More

    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ

    ಬೆಂಗಳೂರು: ಎರಡು ದಿನಗಳ ವಿಆರ್​ಎಲ್ ಪ್ರೀಮಿಯರ್ ಲೀಗ್(ವಿಪಿಎಲ್) ಎರಡನೇ ಅವತರಣಿಕೆ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ದೊರೆಯಿತು. ಬೆಂಗಳೂರು ನಗರ ವಿವಿಯ ಸೆಂಟ್ರಲ್ ಕಾಲೇಜು ಆಟದ ಮೈದಾನದಲ್ಲಿ ಬೆಳಗ್ಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಚಾಲನೆ ನೀಡಿದರು. ಇವರೊಂದಿಗೆ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ನಿರ್ದೇಶಕ ನರಸಿಂಹ, ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಪವನ್ ಒಡೆಯರ್ ಜತೆಯಾಗುವ ಮೂಲಕ ಪಂದ್ಯಾವಳಿಗೆ ತಾರಾ ಮೆರುಗು ತಂದುಕೊಟ್ಟರು.

    ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿಯ ಸಿಬ್ಬಂದಿಗಾಗಿ ಆಯೋಜನೆ ಮಾಡಿದ್ದ ಪಂದ್ಯಾವಳಿ ಇದಾಗಿದ್ದು, ಇದರಲ್ಲಿ ದಿಗ್ವಿಜಯ ನ್ಯೂಸ್​ನಿಂದ 4 ತಂಡ, ವಿಜಯವಾಣಿ ಸಂಪಾದಕೀಯ ವಿಭಾಗದಲ್ಲಿ 2 ಮತ್ತು ಜಾಹೀರಾತು ಮತ್ತು ಪ್ರಸರಣ ವಿಭಾಗದ 2 ಮತ್ತು ಜಿಲ್ಲೆ ಮತ್ತು ಮುದ್ರಣ ವಿಭಾಗದಿಂದ ತಲಾ ಒಂದು ತಂಡ ಸೇರಿ 10 ತಂಡಗಳು ಭಾಗವಹಿಸಿವೆ. ಟೀಂ ಸಮುರಾಯ್, ದಿಗ್ವಿಜಯ ಬ್ಲಾಕ್ ಪ್ಯಾಂಥರ್ಸ್, ವಿಜಯವಾಣಿ ಪ್ರಿಂಟ್, ವಿ ವಾರಿಯರ್ಸ್, ಬ್ಯೂರೋ ಬ್ರದರ್ಸ್, ದಿಗ್ವಿಜಯ ಸೂಪರ್ ಕಿಂಗ್ಸ್, ದಿಗ್ವಿಜಯ ಡೇರ್​ಡೇವಿಲ್, ವಿಜಯವಾಣಿ ಎ1, ದಿಗ್ವಿಜಯ ಸೂಪರ್ ಕಿಂಗ್ಸ್, ಸರ್ಕ್ಯುಲೇಷನ್ ಚೀತಾ ತಂಡಗಳು ಭಾಗವಹಿಸಿವೆ.

    ಸಲಗ ತಂಡದೊಂದಿಗೆ ಇಂದು ಪಂದ್ಯ

    ‘ಸಲಗ’ ಚಿತ್ರ ತಂಡ ಮತ್ತು ಸಂಪಾದಕರ ತಂಡದ ನಡುವೆ ಒಂದು ವಿಶೇಷ ಪಂದ್ಯ ನಡೆಯಲಿದೆ. ಸಲಗ ತಂಡದಿಂದ ನಟ ಮತ್ತು ನಿರ್ದೇಶಕ ದುನಿಯಾ ವಿಜಯ್, ನಟ ಡಾಲಿ ಧನಂಜಯ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ತಮ್ಮ ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿಜಯವಾಣಿ ಮತ್ತು ದಿಗ್ವಿಜಯ 24/7 ಸುದ್ದಿ ವಾಹಿನಿಯ ಸಂಪಾದಕರು ಮತ್ತು ಅವರ ವಿಭಾಗ ಸಲಗದೊಂದಿಗೆ ಸೆಣಸಾಡಲಿದೆ.

    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ
    ಜೋಶ್​ನಿಂದ ಆಟಕ್ಕೆ ಚಾಲನೆ
    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ
    ನಿರ್ದೇಶಕ ಪವನ್​ ವಡೆಯರ್​, ನಟ ಪ್ರಜ್ವಲ್ ದೇವರಾಜ್​ ಅವರೊಂದಿಗೆ ಆಟಗಾರರು
    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ
    ಡಿಸಿಪಿಗಳಾದ ಡಾ.ಎಸ್.ಡಿ.ಶರಣಪ್ಪ ಮತ್ತು ಡಾ.ಸಂಜೀವ್ ಪಾಟೀಲ್ ಅವರ ಆಟದ ಭಂಗಿ.

    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ

    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ
    ಕಾದಾಟಕ್ಕೆ ಸಿದ್ಧವಾಗಿದ್ದ ಟೀಮ್ ಸಮುರಾಯ್​

    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ

    ಆಟಗಾರರಿಂದ ನೃತ್ಯ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts