More

    ಚೀನಾದ ಲಸಿಕೆ ಪಡೆದು ಪ್ರಧಾನಿ ಕರೊನಾ ಸೋಂಕು ತರಿಸಿಕೊಂಡ ಬೆನ್ನಲ್ಲೇ ಈಗ ರಾಷ್ಟ್ರಪತಿ ಸರದಿ!

    ಇಸ್ಲಾಮಾಬಾದ್: ಈಗ ಎಲ್ಲೆಲ್ಲೂ ಕರೊನಾ ಲಸಿಕೆಯ ಸುದ್ದಿ. ಕರೊನಾ ತವರು ಚೀನಾ ಕೂಡ ಇದಾಗಲೇ ಕೆಲವು ಲಸಿಕೆಗಳನ್ನು ತಯಾರಿಸಿದ್ದು, ಕೆಲ ದೇಶಗಳಿಗೆ ಅದನ್ನು ಪೂರೈಕೆ ಮಾಡುತ್ತಿದೆ. ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಕೂಡ ಚೀನಾ ನೆರವು ನೀಡುತ್ತಿದ್ದು, ತನ್ನಲ್ಲಿ ತಯಾರು ಮಾಡಿರುವ ಲಸಿಕೆಗಳನ್ನು ಪೂರೈಕೆ ಮಾಡುತ್ತಿದೆ.

    ಕೆಲ ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಕರೊನಾವೈರಸ್ ಸೋಂಕಿಗೆ ತುತ್ತಾಗಿದ್ದರು. ಚೀನಾದ ಸೀನೋಫಾರ್ಮ್ ಕೊವಿಡ್-19 ಲಸಿಕೆ ಹಾಕಿಸಿಕೊಂಡ ನಂತರ ಇವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಲಸಿಕೆ ಕೆಲವು ದೇಶಗಳು ತಮಗೆ ಬೇಡ ಎಂದಿದ್ದರೆ ಪಾಕಿಸ್ತಾನವು ಇದಕ್ಕೆ ಅನುಮತಿ ಕೊಟ್ಟಿತ್ತು. ನಂತರ ಲಸಿಕೆ ಹಾಸಿಕೊಂಡ ಕೆಲವೇ ದಿನಗಳಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೋಂಕು ತಗುಲಿತ್ತು.

    ಇದೀಗ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಸರದಿ. ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಂತರ ವೈದ್ಯಕೀಯ ಪರೀಕ್ಷೆಗೆ ಇವರನ್ನು ಒಳಪಡಿಸಿದಾಗ ಕರೊನಾ ಪಾಸಿಟಿವ್‌ ಬಂದಿದೆ. ಇವರು ಕೂಡ ಸೀನೋಫಾರ್ಮ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೊದಲ ಡೋಸ್ ತೆಗೆದುಕೊಂಡ ನಂತರದಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಕುರಿತು ಖುದ್ದು ಟ್ವೀಟ್‌ ಮಾಡಿರುವ ಆರಿಫ್‌, ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಎಲ್ಲಾ ಸೋಂಕಿತರು ಅಲ್ಲಾಹು ಕರುಣೆಯಿಂದ ಚೇತಿಸಿಕೊಳ್ಳಲಿ ಎಂದಿದ್ದಾರೆ.

    ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದೇನೆ. ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ, ಮತ್ತೊಂದು ಲಸಿಕೆ ಪಡೆದುಕೊಂಡಿದ್ದರೆ ರೋಗನಿರೋಧಕ ಶಕ್ತಿ ಬರುತ್ತಿತ್ತು ಎಂದು ತಾವು ಸೋಂಕಿಗೆ ಒಳಗಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಕೋವಿಡ್-19 ಸೋಂಕಿತರ ಮೇಲೆ ಅಲ್ಲಾನ ಕೃಪೆ ಇರುತ್ತದೆ. ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡ ಸಂದರ್ಭದಲ್ಲಿ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರಕ್ರಿಯೆ ಆರಂಭವಾಗುವುದಿಲ್ಲ. ಎರಡನೇ ಡೋಸ್ ಲಸಿಕೆ ನಂತರದಲ್ಲಿ ಈ ಕ್ರಿಯೆ ಶುರುವಾಗಲಿದೆ. ದಯವಿಟ್ಟು ಕೊರೊನಾವೈರಸ್ ಬಗ್ಗೆ ಎಲ್ಲರೂ ಜಾಗೃತರಾಗಿರಿ ಎಂದು ಅವರು ಹೇಳಿದ್ದಾರೆ.

    ಏಪ್ರಿಲ್‌ ತಿಂಗಳಿನಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಇದೆಯೆ? ಹಾಗಿದ್ದರೆ ರಜೆಯ ಬಗ್ಗೆ ತಿಳಿದುಕೊಳ್ಳಿ

    ಬಿಜೆಪಿ ಕಾರ್ಯಕರ್ತನ ಕಪಾಳಕ್ಕೆ ಹೊಡೆದು ವಿವಾದ ಮೈಮೇಲೆ ಎಳೆದುಕೊಂಡ ಕೇಂದ್ರ ಸಚಿವ

    ಪತ್ನಿಗೆ ಕರೆ ಮಾಡಿ ತಗ್ಲಾಕೊಂಡ ಕುಖ್ಯಾತ ಕಳ್ಳ- ಮೊಬೈಲ್​ ನಂಬರ್​ ಬದಲಿಸಿದ್ರೂ ಸಿಕ್ಕಿಬಿದ್ದ ಅಂತಾರಾಜ್ಯ ಖದೀಮರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts