More

    ಹುಲಿಗೆ ಇಬ್ಬರು ಬಲಿ! ರಾತ್ರಿ ಬಾಲಕ, ಬೆಳಗ್ಗೆ ವೃದ್ಧೆಯನ್ನ ಕೊಂದ ವ್ಯಾಘ್ರ, ಬೆಚ್ಚಿಬಿದ್ದ ಸ್ಥಳೀಯರು

    ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾಗಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ. ನಿನ್ನೆ(ಶನಿವಾರ) ರಾತ್ರಿ ಬಾಲಕನೊಬ್ಬನನ್ನು ಕೊಂದಿದ್ದ ವ್ಯಾಘ್ರ, ಇಂದು(ಭಾನುವಾರ) ಬೆಳ್ಳಂಬೆಳಗ್ಗೆ ವೃದ್ಧೆ ಮೇಲೂ ದಾಳಿ ಮಾಡಿ ಕೊಂದು ಹಾಕಿದೆ.

    ಪೊನ್ನಂಪೇಟೆ ತಾಲೂಕಿನ ಕುಮತೂರು ಗ್ರಾಮ ಬಾಲಕ ಅಯ್ಯಪ್ಪ(14) ಮತ್ತು ಟಿ.ಶೆಟ್ಟಿಗೇರಿ ಗ್ರಾಮದ ಕಾರ್ಮಿಕ ಮಹಿಳೆ ಚಿಣ್ಣಿ(60) ಹುಲಿ ದಾಳಿಯಿಂದ ಮೃತಪಟ್ಟ ದುರ್ದೈವಿಗಳು. ಇದನ್ನೂ ಓದಿರಿ ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದ್ದೇ ಬಿಜೆಪಿ ನಾಯಕರು: ಸ್ಪೋಟಕ ಹೇಳಿಕೆ ಕೊಟ್ಟ ಸಚಿವ ಶ್ರೀರಾಮುಲು

    ನಿನ್ನೆ ರಾತ್ರಿ ಬಾಲಕ ಅಯ್ಯಪ್ಪನನ್ನು ಹುಲಿ ಕೊಂದಿದ್ದ ಸುದ್ದಿ ತಿಳಿದು ಭಯಗೊಂಡಿದ್ದ ಜನತೆಗೆ ಬೆಳಗ್ಗೆ ಎದ್ದೇಳುವಷ್ಟರಲ್ಲಿ ವೃದ್ಧೆಯನ್ನೂ ವ್ಯಾಘ್ರ ಸಾಯಿಸಿರುವ ಆಘಾತಕಾರಿ ಸುದ್ದಿ ಬರಸಿಡಿಲಂತೆ ಬಂದೆರಗಿದೆ. ಜನತೆ ಜೀವಭಯದಲ್ಲಿ ಮನೆಯಿಂದ ಹೊರ ಬರಲೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ.

    ಹುಲಿಗೆ ಇಬ್ಬರು ಬಲಿ! ರಾತ್ರಿ ಬಾಲಕ, ಬೆಳಗ್ಗೆ ವೃದ್ಧೆಯನ್ನ ಕೊಂದ ವ್ಯಾಘ್ರ, ಬೆಚ್ಚಿಬಿದ್ದ ಸ್ಥಳೀಯರುಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಪೊನ್ನಂಪೇಟೆ ತಾಲೂಕಿನ ಜನತೆ ನರಹಂತಕ ಹುಲಿ ಸೆರೆಹಿಡಿಯುವಂತೆ ಆಗ್ರಹಿಸಿ ಕುಟ್ಟ, ಶ್ರೀಮಂಗಲದಲ್ಲಿ ಪ್ರತಿಭಟನೆ‌ಗೆ ಸಜ್ಜಾಗಿದ್ದಾರೆ.

    ಅಷ್ಟರಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡು ಬಂದ ಅರಣ್ಯ ಇಲಾಖೆ, ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು ಮತ್ತು ಗೋಪಾಲಸ್ವಾಮಿ ಆನೆಯನ್ನು ಕರೆ ತಂದಿದ್ದಾರೆ.

    ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

    ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

    ಕೋಟಿ ಮೌಲ್ಯದ ಜಮೀನು ದಾನ ಕೊಡ್ತೀನಿ, ತಾಕತ್​ ಇದ್ರೆ ರಾಮಮಂದಿರ ಕಟ್ಟಿಸಿ: ಸಿದ್ದುಗೆ ರೈತನ ಸವಾಲು

    ವಿಪಿಎಲ್ ಸೀಸನ್-2 ಜೋಶ್; ಇಂದು ಅಂತಿಮ ಸ್ಪರ್ಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts