ಗ್ರಾ.ಪಂ.ಗೆ ಪತ್ನಿ ಅವಿರೋಧ ಆಯ್ಕೆ, ಸಂಭ್ರಮದಲ್ಲಿದ್ದ ಪತಿ ಮರುದಿನವೇ ಆತ್ಮಹತ್ಯೆ! ಕಾರಣ ಏನು?

suicide
Published on

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿ ಅವಿರೋಧ ಆಯ್ಕೆಯಾದ ಖುಷಿಯಲ್ಲಿದ್ದ ಪತಿ, ಸ್ನೇಹಿತರಿಗೂ ಪಾರ್ಟಿ ಕೊಡಿಸಿ ಸಂಭ್ರಮಿಸಿದ್ದ. ಇದಕ್ಕೂ ಮುನ್ನ ಮುಖಂಡರ ಜೊತೆಗೂಡಿ ಪತ್ನಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ್ದ. ಇದೀಗ ಗೆಲುವಿನ ಖುಷಿಯಲ್ಲಿದ್ದ ಮನೆಯಲ್ಲೀಗ ಶೋಕ ಮಡುಗಟ್ಟಿದೆ.

ಹೌದು, ನೂತನ ಗ್ರಾಪಂ ಸದಸ್ಯೆ ಪತಿ ಮಂಗಳವಾರ ತಡರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆ ಕೂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರಾಯಪೇಟೆಯಲ್ಲಿ ಸಂಭವಿಸಿದೆ.

ದೊಡ್ಡರಾಯಪೇಟೆಯ 2ನೇ ವಾರ್ಡ್​ಗೆ ಪರಿಶಿಷ್ಟ ವರ್ಗ ಮಹಿಳಾ ಮೀಸಲು ಕ್ಷೇತ್ರದಿಂದ ಗಗನ ಎಂಬುವವರು ಗ್ರಾಪಂ ಸದಸ್ಯರಾಗಿ ಸೋಮವಾರ ಅವಿರೋಧ ಆಯ್ಕೆಯಾದರು. ಇವರ ನಿಂಗರಾಜು(30) ಮಂಗಳವಾರ ತಡರಾತ್ರಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೂ ಮುನ್ನ ಅಂದ್ರೆ ಮಂಗಳವಾರ ರಾತ್ರಿ ಪತ್ನಿ ಗ್ರಾಪಂ ಸದಸ್ಯೆ ಆದ ಖುಷಿಯಲ್ಲಿ ನಿಂಗರಾಜು ತನ್ನ ಸ್ನೇಹಿತರಿಗೆ ಪಾರ್ಟಿ ಕೊಟ್ಟು ಮನೆಗೆ ಬಂದಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಮಕ್ಕಳಾಗಲಿಲ್ಲ ನೊಂದುಕೊಂಡಿದ್ದ ನಿಂಗರಾಜು ಜಿಗುಪ್ಸೆಗೊಂಡು ಸಾವಿನ ಕದಟ್ಟಿದ್ದಾರೆಂದು ತಾಯಿ ಮಹದೇವಮ್ಮ, ಪತ್ನಿ ಗಗನ ಗೋಳಾಡುತ್ತಿದ್ದರು. ಚಾಮರಾಜನಗರ ಪೂರ್ವ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net