More

    ಹೊಸಕೋಟೆ ಟಿಎಚ್​ಒ ನಾಪತ್ತೆ ಪ್ರಕರಣದ ಹಿಂದೆ ಎಂಟಿಬಿ ಆಪ್ತನ ಕೈವಾಡ?

    ಹೊಸಕೋಟೆ: ತಾಲೂಕು ವೈದ್ಯಾಧಿಕಾರಿ ಮಂಜುನಾಥ್ ನಾಪತ್ತೆಯಾಗಿದ್ದು, ಅವರನ್ನ ಪತ್ತೆ ಹಚ್ಚಲು ಪೊಲೀಸ್​ ಪಡೆ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದೆ.

    ಟಿಎಚ್ಒ ನಾಪತ್ತೆ ಪ್ರಕರಣ ಸಂಬಂಧ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ರವಿ ಡಿ. ಚನ್ನಣ್ಣನವರ್, ಡಿಸೆಂಬರ್​ 15ರ ಸಂಜೆಯಿಂದ ಆರೋಗ್ಯಾಧಿಕಾರಿ ಮಂಜುನಾಥ್​ರ ಫೋನ್ ಸ್ವಿಚ್ಡ್​ ಆಪ್​​ ಹಾಗಿದೆ. ಟಿಎಚ್ಒ ನಾಪತ್ತೆ ಬಗ್ಗೆ ಅವರ ಸಂಬಂಧಿ ನಾಗೇಶ್ ಎಂಬುವರು ಬುಧವಾರ ದೂರು ನೀಡಿದ್ದಾರೆ. ಆರೋಗ್ಯಾಧಿಕಾರಿಯನ್ನು ಪತ್ತೆ ಹಚ್ಚಲು ಹತ್ತು ತಂಡ ರಚಿಸಿದ್ದೇವೆ. ಕ್ಲಿನಿಕ್​ಗಳ ದಾಳಿ ಸಂಬಂಧ ಟಿಎಚ್​ಒಗೆ ಬೆದರಿಕೆ ಹಾಕಿದ್ದ ಎನ್ನಲಾದ ಜಯರಾಜ್ ಎಂಬಾತನನ್ನು ವಿಚಾರಣೆ ಮಾಡಲಾಗಿದೆ ಎಂದು ಹೇಳಿದರು.

    ಇನ್ನು ಟಿಎಚ್​ಒ ನಾಪತ್ತೆ ಕೇಸ್​ ಬಗ್ಗೆ ‘ದಿಗ್ವಿಜಯ ನ್ಯೂಸ್​’ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಡಿಸೆಂಬರ್​ 9ರಂದು ಆಯುರ್ವೇದ ಸುಜಾತ ಕ್ಲಿನಿಕ್ ಮೇಲೆ ಟಿಎಚ್​ಒ ನೇತೃತ್ವದ ತಂಡ ದಾಳಿ ನಡೆಸಿತ್ತು. ಡಿ.11 ರಂದು ಈ ಬಗ್ಗೆ ಟಿಎಚ್ಒ ಮಾಹಿತಿ ನೀಡಿದ್ದರು. ಆಯುರ್ವೇದ ಆಸ್ಪತ್ರೆಯಲ್ಲಿ ಸಂಗ್ರಹಿಸಿದ್ದ 10 ಲಕ್ಷ ಮೌಲ್ಯದ ಅಲೋಪಥಿ ಔಷಧವನ್ನು ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದರು. ಇದೀಗ ಟಿಎಚ್​ಒ ನಾಪತ್ತೆ ಯಾಗಿದ್ದಾರೆ. ಅವರು ಸಿಕ್ಕ ನಂತರ ಕಾರಣ ಸ್ಪಷ್ಟವಾಗಲಿದೆ ಎಂದರು.

    ಇನ್ನು ನಕಲಿ ಕ್ಲಿನಿಕ್​ ಮೇಲೆ ದಾಳಿ ಮಾಡಿದ್ದ ಟಿಎಚ್​ಒಗೆ ಬೆದರಿಕೆ ಹಾಕಿದ್ದ ಜಯರಾಜ್ ಎಂಬಾತ ಎಂಟಿಬಿ ನಾಗರಾಜ್​ರ ಆಪ್ತ. ಟಿಎಚ್​ಒಗೆ ಜಯರಾಜ್​ ಬೆದರಿಕೆ ಹಾಕಿರೋ ಆಡಿಯೋ ವೈರಲ್​ ಆಗಿದೆ.

    ನಿನ್ನ ಜತೆಗಿನ ಅಕ್ರಮ ಸಂಬಂಧ ಮುರಿದುಕೊಳ್ಳಲು ನಾ ಒಲ್ಲೆ… ಎನ್ನುತ್ತಲೇ ಪ್ರಿಯಕರನ ಜತೆಗೂಡಿ ಏನು ಮಾಡಿದ್ಲು ಗೊತ್ತಾ?

    ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದವ ಪಂಚಾಯಿತಿ ಆವರಣದಲ್ಲೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts