ನವರಾತ್ರಿ ವೈಭವ ಆರಂಭ: ಇಂದು ಮೈಸೂರು ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು ಪಟ್ಟಿ ಹೀಗಿದೆ

Mysuru
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ನವರಾತ್ರಿ ವೈಭವ ಆರಂಭವಾಗಿದೆ. 411ನೇ ದಸರಾಗೆ ಇಂದು ಚಾಲನೆ ದೊರೆಯಲಿದ್ದು, ಅರಮನೆಯಲ್ಲಿ ಇಂದಿನಿಂದ ಸಂಪ್ರದಾಯಿಕ ದಸರಾ ಆಚರಣೆ ನಡೆಯಲಿದೆ.

ನವರಾತ್ರಿ ಮೊದಲ ದಿನ ಅರಮಣೆಯಲ್ಲಿ ನಡೆಯುವ ಕಾರ್ಯಕ್ರಮಗಳು ಹೀಗಿವೆ... ಇಂದು ಮುಂಜಾನೆ 4.30 ರಿಂದಲೇ ಪೂಜಾ-ಕೈಂಕರ್ಯಗಳು ಆರಂಭವಾಗಿದೆ. ಬೆಳಗ್ಗೆ 6 ರಿಂದ 6.11ರ ವರೆಗೆ ದರ್ಬಾರ್ ಹಾಲ್‌ನ ಸಿಂಹಾಸನಕ್ಕೆ ಸಿಂಹದ ತಲೆ ಜೋಡಣೆ ಮಾಡಲಾಗಿದೆ. 6.30ರಿಂದ 7.30ರ ವರೆಗೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಕಳಶ ತರಲಾಗುವುದು. 7.45ರಿಂದ 8.55ರ ವೇಳೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್‌ಗೆ ಕಂಕಣ ಧಾರಣೆ ಮಾಡಲಾಗುತ್ತದೆ.

9 ರಿಂದ 9.30 ರವರೆಗೆ ಪಟ್ಟದ ಆನೆ, ಹಸು, ಒಂಟೆ, ಕುದುರೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. 11.45ರಿಂದ 12.15ರ ನಡುವೆ ಸಿಂಹಾಸನಾರೋಹಣ ಮಾಡಿ ಯದುವೀರ್​ ಖಾಸಗಿ ದರ್ಬಾರ್ ಮಾಡಲಿದ್ದಾರೆ. ಕೋವಿಡ್ ಕಾರಣದಿಂದ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಧಾರ್ಮಿಕ ಪೂಜೆಗೂ ಕೆಲವರಿಗಷ್ಟೆ ಅವಕಾಶ ನೀಡಲಾಗಿದೆ. ಮಾಧ್ಯಮಗಳಿಗು ನಿರ್ಬಂಧ ಹೇರಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net