ಗಂಡ-ಹೆಂಡಿರ ಬೇರೆ ಮಾಡಿ ತಾನು ಅಕ್ರಮ ಸಂಬಂಧ ಹೊಂದಿದ ಪೊಲೀಸ್; ನೇಣು ಹಾಕಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆ, ಕಾನ್​ಸ್ಟೆಬಲ್ ಪರಾರಿ..

Police
Published on

ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿರುವ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪೊಲೀಸ್ ಕಾನ್​ಸ್ಟೆಬಲ್​ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಮಾರಮ್ಮ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಪೇದೆ ಜತೆ ಅಕ್ರಮ ಸಂಬಂಧ ಹೊಂದಿದ್ದಳೆನ್ನಲಾದ ವಿವಾಹಿತೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಅನಂತ ಕುಮಾರ್ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ಸಾವಿಗೀಡಾಗಿರುವ ವಿವಾಹಿತೆಯ ಪಾಲಕರು ಅನಂತಕುಮಾರ್ ವಿರುದ್ಧ ದೂರು ನೀಡಿದ್ದು, ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಡ-ಹೆಂಡಿರ ಪೇದೆ ಜಗಳ ತಂದಿಟ್ಟು, ಅದರ ದುರ್ಲಾಭ ಪಡೆದು ಅಕ್ರಮ ಸಂಬಂಧ ಹೊಂದಿದ್ದ, ನಂತರ ಇವರಿಬ್ಬರ ನಡುವೆಯೂ ಜಗಳ ನಡೆದು ಈ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಹಣದ ಆಮಿಷವೊಡ್ಡಿ ವಿವಾಹಿತೆಯನ್ನು ಗಂಡನಿಂದ ದೂರ ಮಾಡಿದ್ದ ಪೇದೆ, ಜೀವಬೆದರಿಕೆಯನ್ನೂ ಒಡ್ಡಿದ್ದ ಎಂಬ ಆರೋಪವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net