More

    ಕೊಹ್ಲಿ ವಿಚಾರದಲ್ಲಿ ಕೊನೆಗೂ ಸತ್ಯ ಒಪ್ಪಿಕೊಂಡ ಬಾಬರ್​ ಅಜಮ್​: ಪಾಕ್​ ಕ್ರೀಡಾಭಿಮಾನಿಗಳಿಗೆ ಮುಖಭಂಗ

    ನವದೆಹಲಿ: ಕ್ರಿಕೆಟ್‌ ಲೋಕದ ಅತ್ಯುತ್ತಮ ಬ್ಯಾಟ್ಸ್‌ಮನ್ ಯಾರು ಎಂಬ ಚರ್ಚೆ ಸದಾ ನಡೆಯುತ್ತಲೇ ಇರುತ್ತದೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರು ತಮ್ಮದೇಯಾದ ಕೆಲ ಹೆಸರುಗಳನ್ನು ಸೂಚಿಸುತ್ತಾರೆ. ಆದರೆ ದಾಖಲೆಗಳು, ಒತ್ತಡದ ಸಂದರ್ಭಗಳಲ್ಲಿ ಆಡುವುದು, ಸ್ಥಿರವಾದ ರನ್ ಮತ್ತು ಅಭಿಮಾನಿ ಬಳಗದ ವಿಚಾರಕ್ಕೆ ಬಂದರೆ ಟೀಂ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಈ ಹಿಂದಿನ ಪೀಳಿಗೆಯಲ್ಲಿ ಅತ್ಯುತ್ತಮ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಸಚಿನ್​ ಅವರ ಹೆಸರಿನಲ್ಲಿ ಮುರಿಯಲಾಗದ ಹಲವು ದಾಖಲೆಗಳಿವೆ.

    ಇನ್ನೂ ಮಾಸ್ಟರ್ ಬ್ಲಾಸ್ಟರ್ ಅವರ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ ಈ ಪೀಳಿಗೆಯ ಅತ್ಯುತ್ತಮ ಕ್ರಿಕೆಟಿಗ ಎಂದು ಅನೇಕರು ಕರೆಯುತ್ತಾರೆ. 15 ವರ್ಷಗಳಿಂದ ದಣಿವರಿಯದ ಯೋಧನಂತೆ ಬ್ಯಾಟ್‌ನೊಂದಿಗೆ ವಿಜೃಂಭಿಸಿರುವ ಕೊಹ್ಲಿ ಅವರು ದಾಖಲೆಯ ರನ್‌ ಗಳಿಸಿದ್ದಾರೆ. ಪಕ್ಕದ ಪಾಕಿಸ್ತಾನದ ಕ್ರೀಡಾಭಿಮಾನಿಗಳು ಕೊಹ್ಲಿ ಜತೆ ತಮ್ಮ ದೇಶದ ಕ್ರಿಕೆಟ್​ ಕ್ಯಾಪ್ಟನ್​ ಬಾಬರ್​ ಅಜಮ್​ರನ್ನು ಹೋಲಿಕೆ ಮಾಡಿ ಸದಾ ಮಾತನಾಡುತ್ತಾರೆ. ಆದರೆ, ಕೊಹ್ಲಿಗೂ ಬಾಬರ್​ಗೂ ಎಲ್ಲಿಯ ಹೋಲಿಕೆ ಎಂದು ಭಾರತೀಯ ಕ್ರೀಡಾಭಿಮಾನಿಗಳು ಸಮರ್ಥಿಸಿಕೊಳ್ಳುತ್ತಾರೆ. ಇದರ ನಡುವೆ ಬಾಬರ್​ ಅಜಮ್​ ಅವರೇ ಸತ್ಯ ಒಪ್ಪಿಕೊಂಡಿದ್ದಾರೆ.

    ಬಾಬರ್‌ಗಿಂತ ಉತ್ತಮರು ಯಾರೂ ಇಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನಿ ಅಭಿಮಾನಿಗಳು ಹಲವು ಬಾರಿ ಕೊಹ್ಲಿ ಅವರನ್ನು ಟ್ರೋಲ್​ ಮಾಡಿದ್ದಾರೆ. ಈ ವೇಳೆ ಕೊಹ್ಲಿ ಅವರ ದಾಖಲೆಗಳು ಮತ್ತು ಶತಕಗಳನ್ನು ಮುಂದಿಟ್ಟು ಭಾರತೀಯ ಅಭಿಮಾನಿಗಳು ಕೂಡ ದಿಟ್ಟ ಉತ್ತರ ನೀಡಿದ್ದಾರೆ. ಆದರೆ, ಇದೀಗ ಸ್ವತಃ ಬಾಬರ್ ಸತ್ಯ ಒಪ್ಪಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್. ಅವರಿಗಿಂತ ಉತ್ತಮರು ಯಾರೂ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕೊಹ್ಲಿ ಟ್ರೋಲ್​ ಮಾಡುತ್ತಿದ್ದ ಪಾಕ್​ ಕ್ರೀಡಾಭಿಮಾನಿಗಳಿಗೆ ಮುಖಭಂಗವಾದಂತಾಗಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಬರ್​ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಹ್ಲಿ ಜೊತೆಗೆ ಇಂಗ್ಲೆಂಡ್‌ನ ಟಿ20 ಸರಣಿ ಮತ್ತು ಟಿ20 ವಿಶ್ವಕಪ್ ಬಗ್ಗೆಯೂ ಬಾಬರ್​ ಅಜಮ್ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

    ಕೊಹ್ಲಿ ಓರ್ವ ಕ್ಲಾಸ್ ಪ್ಲೇಯರ್ ಎಂದು ಬಾಬರ್ ಹೊಗಳಿದ್ದಾರೆ. ಕೊಹ್ಲಿ ಅವರು ಪ್ರಸ್ತುತ ಕ್ರಿಕೆಟ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ವಿರಾಟ್‌ಗಾಗಿ ಏನಾದರೂ ವಿಶೇಷ ಯೋಜನೆಗಳಿವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಬಾಬರ್​ ಅಜಮ್​, ಅಗತ್ಯಬಿದ್ದರೆ ಇಡೀ ಭಾರತ ತಂಡಕ್ಕೆ ರಣತಂತ್ರ ರೂಪಿಸುತ್ತೇವೆ. ಯಾವುದೇ ಒಬ್ಬ ಆಟಗಾರನಿಗೆ ವಿಶೇಷ ಯೋಜನೆ ರೂಪಿಸುವುದಿಲ್ಲ, ಎದುರಾಳಿ ತಂಡದಲ್ಲಿರುವ 11 ಜನರನ್ನು ಗುರಿಯಾಗಿಸಿ ತಂತ್ರಗಳನ್ನು ರೂಪಿಸಿದರೆ ಮಾತ್ರ ಫಲಿತಾಂಶ ಸಿಗುತ್ತದೆ ಎಂದರು.

    ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯುವ ನ್ಯೂಯಾರ್ಕ್‌ನಲ್ಲಿ ಹವಾಮಾನ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಾಗಿಲ್ಲ. ಅಲ್ಲಿನ ಸನ್ನಿವೇಶಗಳಿಗೆ ತಕ್ಕಂತೆ ನಾವು ತಂತ್ರಗಾರಿಕೆ ಬರೆಯುತ್ತೇವೆ ಮತ್ತು ಕೊಹ್ಲಿಗೂ ಒಂದು ವಿಶೇಷ ಪ್ಲಾನ್ ಮಾಡುತ್ತೇನೆ ಎಂದು ಬಾಬರ್​ ಹೇಳಿದರು. (ಏಜೆನ್ಸೀಸ್​)

    1989ರಲ್ಲಿ 1 ಬಿಯರ್​ ಬಾಟಲ್​ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ಈ ಭಯಾನಕ ಸಂಗತಿ ತಿಳಿದ್ರೆ ಇನ್ಮುಂದೆ ಊಟಕ್ಕೆ ಮಸಾಲೆ ಹಾಕೋದೆ ಬಿಟ್ಟುಬಿಡ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts