ಅಂತೂ 27 ವರ್ಷಗಳ ಬಳಿಕ ಶಿಕ್ಷೆ ಪ್ರಕಟ; ಪೊಲೀಸ್ ಇನ್​ಸ್ಪೆಕ್ಟರ್-ತಹಶೀಲ್ದಾರರೇ ಅಪರಾಧಿಗಳು..

court
Published on

ರಾಯಚೂರು: ಇಪ್ಪತ್ತೇಳು ವರ್ಷಗಳ ಹಿಂದಿನ ಪ್ರಕರಣವೊಂದು ನ್ಯಾಯಾಲಯದಲ್ಲಿ ಕೊನೆಗೂ ಇತ್ಯರ್ಥಗೊಂಡಿದ್ದು, ಆರೋಪಿಗಳಿಗೆ ಶಿಕ್ಷೆಯೂ ಘೋಷಣೆಯಾಗಿದೆ. ವಿಶೇಷ ಎಂದರೆ ಈ ಪ್ರಕರಣದಲ್ಲಿ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ತಹಶೀಲ್ದಾರ್ ಅವರೇ ಆರೋಪಿಗಳಾಗಿದ್ದು, ಅವರ ಮೇಲಿನ ಆರೋಪ ಸಾಬೀತಾಗಿದೆ.

1994ರ ಜೂ. 1ರಂದು ನಡೆದ ಪ್ರಕರಣ ಸಂಬಂಧದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ಇನ್​​ಸ್ಪೆಕ್ಟರ್​ ಕಾಶೀನಾಥ್ ಹಾಗೂ ತಹಶೀಲ್ದಾರ್​ ರಾಮಾಚಾರಿ ಎಂಬವರಿಗೆ 3 ವರ್ಷಗಳ ಜೈಲು ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ರಾಯಚೂರಿನ ಮಾನ್ವಿಯ ಹರವಿ ಗ್ರಾಮದ ರೈತ ಮುಖಂಡರಾದ ಶಂಕರಗೌಡ ಹಾಗೂ ಬಸನಗೌಡರನ್ನು ಲಾಕಪ್​ನಲ್ಲಿ ಹಾಕಿ ಥಳಿಸಿ ರಕ್ತಗಾಯ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪ ಅಂದಿನ ಮಾನ್ವಿ ಸಿಪಿಐ ಕಾಶೀನಾಥ್ ಹಾಗೂ ಮಾನ್ವಿ ತಹಶೀಲ್ದಾರ್ ರಾಮಾಚಾರಿ ವಿರುದ್ಧ ದಾಖಲಾಗಿತ್ತು.

ಆರ್​ಡಿಸಿಸಿ ಬ್ಯಾಂಕ್​ನೊಂದಿಗೆ ತಡಕಲ್ ಗ್ರಾಮದ ರೈತರ ದಿನಬಳಕೆ ವಸ್ತುವನ್ನು ಈ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದನ್ನು ತಡೆಯಲು ಯತ್ನಿಸಿದ್ದ ರೈತ‌ಮುಖಂಡರಿಗೆ ಅವಾಚ್ಯವಾಗಿ ಬೈದು ಕವಿತಾಳ ಠಾಣೆಯಲ್ಲಿ ಥಳಿಸಿದ ಕುರಿತು ಆರೋಪಿಸಿ ದೂರು ದಾಖಲಾಗಿತ್ತು. ಈ ಕುರಿತ ಪ್ರಕರಣ ರಾಯಚೂರು 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಇಂದು ತೀರ್ಪು ಪ್ರಕಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net