1989ರಲ್ಲಿ 1 ಬಿಯರ್​ ಬಾಟಲ್​ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

Beer Bottle
Published on

ನವದೆಹಲಿ: ಈಗ ಏನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಪ್ರತಿನಿತ್ಯವು ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ದಿಢೀರನೇ ವೈರಲ್​ ಆಗಿಬಿಡುತ್ತವೆ. ಈ ಹಿಂದೆ ಹೋಟೆಲ್‌ಗಳಲ್ಲಿನ ಆಹಾರ ಪದಾರ್ಥಗಳ ಬೆಲೆ, ಜನರು ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳ ಬಿಲ್​ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಾರೆ. ನೀವು ಕೂಡ ಹಳೆಯ ಬಿಲ್​ ನೋಡಿ ಆಶ್ಚರ್ಯ ಚಕಿತರಾಗಿರುತ್ತೀರಿ ಎಂದು ಭಾವಿಸಿದ್ದೇವೆ.

ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಆಡುವ ಮಾತಗಳನ್ನು ಆಗಾಗ ನೀವು ಕೇಳಿರುತ್ತಿರಿ. ಏಕೆಂದರೆ, ಇಂದು ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ. ಬೆಳಗ್ಗಿನ ತಿಂಡಿ ಮಾಡಬೇಕೆಂದರೂ ನೂರು ಬಾರಿ ಯೋಚಿಸಬೇಕಾದ ಕಾಲ ಇದಾಗಿದೆ. ಪ್ರಸ್ತುತ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿರುವುದರ ನಡುವೆಯೇ 1989ನೇ ಇಸವಿಗೆ ಸಂಬಂಧಿಸಿದ ಬಿಲ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮೆಟ್ರೊ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳಲ್ಲಿಯೂ ಬಿಯರ್ ಪ್ರಿಯರಿಗೇನು ಕೊರತೆಯಿಲ್ಲ. ಬಿಯರ್‌ಗೆ 10 ರಿಂದ 15 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲು ಜನರು ಸಿದ್ಧರಾಗಿದ್ದಾರೆ. ಅಲ್ಲದೆ, ಬೇಸಿಗೆಯಲ್ಲಿ ಬಿಯರ್ ಶಾಪ್‌ಗಳಲ್ಲಿ ಜನಜಂಗುಳಿ ಇರುತ್ತದೆ ಮತ್ತು ಬಿಯರ್ ಮಾರಾಟ ಹೆಚ್ಚಿರುತ್ತದೆ. ಇದರ ನಡುವೆ ಬಿಯರ್​ ಕೊರತೆಯ ಸುದ್ದಿಯೂ ಆಗಾಗ ಕಾಣಿಸಿಕೊಳ್ಳುತ್ತದೆ. ನಾವೀಗ 30 ವರ್ಷಗಳ ಹಿಂದೆ ಬೇಡಿಕೆ ಹೇಗಿತ್ತು ಎಂಬುದರ ಬಗ್ಗೆ ತಿಳಿಯೋಣ. ಆ ಸಮಯದಲ್ಲಿ ಬಿಯರ್​ ಅಷ್ಟೊಂದು ಜನಪ್ರಿಯವಾಗಿರಲಿಲ್ಲ ಮತ್ತು ಬೆಲೆಯೂ ಬಹಳ ಕಡಿಮೆ ಇತ್ತು.

ಸಾಮಾಜಿಕ ಜಾಲತಾಣ ಬಳಕೆದಾರರು 30 ವರ್ಷ ಹಳೆಯದಾದ ಬಿಯರ್ ಬಿಲ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ. ಏಕೆಂದರೆ, 30 ವರ್ಷಗಳ ಹಿಂದೆ ಬಿಯರ್ ಎಷ್ಟು ಅಗ್ಗವಾಗಿತ್ತು ಎಂದರೆ ಇಂದು ಸಪ್ಲೈಯರ್​ಗೂ ಅದಕ್ಕಿಂತಲೂ ಹೆಚ್ಚಿನ ಟಿಪ್ಸ್ ನೀಡಲಾಗುತ್ತದೆ. ಬಾರ್‌ಗಳು ಮತ್ತು ರೆಸ್ಟೋರೆಂಟ್​ಗಳಲ್ಲಿ ಮದ್ಯಪಾನ ಸಪ್ಲೈ ಮಾಡುವ ವೇಟರ್‌ಗಳಿಗೆ ಟಿಪ್ಸ್​ ಅಂತಾನೇ 100 ರೂ. ನೀಡುತ್ತಾರೆ.

Beer Price

ನಾವು ಮಾತನಾಡುತ್ತಿರುವುದು 1989ನೇ ಇಸವಿಯ ಬಗ್ಗೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಿಯರ್ ಬಿಲ್​ನಲ್ಲಿ ದಾಖಲಾಗಿರುವ ಒಂದು ಬಿಯರ್​ ಬಾಟಲಿಯ ಬೆಲೆ ಕೇವಲ 33 ರೂಪಾಯಿ. ಅಂದಿನ ಬೆಲೆಗೂ ಇಂದಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಕಡಿಮೆ ಬೆಲೆಯ ಬಿಯರ್ 100 ರಿಂದ 120 ರೂ.ವರೆಗೂ ದೊರೆಯುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net