ಈ ಭಯಾನಕ ಸಂಗತಿ ತಿಳಿದ್ರೆ ಇನ್ಮುಂದೆ ಊಟಕ್ಕೆ ಮಸಾಲೆ ಹಾಕೋದೆ ಬಿಟ್ಟುಬಿಡ್ತೀರಾ!

WhatsApp Image 2024-05-06 at 2.23.07 PM
Published on

ನವದೆಹಲಿ: ಅಡುಗೆ ಮನೆಯಲ್ಲಿ ಘಮಘಮಿಸುವ ಮಸಾಲೆ ಪದಾರ್ಥಗಳನ್ನು ಬಳಸಿ, ಒಳ್ಳೆಯ ಸಾಂಬರ್ ಅಥವಾ ರುಚಿ ಭರಿತವಾದ ಅಡುಗೆಯನ್ನು ಮಾಡಿ ತಿನ್ನೋಣ ಎಂದು ಬಯಸುವ ನೀವು ಈ ಭಯಾನಕ ಸಂಗತಿಗಳನ್ನು ತಿಳಿದ್ರೆ, ಖಂಡಿತ ಬೆಚ್ಚಿಬೆರಗಾಗ್ತೀರಾ. ಇಲ್ಲಿ ನಾವು ಅಂದುಕೊಂಡಂತೆ ಯಾವುದು ಇಲ್ಲ ಎಂಬುದು ಗಮನಿಸಬೇಕಾದ ವಿಷಯ.

ಮಸಾಲೆ ಪದಾರ್ಥಗಳ ತಯಾರಿಕೆ ಹಿಂದಿದ್ದ ಶಾಕಿಂಗ್ ಸಂಗತಿ ಹಿಂದೆ ಬಿದ್ದ ಪೊಲೀಸರಿಗೆ ಈಶಾನ್ಯ ದೆಹಲಿಯಲ್ಲಿದ್ದ ಮಸಾಲ ತಯಾರಿಕೆ ಘಟಕಗಳ ಕರಾಳ ಸತ್ಯ ಗೊತ್ತಾಯಿತು. ಇದನ್ನು ಅರಿತುಕೊಂಡ ಪೊಲೀಸರು ಇದೀಗ 15 ಟನ್​ ಸ್ಪೈಸೆಸ್​ ತಯಾರಿಸುತ್ತಿದ್ದ ಎರಡು ಫ್ಯಾಕ್ಟರಿಗಳನ್ನು ವಶಕ್ಕೆ ಪಡೆದು, ಸದ್ಯ ಮೂವರನ್ನು ಆರೋಪಿಗಳು ಎಂದು ಪರಿಗಣಿಸಿ, ಬಂಧನಕ್ಕೆ ಒಳಪಡಿಸಿದ್ದಾರೆ.

ತಿನ್ನಲು ಯೋಗ್ಯವಲ್ಲದ ಪದಾರ್ಥಗಳನ್ನು ಬಳಸಿ, ಮಸಾಲ ಪ್ರಾಡೆಕ್ಟ್​ಗಳನ್ನು ತಯಾರಿಸಿ, ಅದನ್ನು ಇತರೆ ಕಂಪನಿಗಳು ಮಾರಾಟ ಮಾಡುತ್ತಿದ್ದ ಬೆಲೆಗೆ ಮಾರುಕಟ್ಟೆಗೆ ತಂದುಕೊಡುತ್ತಿದ್ದ ದಿಲೀಪ್​ (46), ಸರ್ಫರಾಜ್​ (32) ಮತ್ತು ಕುರ್ಸಿದ್ ಮಲಿಕ್​ (42) ಎಂಬ ಮೂವರನ್ನು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳಿಂದ ಕೊಳೆತ ಎಲೆಗಳು, ಅಕ್ಕಿ, ಹಾಳಾದ ಸಿರಿಧಾನ್ಯಗಳು, ಮರದ ಧೂಳು, ಮೆಣಸಿನಕಾಯಿಯ ತೊಟ್ಟು, ಆ್ಯಸಿಡ್ ಹಾಗೂ ಎಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕ್ರೈಂ ಬ್ರ್ಯಾಂಚ್​ನ ಡಿಸಿಪಿ, ರಾಖೇಶ್​ ಪವೇರಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಇತರೆ ಬ್ರ್ಯಾಂಡ್​ಗಳ ಹೆಸರಿನಲ್ಲಿ ಮಾರುಕಟ್ಟೆಗೆ ನಕಲಿ ಖಾರಪುಡಿ, ಮೆಣಿಸಿನಪುಡಿ ಹೀಗೆ ಮುಂತಾದ ಮಸಾಲೆ ಪದಾರ್ಥಗಳನ್ನು ತಂದುಕೊಡುತ್ತಿದ್ದ ಕಿಡಿಗೇಡಿಗಳು, ಆಹಾರ ಮತ್ತು ಸುರಕ್ಷತೆ ಇಲಾಖೆಯ ಕಣ್ತಪ್ಪಿಸಿ ಮಾಡುತ್ತಿದ್ದ ಅವ್ಯವಹಾರವನ್ನು ತಡೆಯುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಚ್ಚಿನ ತನಿಖೆಗೆ ಒಳಪಟ್ಟ ಆರೋಪಿ ಸಿಂಗ್ ಮತ್ತು ಸರ್ಫರಾಜ್​ ಕಡೆಗೂ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದು, ಯಾವ ರೀತಿ ತಯಾರಿಕೆ ಮಾಡುತ್ತಿದ್ದೆವು, ಏನ್ನೆಲ್ಲಾ ಬಳಸುತ್ತಿದ್ದೆವು, ಹೇಗೆ ಅದನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೆವು ಎಂಬ ಶಾಕಿಂಗ್ ಸಂಗತಿಯನ್ನು ಮುಕ್ತವಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಪೊಲೀಸರು, 15 ಟನ್​ ನಕಲಿ ಮಾಸಾಲೆಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net