

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಅವರು ಶುಕ್ರವಾರ ಇಲ್ಲಿನ ಆರ್ಎಸ್ಎಸ್ ಕಚೇರಿಗೆ ದಿಢೀರ್ ಭೇಟಿ ಕೊಟ್ಟದ್ದು, ಜಿಲ್ಲೆಯ ರಾಜಕಾರಣದಲ್ಲಿ ಕೆಲಕಾಲ ಸಂಚಲನ ಮೂಡಿಸಿತ್ತು.
ಆರ್ಎಸ್ಎಸ್ನ ಮಂಡ್ಯ ಜಿಲ್ಲಾ ಪ್ರಚಾರಕ್ ಉಮೇಶ್ ಅವರನ್ನ ಭೇಟಿ ಮಾಡಿದ ಸಂಸದೆ, ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಹಣ ನೀಡುವ ಮೂಲಕ ಸಾಥ್ ನೀಡಿದರು. ಇದನ್ನೂ ಓದಿರಿ ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್ಆ್ಯಪ್ ಸ್ಟೇಟಸ್
ನನ್ನ ಭೇಟಿ ಹಿಂದೆ ಯಾವ ರಾಜಕೀಯವೂ ಇಲ್ಲ. ನಂಬಿಕೆ, ಸಂಪ್ರದಾಯಗಳಿಗೆ ರಾಜಕೀಯ ಬಣ್ಣ ನೀಡುವುದು ತಪ್ಪು. ರಾಮಮಂದಿರ ನಿರ್ಮಾಣ ಅಭಿಯಾನದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.