More

    ಬಿಜೆಪಿ ಕಾರ್ಯಕರ್ತನ ಕಪಾಳಕ್ಕೆ ಹೊಡೆದು ವಿವಾದ ಮೈಮೇಲೆ ಎಳೆದುಕೊಂಡ ಕೇಂದ್ರ ಸಚಿವ

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಇನ್ನೇನು ಚುನಾವಣೆ ಸನ್ನಿಹಿತವಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನಿಂದ ಮತಯಾಚನೆಯಲ್ಲಿ ತೊಡಗಿವೆ. ಈ ನಡುವೆಯೇ ನಡೆದ ಹೋಲಿ ದಿನದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಒಂದು ಎಡವಟ್ಟು ಮಾಡಿಕೊಂಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

    ಅಷ್ಟಕ್ಕೂ ಅವರು ಮಾಡಿರುವುದು ಏನೆಂದರೆ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರ ಕಪಾಳಕ್ಕೆ ಹೊಡೆದಿದ್ದಾರೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಾಬುಲ್ ಸುಪ್ರಿಯೊ ತಮ್ಮದೇ ಪಕ್ಷದ ವ್ಯಕ್ತಿಯೊಬ್ಬರಿಗೆ ಈ ಸಂದರ್ಭದಲ್ಲಿ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.

    ಟೋಲಿಗಂಜ್‌ನಲ್ಲಿರುವ ಬಿಜೆಪಿಯ ಕಚೇರಿಯಲ್ಲಿ ನಡೆದ ಡೊಲ್ಜಾತ್ರ ಹಬ್ಬದ ಅಂಗವಾಗಿ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಸಚಿವರು ತಮ್ಮ ಪಕ್ಷದ ಕಾರ್ಯಕತರ್ತರೊಬ್ಬರ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. ಟಿವಿ ಕ್ಯಾಮಾರಗಾಳ ಮುಂದೆ ಪೋಸ್ ನೀಡಿ, ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಸಚಿವರನ್ನು ಎಚ್ಚರಿಸಿದ್ದ ಕಾರ್ಯಕರ್ತ, ಈ ರೀತಿ ಹೇಳಿಕೆ ನೀಡುವ ಬದಲಿಗೆ ಗಂಭೀರವಾದ ಪ್ರಚಾರದಲ್ಲಿ ತೊಡಗಿಸಿಕೊಳ್ಳೀ ಎಂದು ಸಲಹೆ ಮಾಡಿದ್ದಾರೆ.

    ಮೊದಲ ಬಾರಿಗೆ ಕಾರ್ಯಕರ್ತ ಸಲಹೆ ನೀಡಿದಾಗ ಆತನಿಗೆ ಸುಮ್ಮನೆ ಇರುವಂತೆ ಸುಪ್ರಿಯೊ ತಿಳಿಸಿದ್ದಾರೆ. ಆದರೆ ಆ ವ್ಯಕ್ತಿ ಪುನಃ ಪುನಃ ಇದನ್ನೇ ಹೇಳಿದಾಗ ತಾಳ್ಮೆ ಕಳೆದುಕೊಂಡ ಸುಪ್ರಿಯೊ ಕಪಾಳಕ್ಕೆ ಹೊಡೆದಿದ್ದಾರೆ. ಇದು ಭಾರಿ ಸುದ್ದಿಯಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಸುಪ್ರಿಯೋ, ನಾನು ಬೇಕಂತಲೇ ಅವರ ಕಪಾಳಕ್ಕೆ ಹೊಡೆದಿಲ್ಲ, ಆದರೆ ತಾಳ್ಮೆ ಕಳೆದುಕೊಂಡು ಹೀಗೆ ವರ್ತಿಸಿದೆ ಎಂದಿದ್ದಾರೆ.

    ಪತ್ನಿಗೆ ಕರೆ ಮಾಡಿ ತಗ್ಲಾಕೊಂಡ ಕುಖ್ಯಾತ ಕಳ್ಳ- ಮೊಬೈಲ್​ ನಂಬರ್​ ಬದಲಿಸಿದ್ರೂ ಸಿಕ್ಕಿಬಿದ್ದ ಅಂತಾರಾಜ್ಯ ಖದೀಮರು!

    ವಾರದಿಂದ ಉಂಟಾಗಿದ್ದ ಭಯಾನಕ ಟ್ರಾಫಿಕ್​ ಜಾಮ್​ಗೆ ಕೊನೆಗೂ ಸಿಕ್ತು ಅಲ್ಪ ಮುಕ್ತಿ- ಅಲುಗಾಡಿದ ವಾಹನ!

    ಮಾಜಿ ಮುಖ್ಯಮಂತ್ರಿಯಿಂದಲೇ ದೇಶದ ಭದ್ರತೆಗೆ ಧಕ್ಕೆ! ಸಿಗಲಿಲ್ಲ ಪಾಸ್​ಪೋರ್ಟ್​- ಅರ್ಜಿ ತಿರಸ್ಕೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts