ಇಂದು ರಸ್ತೆಗಿಳಿಯುವ ಮುನ್ನ ಎಚ್ಚರ! ಬೆಂಗಳೂರಲ್ಲಿ ಟ್ರಾಫಿಕ್ ಜಾಮ್, 8 ಕಡೆ ಮಾರ್ಗ ಬದಲಾವಣೆ

protest
Published on

ಬೆಂಗಳೂರು: 2ಎ ಮೀಸಲಾತಿಗಾಗಿ ಪಂಚಮಸಾಲಿಗರ ಹೋರಾಟ ತೀವ್ರಗೊಂಡಿದ್ದು, ಇಂದು(ಭಾನುವಾರ) ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆರಂಭಗೊಂಡಿದೆ. ಸಮಾವೇಶದಲ್ಲಿ ಲಕ್ಷಾಂತರ ಜನ ಸೇರಿದ್ದು, ವೀಕೆಂಡ್ ಮಸ್ತಿಯ ಮೂಡಲ್ಲಿರುವ ಬೆಂಗಳೂರಿಗರಿಗೆ ಟ್ರಾಫಿಕ್​ ಬಿಸಿ ತಟ್ಟುತ್ತಿದೆ.

ಪಂಚಮಸಾಲಿ ಮೀಸಲಾತಿ ಹೋರಾಟದ ಪರಿಣಾಮ ಬಳ್ಳಾರಿ, ತುಮಕೂರು ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಎದುರಾಗಲಿದೆ. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು 8 ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರ ವ್ಯವಸ್ಥೆಯನ್ನ ಬದಲಾವಣೆ ಮಾಡಿದ್ದಾರೆ.

ಬೈಕ್, ಕಾರುಗಳಿಗೆ ತ್ರಿಪುರ ವಾಸಿನಿ ಮೈದಾನದಲ್ಲಿ, ವಿಐಪಿ ವಾಹನಗಳಿಗೆ ರಮಣಶ್ರೀ ರೋಡ್, ಕೃಷ್ಣ ವಿಹಾರ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಲ್ಲಿ ಮಾರ್ಗ ಬದಲಾವಣೆ ಆಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತುಮಕೂರು ರಸ್ತೆ: ಗೊರಗುಂಟೆ ಪಾಳ್ಯ ಜಂಕ್ಷನ್– ಬಿಇಎಲ್– ಹೆಬ್ಬಾಳ– ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ- ಅರಮನೆ ಮೈದಾನ

ಮೈಸೂರು ರಸ್ತೆ: ನಾಯಂಡಹಳ್ಳಿ– ಸುಮ್ಮನಹಳ್ಳಿ, ರಾಜ್ ಕುಮಾರ್ ಸಮಾಧಿ ರಸ್ತೆ, ತುಮಕೂರು ರಸ್ತೆ– ಗೊರಗುಂಟೆಪಾಳ್ಯ ಜಂಕ್ಷನ್-ಬಿಇಎಲ್– ಹೆಬ್ಬಾಳ ಮೇಲ್ಸೇತುವೆ-ಮೇಕ್ರಿ ಸರ್ಕಲ್– ಜಯಮಹಲ್ ರಸ್ತೆ– ಅರಮನೆ ಮೈದಾನ

ಕನಕಪುರ ರಸ್ತೆ: ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ– ರಾಜಲಕ್ಷ್ಮಿ ಜಂಕ್ಷನ್ ಜಯನಗರ 4ನೇ ಮುಖ್ಯ ರಸ್ತೆ- ಸೌಥ್ ಆ್ಯಂಡ್ ಸರ್ಕಲ್– ಆರ್.ವಿ. ಜಂಕ್ಷನ್– ಲಾಲ್​ಬಾಗ್ ವೆಸ್ಟ್ ಗೇಟ್– ಮಿನರ್ವ ಸರ್ಕಲ್– ಜೆ.ಸಿ. ರಸ್ತೆ– ಟೌನ್ ಹಾಲ್– ಕೆ.ಜಿ. ರೋಡ್– ಮೈಸೂರು ಬ್ಯಾಂಕ್ ಸರ್ಕಲ್– ಪ್ಯಾಲೇಸ್ ರೋಡ್- ಬಸವೇಶ್ವರ ಸರ್ಕಲ್– ವಸಂತನಗರ ರಸ್ತೆ– ಕಂಟೋನ್ಮೆಂಟ್ ಅಂಡರ್ ಪಾಸ್– ಜಯಮಹಲ್ ರೋಡ್– ಅರಮನೆ ಮೈದಾನ.

ಅರಮನೆ ಮೈದಾನದಲ್ಲಿ ಸೇರಿರುವ ಜನಸ್ತೋಮ
ಅರಮನೆ ಮೈದಾನದಲ್ಲಿ ಸೇರಿರುವ ಜನಸ್ತೋಮ

ಬಳ್ಳಾರಿ ರಸ್ತೆ: ದೇವನಹಳ್ಳಿ ಮಾರ್ಗ– ಚಿಕ್ಕಜಾಲ– ಹುಣಿಸೇಮಾರನಹಳ್ಳಿ- ಕೋಗಿಲು ಜಂಕ್ಷನ್– ಕೊಡಿಗೇಹಳ್ಳಿ ಗೇಟ್– ಹೆಬ್ಬಾಳ ಮೇಲ್ಸೇತುವೆ– ಮೇಕ್ರಿ ಸರ್ಕಲ್– ಅರಮನೆ ಮೈದಾನ.

ದೊಡ್ಡಬಳ್ಳಾಪುರ ರಸ್ತೆ: ಮೇಜರ್ ಉನ್ನಿಕೃಷ್ಣನ್ ರೋಡ್- ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್- ಬೈಪಾಸ್ – ಬಳ್ಳಾರಿ ರೋಡ್– ಹೆಬ್ಬಾಳ ಮೇಲ್ಸೇತುವೆ– ಮೇಕ್ರಿ ಸರ್ಕಲ್– ಅರಮನೆ ಮೈದಾನ.

ಬನ್ನೇರುಘಟ್ಟ ರಸ್ತೆ: ಡೈರಿ ಸರ್ಕಲ್– ಲಾಲ್​ಬಾಗ್ ಮೈನ್ ಗೇಟ್– ಮಿನರ್ವ ಸರ್ಕಲ್– ಜೆ.ಸಿ.ರೋಡ್– ಟೌನ್​ಹಾಲ್​, ಕೆ.ಜಿ.ರೋಡ್– ಮೈಸೂರ್ ಬ್ಯಾಂಕ್ ಸರ್ಕಲ್– ಪ್ಯಾಲೇಸ್ ರೋಡ್- ಬಸವೇಶ್ವರ ಸರ್ಕಲ್– ವಸಂತನಗರ ರೋಡ್– ಕಂಟೋನ್ಮೆಂಟ್ ಅಂಡರ್ ಪಾಸ್– ಜಯಮಹಲ್ ರೋಡ್- ಅರಮನೆ ಮೈದಾನ.

ಹಳೇ ಮದ್ರಾಸ್ ರೋಡ್: ಕೆ.ಆರ್. ಪುರಂ ಮೇಲ್ಸೇತುವೆ- ಹೆಣ್ಣೂರು ಕ್ರಾಸ್– ನಾಗವಾರ- ಹೆಬ್ಬಾಳ ಫ್ಲೈ ಓವರ್– ಬಳ್ಳಾರಿ ರೋಡ್– ಮೇಕ್ರಿ ಸರ್ಕಲ್ ಸರ್ವಿಸ್ ರೋಡ್– ಅರಮನೆ ಮೈದಾನ.

ಹೊಸೂರು ರಸ್ತೆ: ಹೊಸೂರು ರಸ್ತೆ- ಮಡಿವಾಳ ಚೆಕ್​ಪೋಸ್ಟ್- ಹಳೇ ಮದ್ರಾಸ್- ಡೈರಿ ಸರ್ಕಲ್ ರೋಡ್– ಲಾಲ್ ಬಾಗ್ ಮೈನ್ ಗೇಟ್- ಮಿನರ್ವ ಸರ್ಕಲ್– ಜೆ.ಸಿ.ರೋಡ್– ಟೌನ್​ಹಾಲ್– ಕೆ.ಜಿ.ರೋಡ್– ಮೈಸೂರು ಬ್ಯಾಂಕ್ ಸರ್ಕಲ್– ಪ್ಯಾಲೇಸ್ ರೋಡ್- ಬಸವೇಶ್ವರ ಸರ್ಕಲ್– ವಸಂತನಗರ ರೋಡ್– ಕಂಟೋನ್ಮೆಂಟ್ ಅಂಡರ್ ಪಾಸ್– ಜಯಮಹಲ್ ರೋಡ್– ಅರಮನೆ ಮೈದಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net