ಜೆಯ ಅಧಿಕಾರಿಗಳು ಎ್ಐಆರ್ ದಾಖಲಿಸುತ್ತಿದ್ದ ಕಾರಣ, ಕೋರ್ಟ್‌ನಲ್ಲಿ ಅರಣ್ಯ ಇಲಾಖೆಗಳ ಬಹುತೇಕ ಪ್ರಕರಣಗಳು ವಜಾ ಆಗುತ್ತಿದ್ದವು.

ಆನ್‌ಲೈನ್ ಅನುಕೂಲ ಏನು..?

-ಬೆರಳ ತುದಿಯಲ್ಲಿ ಮಾಹಿತಿ

-ಅಪರಾಧ ತಡೆಯುವಲ್ಲಿ ಮಹತ್ವದ ಹೆಜ್ಜೆ

-ಅರಣ್ಯ ಕಾಯ್ದೆಗಳ ಅನುಷ್ಠಾನಕ್ಕೆ ಮತ್ತಷ್ಟು ಬಲ

-ಆಡಳಿತದಲ್ಲಿ ಪಾರದರ್ಶಕತೆ, ದೂರುದಾರಿಗೆ ನಿಶ್ಚಿತ ಮಾಹಿತಿ

-ಅರಣ್ಯ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಳ

-ಅರಣ್ಯ ಅಪರಾಧ ಸಂಖ್ಯೆ ಶೇ.50 ಇಳಿಕೆ ನಿರೀಕ್ಷೆ.

-ಅಪರಾಧ ತನಿಖೆ ಸುಲಲಿತ, ಅಪರಾಧಿಗೆ ದಂಡನೆ ಖಚಿತ

ಆನ್‌ಲೈನ್ ಎಫ್ಐಆರ್ ವ್ಯವಸ್ಥೆಯ ಅನುಷ್ಠಾನ ಅರಣ್ಯ ಅಪರಾಧಗಳನ್ನು ತಡೆಯುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗುವ ನಿರೀಕ್ಷೆ ಇದೆ. ಇದು ಆಡಳಿತದಲ್ಲಿ ಪಾರದರ್ಶಕತೆ ತರುವುದರ ಜೊತೆಗೆ ಹೊಸ ಒತ್ತುವರಿ ಮತ್ತು ಅಕ್ರಮ ಮರ ಕಡಿತಲೆ ಪ್ರಕರಣಗಳಿಗೆ ಕಡಿವಾಣ ಹಾಕಲಿದೆ.

ಈಶ್ವರ ಖಂಡ್ರೆ, ಅರಣ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net