

ಬಾಗಲಕೋಟೆ: ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರೊಬ್ಬರು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಸವಾಲ್ ಹಾಕಿದ್ದು, ಭಾರಿ ಚರ್ಚೆಯಾಗುತ್ತಿದೆ.
ಅಯೋಧ್ಯೆಯಲ್ಲಿನ ವಿವಾದಿತ ಜಾಗ ಬಿಟ್ಟು ಬೇರೆ ಎಲ್ಲಿಯಾದರೂ ರಾಮ ಮಂದಿರ ನಿರ್ಮಾಣ ಮಾಡುವುದಿದ್ದರೆ ನಾನು ದೇಣಿಗೆ ಕೊಡುತ್ತೇನೆ ಎಂದಿದ್ದ ಸಿದ್ದರಾಮಯ್ಯ, ನಾನೂ ನನ್ನ ಹುಟ್ಟೂರಿನಲ್ಲೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಶನಿವಾರ ಬಾದಾಮಿ ಕ್ಷೇತ್ರದ ಮತದಾರ ಬಸವರಾಜ ಗೊರಕೊಪ್ಪ ಎಂಬುವವರು ಮಾಜಿ ಸಿಎಂಗೆ ನೇರ ಸವಾಲು ಹಾಕಿದ್ದು, 'ಒಂದು ಕೋಟಿ ರೂ. ಬೆಲೆಬಾಳುವ ನನ್ನ ಒಂದು ಎಕರೆ ಜಮೀನನ್ನು ರಾಮಮಂದಿರ ನಿರ್ಮಾಣಕ್ಕಾಗಿ ನಾನು ದಾನ ಕೊಡುತ್ತೇನೆ. ತಾಕತ್ತು ಇದ್ರೆ ಸಿದ್ದರಾಮಯ್ಯ ಸ್ವಂತ ಹಣದಿಂದ ಆ ಜಾಗದಲ್ಲಿ ರಾಮ ಮಂದಿರ ಕಟ್ಟಿಸಲಿ... ಎಂದಿದ್ದಾರೆ. ಇದನ್ನೂ ಓದಿರಿ ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್ ರೇವಣ್ಣ
ಬಾದಾಮಿ ಪುರಸಭೆ ಸದಸ್ಯರೂ ಆದ ರೈತ ಬಸವರಾಜ ಗೊರಕೊಪ್ಪ ಮಾತನಾಡಿ, ಸುಪ್ರೀಂ ಕೋರ್ಟ್ ಅಯೋಧ್ಯೆಯ ಜಾಗ ಇತ್ಯರ್ಥ ಮಾಡಿದೆ. ಆದರೂ ಸಿದ್ದರಾಮಯ್ಯ ಅದು ವಿವಾದಿತ ಜಾಗ. ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡೋದಿಲ್ಲ ಅಂತಾರೆ. ಹಾಗಾದರೆ ಅವರಿಗೆ ಸವಾಲು ಹಾಕುತ್ತೇನೆ. ಎಂಬತ್ತರಿಂದ ಒಂದು ಕೋಟಿ ರೂ. ಬೆಲೆ ಬಾಳುವ ನನ್ನ ಒಂದು ಎಕರೆ ಜಮೀನನ್ನು ದಾನ ಮಾಡುತ್ತೇನೆ. ಆ ಜಾಗದಲ್ಲಿ ಸಿದ್ದರಾಮಯ್ಯ ರಾಮ ಮಂದಿರ ಕಟ್ಟಿಸಲಿ ಎಂದು ಸವಾಲ್ ಹಾಕಿದ್ದಾರೆ.
ರಾಮಮಂದಿರ ನಿರ್ಮಾಣ ಆಗುತ್ತಿರುವ ಜಾಗವನ್ನು ವಿವಾದಿತ ಭೂಮಿ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪಿಗೆ ಧಕ್ಕೆ ತಂದಿದ್ದೀರಿ. ಹಿಂದುಗಳ ಭಾವನೆಗಳಿಗೆ ಅಗೌರವ ತೋರಿದ್ದೀರಿ ಎಂದು ಆಕ್ರೋಶ ಹೊರಹಾಕಿರುವ ಬಸವರಾಜು, ಬನಶಂಕರಿ ತಾಯಿ ಆಣೆಯಾಗಿಯೂ ನನ್ನ ಜಮೀನನ್ನು ಉಚಿತವಾಗಿ ಕೊಡುತ್ತೇನೆ. ರಾಮ ಮಂದಿರ ಕಟ್ಟಿಸಿ ಸಿದ್ದರಾಮಯ್ಯನವರೇ ಅಂತ ಟ್ವೀಟ್ ಡಿದ್ದಾರೆ.
ಬಸವರಾಜ ಗೊರಕೊಪ್ಪ ಅವರ ಜಮೀನು ಬಾದಾಮಿ ಸಮೀಪದ ಬನಶಂಕರಿದೇವಿ ದೇವಸ್ಥಾನದ ಬಳಿಯೇ ಇದೆ. ಈ ಜಮೀನಿನಲ್ಲಿ ಸದ್ಯ ಶೇಂಗಾ ಬೆಳೆದಿದ್ದಾರೆ.