VIDEO| ನಾವು ರಾಗಿಮುದ್ದೆ, ಉಪ್ಸಾರು ತಿನ್ನೋರು, ನಮ್ಗೆ ಯಾವ ರೋಗಾನೂ ಇಲ್ಲ... ವೈದ್ಯರಿಗೆ ಅವಾಜ್​ ಹಾಕಿದ ಮಹಿಳೆ

health camp
Published on

ಮೈಸೂರು: ನಾವು ರಾಗಿ ಮುದ್ದೆ, ಸೊಪ್ಪು-ಕಾಳು, ಉಪ್ಸಾರು ತಿನ್ನೋರು. ನಮ್ಗೆ ಯಾವ ರೋಗಾನೂ ಇಲ್ಲ. ನೀವೇನು ನಮ್ಗೆ ಟೆಸ್ಟ್ ಮಾಡಿ ರೋಗ ಕಂಡು ಹಿಡಿಯೋದು ಬೇಡ. ರೋಗ ಬಂದ್ರೆ ನಾವೇ ವಾಸಿ ಮಾಡಿಕೊಳ್ತೀವಿ...

ಇದು ಹುಣಸೂರು ತಾಲೂಕು ಹನಗೋಡು ಸಮೀಪದ ಬೀರತಮ್ಮನಹಳ್ಳಿಯ ಗಿರಿಜನ ಹಾಡಿಯ ಜನರ ಆರೋಗ್ಯ ತಪಾಸಣೆ ಮಾಡಲು ಬಂದ ಅಧಿಕಾರಿಗೆ ಆದಿವಾಸಿ ಮಹಿಳೆ ಧಮ್ಕಿ ಹಾಕಿದ ಪರಿ. ಇದನ್ನೂ ಓದಿರಿ 70 ಹುಲಿಗಳ ಹಂತಕ ‘ಟೈಗರ್​ ಹಬೀಬ್​’ 20 ವರ್ಷದ ಬಳಿಕ ಕೊನೆಗೂ ಸಿಕ್ಕಿಬಿದ್ದ!

'ವೈದ್ಯರ ನಡಿಗೆ ಹಳ್ಳಿ ಕಡೆಗೆ' ಕಾರ್ಯಕ್ರಮದಡಿ ಆರೋಗ್ಯ ತಪಾಸಣೆಗೆ ವೈದ್ಯಾಧಿಕಾರಿಗಳು ಬಂದಿದ್ದರು. ಈ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ಆದಿವಾಸಿ ಮಹಿಳೆ, 'ನೀವು ನಮ್ಮ ಹಾಡಿಗೆ ಕಾಲು ಇಡೋದು ಬೇಡ. ನೀವು ಹಾಡಿಯಿಂದ ಈ ಕೂಡ್ಲೇ ಹೊರಡಿ. ನಮಗೆ ನೀವೇನೂ ಟೆಸ್ಟ್ ಮಾಡೋದು ಬೇಡ, ನಮ್ಗೆ ಏನಾಗಿದೆ, ನಾನು ಈಗ ಚೆನ್ನಾಗಿ ಮಾತಾಡ್ತಿಲ್ವ, ನಾನೇನು ಅತ್ತೋಗಿದ್ದೀನಾ? ಯಾರೋ ಹೇಳಿದ್ರು ಅಂತ ಇಲ್ಲಿಗೆ ಬಂದು ಊರನ್ಯಾಕೆ ಹಾಳು ಮಾಡ್ತೀರಿ..' ಎಂದು ಅವಾಜ್ ಹಾಕಿದ್ದಾರೆ.

ಬೀರತಮ್ಮನಹಳ್ಳಿ ಆದಿವಾಸಿ ಹಾಡಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಪೈಕಿ ಕೇವಲ 7 ಮಂದಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net