ಊಟದ ತಟ್ಟೆಯಿಂದ ತಯಾರಿಸಿದ್ದ ಚಾಕು!; ಸಿಸಿಬಿ ದಾಳಿ ವೇಳೆ ಸೆಂಟ್ರಲ್ ಜೈಲ್​ನಲ್ಲಿ ಪತ್ತೆ

CCB raid
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆಊಟದ ತಟ್ಟೆಯಿಂದ ತಯಾರಿಸಿದ್ದ ಚಾಕು ಮುಂತಾದ ಮಾರಕಾಸ್ತ್ರಗಳು ಈ ವೇಳೆ ಪತ್ತೆಯಾಗಿವೆ.

ಮತದಾನಕ್ಕೆ ಒಂದು ದಿನ ಬಾಕಿ ಇದ್ದು, ಈ ವೇಳೆ ಜೈಲಿನಿಂದ ಕರೆ ಮಾಡಿ ಬೆದರಿಕೆ ಹಾಕುವುದು, ಇಂಥವರಿಗೆ ಮತ ಹಾಕಿ ಎಂದು ಒತ್ತಡ ಹಾಕುವ ಶಂಕೆ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ನೇತೃತ್ವದಲ್ಲಿ ಇಬ್ಬರು ಡಿಸಿಪಿ ಹಾಗೂ ಸಿಸಿಬಿ ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ದಾಳಿ ವೇಳೆ ಮೊಬೈಲ್ ಫೋನ್‌ಗಳು, ಅಲ್ಪ ಪ್ರಮಾಣದ ಡ್ರಗ್ಸ್ ಹಾಗೂ ಊಟದ ಪ್ಲೇಟ್‌ನಿಂದ ತಯಾರಿಸಿದ ಚಾಕುಗಳು ಪತ್ತೆಯಾಗಿದೆ. ಪ್ರಮುಖವಾಗಿ ರೌಡಿಶೀಟರ್‌ಗಳು, ಕೊಲೆ ಆರೋಪಿಗಳು, ಇತರ ಅಪರಾಧ ಹಿನ್ನಲೆಯುಳ್ಳವರನ್ನು ವಿಚಾರಣೆ ಮಾಡಲಾಗಿದ್ದು, ವಿಚಾರಣಾಧೀನ ಕೈದಿಗಳು, ಶಿಕ್ಷೆಗೆ ಒಳಗಾಗಿರುವ ಕೈದಿಗಳ ಬ್ಯಾರಕ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಜೈಲಿನಲ್ಲಿದ್ದುಕೊಂಡೇ ಚುನಾವಣಾ ಅಖಾಡದಲ್ಲಿ ಕಾರ್ಯಾಚರಣೆ ನಡೆಸಿದ್ದ ಹಲವು ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net