ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್ ಮಾಡಿ ಪರಾರಿ

ಬೆಂಗಳೂರು: ಇದೊಂದು ಪಕ್ಕಾ ‘ಗಂಡಾಗುಂಡಿ’ ಕೇಸ್​. ಮಹಿಳೆಯೊಬ್ಬಳು ಗಂಡನನ್ನು ಕೊಲೆ ಮಾಡಿದ್ದಲ್ಲದೆ ಗುಂಡಿ ತೋಡಿ ಶವ ಹೂತಿಟ್ಟು ಪರಾರಿಯಾಗಿದ್ದಾಳೆ. ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಇಂಥದ್ದೊಂದು ಕೊಲೆ ನಡೆದಿದೆ.

ಬೆಂಗಳೂರಿನ ಕಿತ್ತಗನೂರು ಸಮೀಪದ ಹಳೇಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಪ್ರೇಮ್ ಬದ್ವಾಲ್ ಎಂಬಾತ ಕೊಲೆಗೀಡಾದ ಪತಿ. ಪತ್ನಿ ಶೋಭಾ ಬದ್ವಾಲ್​ ಕೊಲೆ ಆರೋಪಿ. ಈಕೆ ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್​ ಮಾಡಿ ಪರಾರಿಯಾಗಿದ್ದಳು.

ಇದನ್ನೂ ಓದಿ: ಆಟ ಆಡ್ತ ಆಡ್ತ ಕರೆಂಟ್ ಶಾಕ್​ ಹೊಡೆದು ಸಾವಿಗೀಡಾದ ಬಾಲಕ; ಟ್ರಾನ್ಸ್​​ಫಾರ್ಮರ್ ಕೆಳಗೆ ಬಿದ್ದಿತ್ತು ಪವರ್​ಫುಲ್​ ತಂತಿ..

ಕಳೆದ ವಾರ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ನಿನ್ನೆ ರಾತ್ರಿ ವಾಸನೆ ಬರುತ್ತಿದ್ದಂತೆ ಸ್ಥಳೀಯರು ಆವಲಹಳ್ಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಅವನನ್ನು ಲವ್​ ಮಾಡ್ಬೇಡ ಅಂದ್ರೂ ಕೇಳದ ಮಗಳನ್ನು ಕೊಲೆ ಮಾಡಿದ ಅಪ್ಪ; ವೇಲ್​​ನಿಂದ ಕತ್ತು ಸುತ್ತಿ ಸಾಯಿಸಿದ..

ಪತಿ-ಪತ್ನಿ ಮಧ್ಯೆ ಯಾವುದೋ ವಿಚಾರಕ್ಕೆ ಗಲಾಟೆ ಆಗಿರುವ ಸಾಧ್ಯತೆ ಇದ್ದು, ಬಳಿಕ ಆಕೆ ಕೊಲೆ ಮಾಡಿ ಹೂತು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇವರಿಬ್ಬರೂ ನೇಪಾಳ ಮೂಲದವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

Share This Article

Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್‌ ಗ್ಯಾರೆಂಟಿ

ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…

Salt Benefits | ಒಂದು ತಿಂಗಳು ಉಪ್ಪು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ರೆ ತೂಕ ನಷ್ಟ ಪಕ್ಕಾ! ಅಪಾಯವೂ ಖಂಡಿತ

ಬೆಂಗಳೂರು:  ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಗಮನ…

Palmistry: ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದ್ರೆ ನಿಮ್ಮಂಥ ಅದೃಷ್ಟವಂತರು ಯಾರೂ ಇಲ್ಲ! ಹಣ ನಿಮ್ಮನ್ನು ಹುಡುಕಿ ಬರುತ್ತೆ

ಅನೇಕ ಜನರು ತಮ್ಮ ಭವಿಷ್ಯ (prediction)ವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ…