

ವಿಜಯಪುರ: ತತ್ಕಾಲ್ ಫೋಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಸರ್ವೆಯರ್ ಹಾಗೂ ಓರ್ವ ಖಾಸಗಿ ಸಹಾಯಕ ಶುಕ್ರವಾರ ರಾತ್ರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸರ್ವೆಯರ್ ಮಲ್ಲಪ್ಪ ಜಂಬಗಿ ಹಾಗೂ ಈತನಿಗೆ ಸಹಾಯಕನಾಗಿದ್ದ ಖಾಸಗಿ ವ್ಯಕ್ತಿ ಗುರುದತ್ತ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದವರು.
ನಾಲ್ಕು ಎಕರೆ ಜಮೀನಿನ ತತ್ಕಾಲ್ ಫೋಡಿ ಮಾಡಲು ಪ್ರಕಾಶ ಸಿಂಗೆ ಎಂಬುವರ ಬಳಿ 47,500 ರೂ.ಗಳಿಗೆ ಸರ್ವೇಯರ್ ಮಲ್ಲಪ್ಪ ಹಾಗೂ ಗುರುದತ್ತ ಬೇಡಿಕೆ ಇರಿಸಿದ್ದರು. ಇದರಿಂದ ಬೇಸತ್ತ ಪ್ರಕಾಶ ಸಿಂಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲೋಕಾಯುಕ್ತ ಎಸ್‌ಪಿ ಮಲ್ಲೇಶ, ಡಿಎಸ್‌ಪಿ ಸುರೇಶ ರೆಡ್ಡಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಿಪಿಐ ಆನಂದ ಟಕ್ಕನವರ, ಆನಂದ ದೋಣಿ ನೇತೃತ್ವದ ತಂಡ ಲಂಚಕೋರರನ್ನು ಬಂಧಿಸುವಲ್ಲಿ ಸಫಲವಾಗಿದೆ.