3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

murder
Published on

ಬಾಗಲಕೋಟೆ: ತನ್ನ ಪ್ರೇಯಸಿಯನ್ನ ಮಚ್ಚಿನಿಂದ ಕೊಂದವ ಬಳಿಕ ಸ್ಥಳದಲ್ಲೇ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲೂರ ಗ್ರಾಮದ ಬಳಿ ಸಂಭವಿಸಿದೆ.

ಬಾಳವ್ವ ಸಿದ್ದಪ್ಪ ಬಂಡೆಪ್ಪನವರ್(23) ಕೊಲೆಯಾದ ದುರ್ದೈವಿ. ಮಂಜಪ್ಪ ಹನುಮಪ್ಪ ಐಹೊಳೆ(22) ಆತ್ಮಹತ್ಯೆ ಮಾಡಿಕೊಂಡವ. ಇವರಿಬ್ಬರ ವಿವಾಹೇತರ ಅಕ್ರಮ ಸಂಬಂಧ ಇತ್ತು. ಬಾಳವ್ವಗೆ ಬೇರೊಬ್ಬನೊಂದಿಗೆ ಮದುವೆ ಆಗಿ ಮೂರು ಮಕ್ಕಳಿವೆ. ಮಂಜಪ್ಪಗೂ ಪತ್ನಿ ಮತ್ತು ಒಂದು ಮಗು ಇದೆ. ಮಂಜಪ್ಪ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಈತನ ಪತ್ನಿಗೆ ಇತ್ತೀಚಿಗಷ್ಟೇ ಹೆರಿಗೆ ಆಗಿತ್ತು. ಕೆಲೂರು ಗ್ರಾಮದಲ್ಲಿದ್ದ ತನ್ನ ಪತ್ನಿ-ಮಗುವನ್ನ ನೋಡಲು ಮಂಜಪ್ಪ ನಿನ್ನೆ(ಸೋಮವಾರ) ಬೆಳಗ್ಗೆ ಬಂದಿದ್ದ.

ಪತ್ನಿ-ಮಗುವನ್ನು ನೋಡಿಕೊಂಡ ಹೊರ ಬಂದ ಮಂಜಪ್ಪ, ತನ್ನ ಪ್ರೇಯಸಿ ಬಾಳವ್ವನನ್ನು ಕಾಣಲೆಂದು ಹೊಲಕ್ಕೆ ಹೋಗಿದ್ದ. ಬಾಳಮ್ಮ ಮತ್ತೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿರುವ‌ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ತ್ರಿಕೋನ ವಿವಾಹೇತರ ಸಂಬಂಧ ಪ್ರಶ್ನಿಸಿದ ಮಂಜಪ್ಪ, ಸಿಟ್ಟಿಗೆದ್ದು ಬಾಳಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ನೇಣುಬಿಗಿದುಕೊಂಡು ಸತ್ತಿದ್ದಾನೆ.

ಕೆಲೂರು ಗ್ರಾಮದಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿರುವ ಹೊಲದ ಗುಡಿಸಲಿನಲ್ಲಿ ಈ ಘಟನೆ ನಡೆದಿದೆ. ಅಮೀನಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net