ಏ. 15ರೊಳಗೆ ಕರೊನಾದಿಂದಾಗಿ ದೇಶದಲ್ಲಿ 50 ಸಾವಿರ ಜನರ ಸಾವು!; ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

Corona Death
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಭಾರತದಲ್ಲಿ ಕರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದು, ಸೋಂಕಿನ ಪ್ರಕರಣಗಳ ಹೆಚ್ಚಳದ ಜತೆಗೆ ಸಾವಿನ ಪ್ರಮಾಣವೂ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವಡೆ ಲಾಕ್​ಡೌನ್​, ಕೆಲವು ನಿರ್ಬಂಧಗಳನ್ನು ಹೇರಲಾಗಿದ್ದು, ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಅದೇನೆಂದರೆ.. ಏಪ್ರಿಲ್​ 15ರೊಳಗೆ ಭಾರತದಲ್ಲಿ ಕೋವಿಡ್​ನಿಂದಾಗಿ 50 ಸಾವಿರ ಮಂದಿ ಸಾವಿಗೀಡಾಗಲಿದ್ದಾರೆ. ಅದರಲ್ಲೂ ಇಂಥದ್ದೊಂದು ಎಚ್ಚರಿಕೆಯನ್ನೂ ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಬಂಧ ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರತಿಕ್ರಿಯಿಸಿ ಸ್ಪಷ್ಟನೆಯನ್ನು ನೀಡಿದೆ.

ಭಾರತದಲ್ಲಿ ಏ. 15ರೊಳಗೆ 50 ಸಾವಿರ ಮಂದಿ ಕೋವಿಡ್​-19ನಿಂದಾಗಿ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಲ್ಲ. ಅದು ಸುಳ್ಳು ಸುದ್ದಿ, ಅಂಥದ್ದೊಂದು ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಸ್ಪಷ್ಟನೆ ನೀಡಿದೆ. ಭಾರತದಲ್ಲಿ ಇರುವರೆಗೆ 1,26,86,049 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಕರೊನಾದಿಂದಾಗಿ ಸತ್ತವರ ಸಂಖ್ಯೆ 1,65,547 ಏರಿದೆ ಎಂದು ಅದು ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net