

ಬೆಂಗಳೂರು: ಡೇಟಿಂಗ್ ವೆಬ್ಸೈಟ್ ಮೂಲಕ ಸಾಫ್ಟ್ವೇರ್ ಇಂಜಿನಿಯರ್ವೊಬ್ಬನಿಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿದ ಯುವತಿಯರು ಬೆತ್ತಲೆ ದೃಶ್ಯ ತೋರಿಸಿದರು. ಬಳಿಕ ಯುವತಿಯರ ಮಾತು ನಂಬಿ ಆತನೂ ಬಟ್ಟೆ ಬಿಚ್ಚಿ ಬರೋಬ್ಬರಿ 16 ಲಕ್ಷ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ.
ಈ ಸಂಬಂಧ ವೈಟ್ಫೀಲ್ಡ್ನ ಅಪಾರ್ಟ್ಮೆಂಟ್ನಲ್ಲಿ ನೆಲೆಸಿರುವ 27 ವರ್ಷದ ಟೆಕ್ಕಿ ದೂರು ನೀಡಿದ್ದಾರೆ. ಡಿ.3ರಂದು ಟೆಕ್ಕಿ, ಡೇಟಿಂಗ್ ವೆಬ್ಸೈಟ್ನಲ್ಲಿ ನೋಡುತ್ತಿದ್ದಾಗ ಶ್ವೇತಾ ಎಂಬಾಕೆ ಪರಿಚಯವಾಗಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು "ನಮ್ಮ ಸೇವೆ ಬೇಕಾದರೆ ಮೊದಲಿಗೆ 2 ಸಾವಿರ ರೂ. ಆನ್ಲೈನ್ನಲ್ಲಿ ಪಾವತಿಸುವಂತೆ' ಸೂಚಿಸಿದ್ದಾರೆ. ಅದಕ್ಕೆ ಒಪ್ಪಿದ ಟೆಕ್ಕಿ, ಆನ್ಲೈನ್ನಲ್ಲಿ 2 ಸಾವಿರ ರೂ. ವರ್ಗಾವಣೆ ಮಾಡಿದ್ದಾನೆ. ಆನಂತರ ಶ್ವೇತಾ ಕರೆ ಮಾಡಿ ನಿಕಿತಾ ಎಂಬಾಕೆಯ ಮೊಬೈಲ್ ನಂಬರ್ ಕೊಟ್ಟು ಈಕೆ ನಿಮ್ಮ ಸೇವೆಗೆ ಬರುತ್ತಾಳೆ ಎಂದಿದ್ದಾಳೆ. ಇದಾದ ಕೆಲವೇ ನಿಮಿಷಗಳಲ್ಲಿ ನಿಕಿತಾ ಕರೆ ಮಾಡಿ ಸಂಭಾಷಣೆ ನಡೆಸಿದ್ದಾಳೆ. ಸಲುಗೆಯಿಂದ ಮಾತುಕತೆ ಶುರು ಮಾಡಿದ ಯುವತಿಯರು ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದಾರೆ.
ಅದನ್ನೇ ಕಾಯುತ್ತಿದ್ದ ಟೆಕ್ಕಿ, ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿದಾಗ ಮೊದಲು ಯುವತಿಯರು ಬೆತ್ತಲೆ ದೃಶ್ಯ ತೋರಿಸಿ ಪ್ರಚೋದನೆ ಮಾಡಿದ್ದಾರೆ. ಆನಂತರ ಟೆಕ್ಕಿಗೆ 'ನೀನೂ ಬಟ್ಟೆ ಬಿಚ್ಚು' ಎಂದೇಳಿ ಬಿಚ್ಚಿಸಿ ವಿಡಿಯೋ ರೆಕಾರ್ಡ್ ಮತ್ತು ಸ್ಕ್ರೀನ್ ಶಾರ್ಟ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿರಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?
ಬಳಿಕ ವಿಡಿಯೋ ಕಾಲ್ ಕಟ್ ಮಾಡಿದ ಯುವತಿಯರು ಟೆಕ್ಕಿ ವಾಟ್ಸ್ಆ್ಯಪ್ಗೆ ಅಶ್ಲೀಲ ವಿಡಿಯೋ ಮತ್ತು ಫೋಟೋ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದಾರೆ. 'ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡದಿದ್ದರೆ ನಿನ್ನ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡುತ್ತೇವೆ' ಎಂದು ಬೆದರಿಸಿದ್ದಾಳೆ. ಬೇರೆ ದಾರಿ ಕಾಣದ ಟೆಕ್ಕಿ, ತಕ್ಷಣ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಿದ್ದಾನೆ. ಮತ್ತೆ ಅದೇ ಡೇಟಿಂಗ್ ವೆಬ್ಸೈಟ್ನಿಂದ ಪ್ರೀತಿ ಅಗರ್ವಾಲ್ ಮತ್ತು ಶೇರಿನ್ ಎಂಬುವರು ಕರೆ ಮಾಡಿ ಟೆಕ್ಕಿಯ ಅಶ್ಲೀಲ ವಿಡಿಯೋವನ್ನು ಕಳುಹಿಸಿ ಹಣ ಸುಲಿಗೆಗೆ ಇಳಿದಿದ್ದಾರೆ. ಇದನ್ನೂ ಓದಿರಿರೇಣುಕಾಚಾರ್ಯರನ್ನು ಅಟ್ಟಾಡಿಸಿದ್ದ ಕೋತಿಗೆ ತ್ಯಾವರೆಕೊಪ್ಪದಲ್ಲಿ ಸಿಕ್ತು ಸಂಗಾತಿ!
ಹಂತ ಹಂತವಾಗಿ ಪಂಜಾಬ್ ನ್ಯಾಷನಲ್ ಬ್ಯಾಕ್, ಎಚ್ಡಿಎಫ್ಸಿಸಿ ಬ್ಯಾಂಕ್, ಎಸ್ಬಿಐ ಬ್ಯಾಂಕ್ ಖಾತೆಗಳಿಗೆ ಕೇವಲ 10 ದಿನಗಳಲ್ಲಿ 16 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ. ಇಷ್ಟಾದರೂ ಬಿಡದೆ ಮತ್ತೆ ಮತ್ತೆ ಹಣ ಕೇಳಿದಾಗ ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡಿದ್ದ ಟೆಕ್ಕಿ ದಿಕ್ಕು ತೋಚದೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಆರೋಪಿಗಳಾದ ಶೇರಿನ್, ಶ್ವೇತಾ, ಪ್ರೀತಿ ಅಗರ್ವಾಲ್ ಮತ್ತು ನಿಖಿತಾ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಮೊಬೈಲ್ ನಂಬರ್ ಆಧರಿಸಿ ತನಿಖೆ ಕೈಗೊಳ್ಳಲಾಗಿದೆ.