More

    ವಿಧಾನಪರಿಷತ್​ನಲ್ಲಿ ಮಂಡನೆ ಆಗಲಿಲ್ಲ ಗೋಹತ್ಯೆ ನಿಷೇಧ ಮಸೂದೆ! ಕಾರಣ ಇಲ್ಲಿದೆ

    ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ಪ್ರತಿಪಕ್ಷಗಳ ಗದ್ದಲ, ಧರಣಿ, ಸಭಾತ್ಯಾಗದ ನಡುವೆಯೂ ಗೋಹತ್ಯೆ ನಿಷೇಧಿಸುವ ಮಸೂದೆಗೆ ಅನುಮೋದನೆ ಸಿಕ್ಕಿದ್ದು, ಪರಿಷತ್​ನಲ್ಲಿ ಈ ಮಸೂದೆ ಗುರುವಾರ ಅಂಗೀಕಾರವಾಗಿಲ್ಲ!

    ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸುವ ಕಠಿಣ ನಿಯಮಗಳನ್ನು ಒಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಆದರೆ, ವಿಧಾನಪರಿಷತ್​ನಲ್ಲಿ ಈ ಮಸೂದೆ ಗುರುವಾರ ಮಂಡನೆಯಾಗಲಿಲ್ಲ. ಮಸೂದೆಗೆ ಸಂಬಂಧಪಟ್ಟ ಸಚಿವರು ಇಲ್ಲ. ಹಾಗಾಗಿ ನಾಳೆ (ಶುಕ್ರವಾರ) ಮಂಡನೆ ಮಾಡುವುದಾಗಿ ಸಭಾಪತಿಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು‌. ಬಿಜೆಪಿ ಅಜೆಂಡಾದಲ್ಲಿ ಗೋಹತ್ಯೆ ವಿಧೇಯಕ ಇದೆ, ಹಾಗಾಗಿ ಮಂಡನೆ ಮಾಡಿ ಎಂದು ಕಾಂಗ್ರೆಸ್ ಒತ್ತಾಯಿಸಿತ್ತಾದರೂ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

    ವಿಧಾನಸಭೆಯಲ್ಲಿ ಬುಧವಾರ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರಗೊಂಡಿತ್ತು. ಗುರುವಾರ ವಿಧಾನಪರಿಷತ್‌ನಲ್ಲಿ ಮಂಡನೆ ಆಗಬೇಕಿತ್ತು. ಆದರೆ, ಇಂದು(ಗುರುವಾರ) ಮಸೂದೆ ಮಂಡಿಸಿದರೆ ಬಿಲ್ ಬಿದ್ದು ಹೋಗುವ ಆತಂಕ ಇತ್ತು. ಮಸೂದೆ ಮಂಡನೆ ಮಾಡಿದರೆ ಸಭಾಪತಿಯು ಜಂಟಿ ಸದನ ಸಮಿತಿಗೆ ವಹಿಸುವ ಆತಂಕ ಬಿಜೆಪಿಗಿತ್ತು. ಒಂದು ವೇಳೆ ಜಂಟಿ ಸದನ ಸಮಿತಿಗೆ ವಹಿಸಿದರೆ, ಮತ್ತೆ 6 ತಿಂಗಳು ಮುಂದೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಗೋ ಹತ್ಯೆ ಮಸೂದೆಯನ್ನು ಪರಿಷತ್​ನಲ್ಲಿ ಮಂಡಿಸಲಿಲ್ಲ. ಇನ್ನು ಪರಿಷತ್​ನಲ್ಲಿ ಬಿಲ್ ಮಂಡನೆ ಮಾಡಿದ್ದರೆ ಜೆಡಿಎಸ್ ಇಕ್ಕಟ್ಟಿಗೆ ಸಿಲುಕಬೇಕಿತ್ತು. ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ವಿಧೇಯಕ ಜಾರಿಗೆ ತರುವ ಚಿಂತನೆಯನ್ನು ಆಡಳಿತ ಪಕ್ಷ ಮಾಡಿದೆ ಎಂದು ತಿಳಿದುಬಂದಿದೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ನಮ್ಮ ಮಾಹಿತಿ ಪ್ರಕಾರ ಪರಿಷತ್​ನಲ್ಲಿ ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಸಿಗದಂತೆ ಮಾಡಲು ವಿಪಕ್ಷಗಳು ಯೋಚಿಸಿದ್ದವು. ನಾವು ಅವರಿಗಿಂತ ಚಾಣಾಕ್ಷರಿದ್ದೇವೆ. ಗೋಹತ್ಯೆ ನಿಷೇಧ ಕಾಯ್ದೆ ಏನಾಗುತ್ತೆ? ಎಂದು ಮುಂದಿನ ಕ್ಯಾಬಿನೆಟ್​ವರೆಗೂ ಕಾದು ನೋಡಿ ಎಂದರು.

    ಗೋಹತ್ಯೆ ನಿಷೇಧ ವಿಧೇಯಕ ಪಾಸ್​: 5 ಲಕ್ಷ ರೂ. ದಂಡ, 7 ವರ್ಷ ಜೈಲು ಶಿಕ್ಷೆಗೆ ಅವಕಾಶ

    ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

    ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts