ಕರೊನಾ ಸೋಂಕನ್ನು ಗರ್ಲ್‌ಫ್ರೆಂಡ್‌ಗೆ ಹೋಲಿಸಿದ ಪ್ರೊಫೆಸರ್!

Radhakrishna KE
Published on

ಬೆಂಗಳೂರು: ಕರೊನಾ ಸಾಂಕ್ರಾಮಿಕ‌ ಹೆಸರು ಕೇಳಿದರೆ ಬೆಚ್ಚಿಬೀಳುವವರೇ ಹೆಚ್ಚು, ಆದರೆ ಇಲ್ಲೊಬ್ಬರು ಕರೊನಾವನ್ನು ಗರ್ಲ್ ಫ್ರೆಂಡ್‌ಗೆ ಹೋಲಿಸಿ ಗಮನಸೆಳೆದಿದ್ದಾರೆ.‌

ಕಾಂಗ್ರೆಸ್‌ನ ಚಿಂತಕರ ಚಾವಡಿಯಲ್ಲಿ ಕೆಲಸ ಮಾಡುವ ಪ್ರೊಫೆಸರ್ ಕೆ.ಇ. ರಾಧಾಕೃಷ್ಣ ಅವರಿಗೆ ಕರೊನಾ ಸೋಂಕು ತಗುಲಿದೆ. ಈ ವಿಷಯವನ್ನು ಅವರು ವಿಶೇಷ ರೀತಿಯಲ್ಲಿ ತಮ್ಮ ಸ್ನೇಹಿತರ ಬಳಿ ಹಂಚಿಕೊಂಡಿದ್ದಾರೆ.

ಫೇಸ್​​ಬುಕ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪ್ರೊ.ರಾಧಾಕೃಷ್ಣ, ಕಳೆದ ಒಂದು ವರ್ಷದಿಂದಲೂ ನನ್ನನ್ನು ಸ್ಪರ್ಶಿಸಲು ಮತ್ತು ಕನಿಷ್ಠ ನೋಡಲೂ ನಿರಾಕರಿಸಿದ್ದ ನನ್ನ ಗರ್ಲ್ ಫ್ರೆಂಡ್ ಕೊನೆಗೂ ನನ್ನನ್ನು ಸ್ಪರ್ಶಿಸಿದ್ದಾಳೆ. ಆ ಬ್ಯೂಟಿಫುಲ್ ಲೇಡಿ ಮಿಸ್ ಕೋವಿಡ್ ಕರೋನಾ. ಆಕೆಯಿಂದ ದೂರ ಆಗಲು ಈಗ ಒಳ್ಳೆಯ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದ್ದೇನೆ ಎಂದು ಅವರು ಸ್ಟೇಟಸ್ ಹಾಕಿಕೊಂಡು ಗಮನ ಸೆಳೆದಿದ್ದಾರೆ.

ರಾಧಾಕೃಷ್ಣ ಅವರು ಈ ಹಿಂದೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಸಹ ತೊಡಗಿಸಿಕೊಂಡವರು. 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net