ಗೋಹತ್ಯೆ ನಿಷೇಧ ಕಾಯ್ದೆಗೆ ಸಿದ್ದಲಿಂಗ ಶ್ರೀಗಳ ಸ್ವಾಗತ

siddalinga swamiji
Published on

ತುಮಕೂರು: ರಾಜ್ಯ ಸರ್ಕಾರ ಅಂಗೀಕರಿಸಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸ್ವಾಗತಿಸಿದರು.

ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಈಗಾಗಲೇ ಅನೇಕ ರಾಜ್ಯಗಳು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿವೆ. ಅದನ್ನೆಲ್ಲ ಪರಿಶೀಲಿಸಿ ನಮ್ಮ ರಾಜ್ಯದಲ್ಲೂ ದೊಡ್ಡ ಅಭಿಲಾಷೆ ಇಟ್ಟುಕೊಂಡು ಗೋಹತ್ಯೆ ನಿಷೇಧ ಮಾಡಿದ್ದಾರೆ ಎಂದರು.

ಗೋಹತ್ಯೆಯನ್ನು ಸರ್ಕಾರ ನಿಷೇಧ ಮಾಡಿದೆ ಅನ್ನುವುದಕ್ಕಿಂತ ಪ್ರತಿಯೊಬ್ಬ ರೈತರೂ ಜಾಗೃತರಾಗಬೇಕು. ಗೋವನ್ನ ನಮ್ಮ ಮನೆಯ ಸದಸ್ಯ ಅಂತ ಭಾವಿಸಿ ಸಂರಕ್ಷಿಸಬೇಕು. ಒಂದು ದುಃಖಕರ ಸಂಗತಿ ಅಂದ್ರೆ ಹಸುವನ್ನು ಚೆನ್ನಾಗಿರುವವರೆಗೂ ದುಡಿಸಿಕೊಂಡು ಅದರಿಂದ ಪ್ರಯೋಜನ ಪಡೆದುಕೊಂಡು ಅದು ಕೊನೆಗಾಲದಲ್ಲಿ ನಿಶ್ಯಕ್ತಿ ಆದಾಗ ಅದನ್ನು ವಿಲೇವಾರಿ ಮಾಡೋದು ತುಂಬಾ ನೋವಿನ ಸಂಗತಿ. ಇಂತಹ ಸಂಸ್ಕೃತಿ ಹೋಗಬೇಕಿದೆ ಎಂದು ಹೇಳಿದರು.

ರೈತರು ಮೊದಲು ಈ ನಿಟ್ಟಿನಲ್ಲಿ ಜಾಗೃತರಾಗಬೇಕು. ಕೇವಲ ಕಾನೂನು ಜಾರಿಯಿಂದ ಏನೂ ಆಗಲ್ಲ. ಹಿಂದಿನಿಂದಲೂ ಗೋವುಗಳು ನಮ್ಮ ಸಂಪತ್ತು ಎಂದು ಭಾವಿಸಿಕೊಂಡು ಬಂದಿದ್ದೀವಿ. ಅಷ್ಟೇ ಅಲ್ಲ ಗೋವಿನಿಂದ ಉತ್ಪತ್ತಿಯಾಗೋ ಪಂಚಗವ್ಯಗಳು ಕೂಡ ಪವಿತ್ರವಾದದ್ದು ಎಂದು ಶ್ರೀಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net