ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

wedding
Published on

ಮೈಸೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಇಂದು(ಬುಧವಾರ) ಮದುವೆ ಸಡಗರ ಮೇಳೈಸುತ್ತಿತ್ತು. ಆದರೆ, ಹಸಮಣೆ ಏರಬೇಕಿದ್ದ ವರ ಮದುವೆಗೂ ಎರಡು ದಿನ ಮೊದಲೇ ವಧುವಿಗೆ ಕೈಕೊಟ್ಟು ಪ್ರೇಯಸಿ ಜತೆ ಪರಾರಿಯಾಗಿದ್ದು, ವಧುವಿನ ಮನೆಯವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಈ ಘಟನೆ ಮೈಸೂರಿನ ಸುಣ್ಣದಕೇರಿಯ ಉಮೇಶ್ ಜತೆ ಕೆ.ಆರ್. ಮೊಹಲ್ಲಾದ ಯುವತಿಯ ಮದುವೆಯನ್ನು ಎರಡೂ ಕುಟುಂಬದ ಹಿರಿಯರು ನಿಶ್ಚಯಿಸಿದ್ದರು. ಬುಧವಾರ ಮದುವೆ ನೆರವೇರಬೇಕಿತ್ತು. ಆದರೆ, ಮತ್ತೊಬ್ಬಳನ್ನು ಪ್ರೀತಿಸುತ್ತಿದ್ದ ವರನು ಆಕೆಯೊಂದಿಗೆ ಸೋಮವಾರವೇ ಎಸ್ಕೇಪ್​ ಆಗಿದ್ದ. ಕಂಗಾಲಾದ ಕುಟುಂಬಸ್ಥರು ಮದುವೆಯನ್ನು ರದ್ದು ಮಾಡಿದ್ದರು.

ವಧುವಿನ ಪೋಷಕರು ಉಮೇಶ್​ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಷ್ಟರಲ್ಲಿ ಮತ್ತೆ ವಾಪಸ್​ ಬಂದ ಉಮೇಶ್, ತನ್ನ ಪ್ರೇಯಸಿಗೆ ಕೆ.ಆರ್. ಪೊಲೀಸ್ ಠಾಣೆ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದಾನೆ.

ಉಮೇಶ್​ಗೆ ಪ್ರೇಯಸಿ ಇದ್ದರೂ ಆತ ಮತ್ತೊಬ್ಬ ಯುವತಿ ಜತೆಗೆ ಮದುವೆ ಎಂಗೇಜ್ಮೆಂಟ್​ ಕೂಡ ಮಾಡಿಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net