ಮಾದರಿ ಕನ್ನಡ ಮಾಧ್ಯಮ ಶಾಲೆ - ಕೈ ಬೀಸಿ ಕರೆಯುತ್ತಿದೆ ಹೆಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

KANNADA MADARI SCHOOL (2)
Published on

ಅವಿನಾಶ್ ಜೈನಹಳ್ಳಿ ಮೈಸೂರು

ಧ್ವನಿವರ್ಧಕ ವ್ಯವಸ್ಥೆ ಮೂಲಕ ಎಲ್ಲ ಕೋಣೆಗಳಲ್ಲೂ ರೇಡಿಯೊ ಪಾಠ ಮೊಳಗುತ್ತಿದೆ, ಸ್ಮಾರ್ಟ್ ಬೋರ್ಡ್ ಮೂಲಕ ಪಾಠ, ಪ್ರವಚನಗಳು ನಡೆಯುತ್ತಿವೆ, ವಿದ್ಯಾರ್ಥಿಗಳು ಸಂಗೀತ ಕಲಿಯುತ್ತಿದ್ದಾರೆ. ಒಂದೇ ಎರಡೇ ಹತ್ತಾರು ಅತ್ಯಾಧುನಿಕ ಸೌಲಭ್ಯಗಳು ಇಲ್ಲಿವೆ.

ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ನಮ್ಮ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಶಾಲೆಯ ಹಳೆಯ ವಿದ್ಯಾರ್ಥಿ ಸಂಘ ಸೇರಿ ಅನೇಕರ ಸಹಕಾರದಿಂದ ಖಾಸಗಿ ಶಾಲೆಯಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. . ನಾಗಣ್ಣ ಮುಖ್ಯಶಿಕ್ಷಕ

ಇದು ಯಾವುದೋ ಪ್ರತಿಷ್ಠಿತ ಖಾಸಗಿ ಶಾಲೆ ಕುರಿತ ವರ್ಣನೆಯಲ್ಲ. ಹೆಬ್ಬಾಳು (ಕುಂಬಾರಕೊಪ್ಪಲು)ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ (ಕನ್ನಡ ಮಾಧ್ಯಮ) ಶಾಲೆಯ ಚಿತ್ರಣ. ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಕ್ಕಳ ಪ್ರಗತಿಗಾಗಿ ಶ್ರಮಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಕನ್ನಡ ಮಾಧ್ಯಮ ಶಾಲೆ ಎಂಬ ಹೆಗ್ಗಳಿಕೆಯೂ ಈ ಶಾಲೆಗಿದೆ.

ಕೆಲವೇ ವರ್ಷಗಳ ಹಿಂದೆ ಅವ್ಯವಸ್ಥೆಯ ಆಗರವಾಗಿದ್ದ ಶಾಲೆಗೆ ಇದೀಗ ಮರುಜೀವ ಬಂದಿದೆ. ಶಾಲೆಯಲ್ಲಿ ಕಲಿತ 30ಕ್ಕೂ ಹೆಚ್ಚಿನ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಲವು ದಾನಿಗಳ ಸೇವೆಯನ್ನು ಶಾಲೆಗೆ ಕೊಡಿಸಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಆರಂಭಗೊಂಡ ಈ ಶಾಲೆಗೆ ಇದೀಗ ಸುಮಾರು 77ರ ಹರೆಯ. 1ರಿಂದ 8ನೇ ತರಗತಿ ಹೊಂದಿರುವ ಶಾಲೆಯಲ್ಲಿ 624 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 16 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

ಶಾಲೆಯಲ್ಲಿ 45 ಕೊಠಡಿಗಳಿವೆ. ಈ ಪೈಕಿ ಹಳೆ ವಿದ್ಯಾರ್ಥಿ ಸಂಘ ವಿವಿಧ ದಾನಿಗಳು, ಜನಪ್ರತಿನಿಧಿಗಳ ಅನುದಾನದಿಂದ 11 ಹೊಸ ಕೊಠಡಿಗಳನ್ನು ನಿರ್ವಿುಸಿದ್ದಾರೆ. ಶೌಚಗೃಹ ಸ್ವಚ್ಛತೆಗೆ ಸಂಘದಿಂದ ಒಬ್ಬ ಪೌರ ಕಾರ್ವಿುಕನನ್ನು ನೇಮಿಸಲಾಗಿದೆ. ಸಂಘದಿಂದಲೇ ಈ ಕಾರ್ವಿುಕನಿಗೆ ತಿಂಗಳಿಗೆ 2 ಸಾವಿರ ರೂ. ವೇತನ ನೀಡಲಾಗುತ್ತಿದೆ. ಈ ಶೌಚಗೃಹಗಳನ್ನು ಈಗ ಹೈಟೆಕ್ ಆಗಿ ಬದಲಾಯಿಸಲು ಸಂಘ ಮುಂದಾಗಿದೆ. ಸಂಘದಿಂದಲೇ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಶಾಲೆಗೆ ಕಲಿಸು ಫೌಂಡೇಷನ್​ನಿಂದ ಗ್ರಂಥಾಲಯ ನೀಡಲಾಗಿದೆ.

ಗ್ರಂಥಾಲಯದಲ್ಲಿ 4 ಸಾವಿರ ಪುಸ್ತಕಗಳಿದ್ದು, ಸ್ಮಾರ್ಟ್ ಕ್ಲಾಸ್ ಕೂಡ ನಿರ್ವಿುಸಲಾಗಿದೆ. ಶಾಲೆ ಅಂಗಳದಲ್ಲಿ ಅಗಸ್ಱ ಇಂಟರ್​ನ್ಯಾಷನಲ್ ಫೌಂಡೇಷನ್ ವತಿಯಿಂದ ಜಿಲ್ಲಾ ಮಟ್ಟದ ವಿಜ್ಞಾನ ಲ್ಯಾಬ್ ನಿರ್ವಿುಸಲಾಗಿದೆ. ಲಕ್ಷ್ಮೀ ರಾದೇಶ್ಯಾಂ ಅವರು ಗಣಕಯಂತ್ರ ಕೊಠಡಿ ನಿರ್ವಿುಸಿದ್ದು, 10 ಕಂಪ್ಯೂಟರ್​ಗಳಿವೆ. ಇನ್ಪೋಸಿಸ್ ಸಂಸ್ಥೆಯಿಂದ ಶಾಲೆಯ ಎಲ್ಲ ಮಕ್ಕಳಿಗೆ ಪ್ರತಿ ವರ್ಷ 10 ನೋಟ್ ಬುಕ್ ನೀಡಲಾಗುತ್ತಿದೆ. ಸ್ಥಳೀಯರು ಕ್ರೀಡಾ ಸಾಮಗ್ರಿ, ಮಕ್ಕಳಿಗೆ ವಸ್ತ್ರಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಶಾಲೆಯ ಹಳೇ ವಿದ್ಯಾರ್ಥಿ ಸಂಘ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಜಿನಿಯರ್, ಡಾಕ್ಟರ್, ಶಿಕ್ಷಕರು, ರಾಜಕೀಯ ನಾಯಕರು ಇತರ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮಾಜಿ ಶಾಸಕ ಡಿ.ಮಾದೇಗೌಡ ಈ ಶಾಲೆಯ ವಿದ್ಯಾರ್ಥಿ.

78 ವಿದ್ಯಾರ್ಥಿಗಳು ದಾಖಲು

ಶಾಲಾ ಕಟ್ಟಡದ ಆವರಣ ಗೋಡೆಗಳು ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದೆ. ಶುಚಿತ್ವದಿಂದ ಕೂಡಿದ ಶಾಲೆ ಪರಿಸರ ಮಕ್ಕಳನ್ನು ಶಾಲೆಯತ್ತ ಕೈ ಬೀಸಿ ಕರೆಯುತ್ತಿದೆ. ಪ್ರತಿಯೊಂದು ತರಗತಿಯಲ್ಲಿಯೂ ಪ್ರತಿದಿನ ಶೇ.90 ಮಕ್ಕಳ ಹಾಜರಾತಿ ಇದ್ದು, ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಬಹುಮಾನ ಗಳಿಸಿದ್ದಾರೆ. ಆರ್​ಬಿಐನಿಂದ 10 ಲಕ್ಷ ರೂ. ನೀಡಲಾಗಿದ್ದು, ಶಾಲೆಗೆ ಟೈಲ್ಸ್ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷವೆಂದರೆ, ಈ ವರ್ಷ ಶಾಲೆಯ ವಿವಿಧ ತರಗತಿಗಳಿಗೆ ಖಾಸಗಿ ಶಾಲೆಗಳ 78 ವಿದ್ಯಾರ್ಥಿಗಳು ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net