ನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ

dog rape
Published on

ಮೈಸೂರು: ಹೆತ್ತ ಮಕ್ಕಳ ಮೇಲೆ ಕಾಮುಕನ ತಂದೆ ಅತ್ಯಾಚಾರವೆಸಗಿದ್ದನ್ನ ಕೇಳಿದ್ದೇವೆ. ಜನ್ಮಕೊಟ್ಟ ತಾಯಿ, ಕೈತುತ್ತು ಕೊಟ್ಟು ಬೆಳೆಸಿದ ಅಜ್ಜಿ ಮೇಲೆ ದುಷ್ಟಮಗ/ಮೊಮ್ಮಗನ ಕಾಮದ ಕಣ್ಣು ಬಿದ್ದದ್ದನ್ನೂ ಕಂಡಿದ್ದೇವೆ. ಕೆಲ ಅಕ್ಕ, ತಂಗಿ, ಅಜ್ಜಿ... ಮೇಲೂ... ಲೈಂಗಿಕ ಕಿರುಕುಳ ತಪ್ಪಿದ್ದಿಲ್ಲ. ಇಂತಹ ಪೈಶಾಚಿಕ ಕೃತ್ಯಕ್ಕೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.

ಆದರೆ, ಇಲ್ಲೊಬ್ಬ ಕಾಮುಕ ಹೆಣ್ಣು ನಾಯಿಯನ್ನೂ ಬಿಟ್ಟ. ಕಾಮತೃಷೆಗಾಗಿ ನಾಯಿ ಮೇಲೂ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ. ಇಂತಹ ಅಮಾನವೀಯ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭವಸಿದ್ದು, ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಇದನ್ನೂ ಓದಿರಿ ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಶವ ಮರದಲ್ಲೇ ನೇತಾಡುತ್ತಿತ್ತು! ಬೆಚ್ಚಿಬಿದ್ದ ಸ್ಥಳೀಯರು

ಮೈಸೂರಿನ‌ ವಿ.ವಿ.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ನಾಯಿ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಸೋಮಶೇಖರ್​ನನ್ನು ಇಂದು(ಮಂಗಳವಾರ) ಬಂಧಿಸಲಾಗಿದೆ.

ಗೋಕುಲಂ ಮೂರನೇ ಹಂತದ ಗಣಪತಿ ದೇವಸ್ಥಾನದ ಬಳಿ ಹೆಣ್ಣು ನಾಯಿ ಮೇಲೆ ಸೋಮಶೇಖರ್​ ಅತ್ಯಾಚಾರ ಮಾಡಿದ್ದಾನೆ. ಆತನಿಗೆ ಕಾನೂನು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಪೀಪಲ್ ಫಾರ್ ಅನಿಮಲ್ ಸಂಘಟನೆಯು ಪೊಲೀಸರಿಗೆ ದೂರು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net