More

    ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

    ಚಾಮರಾಜನಗರ: ಕರೊನಾ ಸೋಂಕು ತಗುಲದಿರಲು ಹಾಗೂ ವ್ಯಾಪಿಸುತ್ತಿರುವ ಸೋಂಕನ್ನು ನಿಯಂತ್ರಿಸಲು ಲಸಿಕೆ ಕಂಡುಹಿಡಿಯಲಾಗಿದ್ದು, ಜಗತ್ತಿನಾದ್ಯಂತ ಲಸಿಕೆ ನೀಡುವ ಅಭಿಯಾನವೇ ನಡೆಯುತ್ತಿದೆ. ದೇಶ-ರಾಜ್ಯದಲ್ಲೂ ವ್ಯಾಪಕವಾಗಿ ಕರೊನಾ ಲಸಿಕೆ ನೀಡಲಾಗುತ್ತಿದೆ.

    ಲಸಿಕೆ ಕಂಡುಹಿಡಿಯಲಾಗಿದೆ, ಲಸಿಕೆ ಸಿಗುತ್ತಿದೆ ಎಂದು ನಿರಾಳರಾಗಿದ್ದ ಜನರಿಗೂ ಇದೀಗ ಲಸಿಕೆ ಇದ್ದರೂ ಕರೊನಾ ಕುರಿತು ಆತಂಕ ಪಡುವಂತಾಗಿದೆ. ಏಕೆಂದರೆ ಲಸಿಕೆ ಪಡೆದವರಲ್ಲೇ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳೂ ಕೇಳಿಬಂದಿವೆ. ಅದರಲ್ಲೂ ಈಗ ಲಸಿಕೆ ಪಡೆದ ಜಿಲ್ಲಾಧಿಕಾರಿಯೊಬ್ಬರಲ್ಲೂ ಕೋವಿಡ್​-19 ಸೋಂಕು ಪತ್ತೆಯಾಗಿದೆ.

    ಇದನ್ನೂ ಓದಿ: ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

    ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಕರೊನಾ ತಗುಲಿದೆ‌. ಕೆಲವು ದಿನಗಳಿಂದ ನೆಗಡಿ-ಶೀತ, ಗಂಟಲು ನೋವಿನಿಂದ ಬಳಲುತ್ತಿದ್ದ ರವಿ ಅವರು ಭಾನುವಾರ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿದಾಗ ಕರೊನಾ ದೃಢಪಟ್ಟಿದೆ. ರವಿ ಅವರು ಫೆ. 8ರಂದು ಮೊದಲ ಡೋಸ್ ಹಾಗೂ ಮಾ. 8ರಂದು 2ನೇ ಡೋಸ್ ಕರೊನಾ ಲಸಿಕೆ ಪಡೆದಿದ್ದರು. ಈಗ ಕರೊನಾ ಪಾಸಿಟಿವ್ ದೃಢಪಟ್ಟಿರುವುದರಿಂದ ಹೋಂ ಐಸೋಲೇಷನ್​ನಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಚೀನಾದ ಲಸಿಕೆ ಪಡೆದು ಪ್ರಧಾನಿ ಕರೊನಾ ಸೋಂಕು ತರಿಸಿಕೊಂಡ ಬೆನ್ನಲ್ಲೇ ಈಗ ರಾಷ್ಟ್ರಪತಿ ಸರದಿ!

    ರಾಜ್ಯದಲ್ಲಿ ಮತ್ತೊಂದು ಬ್ಲಾಸ್ಟ್​: ಸ್ಫೋಟಕ ಸಾಮಗ್ರಿ ಸಿಡಿದು ಇಬ್ಬರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ…

    ಹಳ್ಳಕ್ಕೆ ಬಿದ್ದ ಬೈಕ್​: ಮೂವರು ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಸಾವು, ಇನ್ನೊಬ್ಬನಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts