ಕಾಂಗ್ರೆಸ್-ಬಿಜೆಪಿಯ ಕೂಸು ಜೆಡಿಎಸ್! ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ...

jds
Published on

ಮೈಸೂರು: ಕಾಂಗ್ರೆಸ್ ಮತ್ತು ಬಿಜೆಪಿಯ ಮಗು ಜೆಡಿಎಸ್. ಮಿಠಾಯಿ ತೋರಿಸಿದವರ ಕಡೆ ಆ ಪಕ್ಷ ಹೋಗುತ್ತೆ ಎಂದು ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಲೇವಡಿ ಮಾಡಿದರು.

ವಿಧಾನ ಪರಿಷತ್​ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್​, ಎಲ್ಲಿ ಮಿಠಾಯಿ ಸಿಗುತ್ತೋ ಅಲ್ಲಿಗೆ ಜೆಡಿಎಸ್​ ಹೋಗುತ್ತೆ. ಪಾಪ ಅದರ ಬಗ್ಗೆ ಏನ್ ಮಾತಾಡೋದು ಬಿಡಿ ಎಂದು ವ್ಯಂಗ್ಯವಾಡಿದರು.

ಪರಿಷತ್‌ನಲ್ಲಿ ಸದಸ್ಯರ ಗೂಂಡಾಗಿರಿ ಕುರಿತು ಮಾತನಾಡಿದ ವಿಶ್ವನಾಥ್​, ಸಾರ್ವಭೌಮತ್ವದ ಹೆಬ್ಬಾಗಿಲು ಪಾರ್ಲಿಮೆಂಟ್‌ಗೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸುತ್ತಾರೆ. ಅಂತಹ ಸಾರ್ವಭೌಮತ್ವದ ಸದನದ ಬಾಗಿಲನ್ನು ಬೂಟು ಕಾಲಲ್ಲಿ ಒದೆಯುತ್ತಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ದೊಡ್ಡದೊಡ್ಡವರೇ ನಿನ್ನೆ ಆ ಗೌರವವನ್ನು ಕೊಚ್ಚಿ ಹಾಕಿದ್ರು.

ಪ್ರತಾಪ್‌ಚಂದ್ರಶೆಟ್ಟಿ ನಾನು ತುಂಬಾ ವರ್ಷಗಳ ಸ್ನೇಹಿತರು. ಬಹಳ ಸ್ವಾಭಿಮಾನಿ‌ ವ್ಯಕ್ತಿ ಪ್ರತಾಪ್‌ಚಂದ್ರಶೆಟ್ಟಿ. ಒಂದು ತಿಂಗಳ‌ ಹಿಂದೆಯೇ ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ರು. ಆದ್ರೆ ನಾವೆಲ್ಲ ಪಕ್ಷದ ನಿಯಂತ್ರಣದಲ್ಲಿದ್ದೀವಿ. ಬಹಳ ನೋವಿನ ಸಂಗತಿ ಇದು. ಇದು ಆಗ್ಬಾರ್ದು. ಈ ಘಟನೆಯಿಂದ ನಾಡಿನ ಜನತೆಗೆ ನೋವಾಗಿದೆ. ನಾಡಿನ ಜನತೆ ಬಳಿ ಕ್ಷಮೆ ಕೋರುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net