ನಾಪತ್ತೆಯಾಗಿದ್ದ ತಾಯಿ-ಮಗಳು ನಾಲೆಯಲ್ಲಿ ಶವವಾಗಿ ಪತ್ತೆ!

suicide 1
Published on

ಮಂಡ್ಯ: ನನ್ನ ಪತ್ನಿ ಮತ್ತು ಮಗಳು ನಾಪತ್ತೆಯಾಗಿದ್ದಾರೆ, ಹುಡುಕಿಕೊಡಿ ಎಂದು ಆಕೆಯ ಗಂಡ ಪೊಲೀಸ್​ ಠಾಣೆ ಮೆಟ್ಟಿಲೇರಿದ ಎರಡು ದಿನದ ಬಳಿಕ ಅವರಿಬ್ಬರ ಶವ ನಾಲೆಯಲ್ಲಿ ಪತ್ತೆಯಾಗಿದೆ.

ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ತಾಯಿ ಸಲೀಮಾ (36) ಮತ್ತು ಮಗಳು ಸಬಾನ (17) ಮೃತರು.

ಹೆಂಡತಿ ಮತ್ತು ಮಗಳು ಕಾಣೆಯಾದ ಬಗ್ಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಡಿ.14ರ ರಾತ್ರಿ ಸಲೀಮಾಳ ಪತಿ ಪ್ರಕರಣ ದಾಖಲಿಸಿದ್ದರು. ನಾಗಮಂಗಲ ತಾಲೂಕಿನ ಗಂಗವಾಡಿ ಸಮೀಪದ ನಾಲೆಯಲ್ಲಿ ಬುಧವಾರ ಮೃತ ದೇಹಗಳು ಪತ್ತೆಯಾಗಿವೆ.

ಕೌಟುಂಬಿಕ ಕಲಹಕ್ಕೆ ಮನನೊಂದು ಅವರಿಬ್ಬರೂ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ನ್ಯಾಮನಹಳ್ಳಿ ಸಮೀಪದ ನಾಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net